ತೆಲುಗಿನಲ್ಲಿ ‘ಪರಮ ಸುಂದರಿ’ ಯಾರು? ನಟಿ ಕೀರ್ತಿ ಸುರೇಶ್​ ಬಗ್ಗೆ ಕೇಳಿಬರುತ್ತಿದೆ ಗುಸುಗುಸು

ತೆಲುಗಿನಲ್ಲಿ ‘ಪರಮ ಸುಂದರಿ’ ಯಾರು? ನಟಿ ಕೀರ್ತಿ ಸುರೇಶ್​ ಬಗ್ಗೆ ಕೇಳಿಬರುತ್ತಿದೆ ಗುಸುಗುಸು
ಕೀರ್ತಿ ಸುರೇಶ್​, ಕೃತಿ ಸನೋನ್​

Param Sundari: ಈಗಾಗಲೇ ಕೀರ್ತಿ ಸುರೇಶ್​ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ ಎಂಬ ಗುಸುಗುಸು ಮಾತು ಟಾಲಿವುಡ್​ ಅಂಗಳಲ್ಲಿ ಹರಿದಾಡುತ್ತಿದೆ.

TV9kannada Web Team

| Edited By: Madan Kumar

Aug 29, 2021 | 9:37 AM

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್​ ಅವರ ಪ್ರತಿಭೆ ಎಂಥದ್ದು ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ‘ಮಹಾನಟಿ’ ಸಿನಿಮಾ ಬಳಿಕ ಅವರ ಖ್ಯಾತಿ ಹೆಚ್ಚಿತು. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ರಜನಿಕಾಂತ್​ ನಾಯಕತ್ವದ ‘ಅಣ್ಣಾತೆ’, ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸೇರಿದಂತೆ ಅನೇಕ ಹೈವೋಲ್ಟೇಜ್​ ಚಿತ್ರಗಳಲ್ಲಿ ಕೀರ್ತಿ ಸುರೇಶ್​ ಅಭಿನಯಿಸುತ್ತಿದ್ದಾರೆ. ಈ ನಡುವೆ ಅವರಿಗೆ ಮತ್ತೊಂದು ಮಸ್ತ್​ ಅವಕಾಶ​ ಬಂದಿದೆ. ಬಾಲಿವುಡ್​ನಲ್ಲಿ ಇತ್ತೀಚೆಗೆ ಸೂಪರ್​ ಹಿಟ್​ ಆಗಿರುವ ‘ಮಿಮಿ’ ಸಿನಿಮಾದ ತೆಲುಗು ರಿಮೇಕ್​ನಲ್ಲಿ ನಾಯಕಿಯಾಗಿ ನಟಿಸುವಂತೆ ಅವರಿಗೆ ಆಫರ್​ ನೀಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಹಿಂದಿಯ ‘ಮಿಮಿ’ ಸಿನಿಮಾದಲ್ಲಿ ಕೃತಿ ಸನೋನ್ ನಟಿಸಿದ್ದಾರೆ. ಬಾಡಿಗೆ ತಾಯಿಯ ಪಾತ್ರದಲ್ಲಿ ಅವರ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ತೆರೆಕಂಡ ಈ ಸಿನಿಮಾಗೆ ಪ್ರೇಕ್ಷಕರು ಮತ್ತು ವಿಮರ್ಶಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಈ ಸಿನಿಮಾದ ‘ಪರಮ ಸುಂದರಿ’ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇಂಥ ಸೂಪರ್​ ಹಿಟ್​ ಸಿನಿಮಾವನ್ನು ತೆಲುಗಿಗೆ ರಿಮೇಕ್​ ಮಾಡಲು ಸಿದ್ಧತೆ ನಡೆಯುತ್ತಿದೆ. ಆ ಚಿತ್ರಕ್ಕೆ ಕೀರ್ತಿ ಸುರೇಶ್​ ನಾಯಕಿ ಆಗುವ ಸಾಧ್ಯತೆ ಇದೆ.

ಈಗಾಗಲೇ ಕೀರ್ತಿ ಸುರೇಶ್​ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ ಎಂಬ ಗುಸುಗುಸು ಮಾತು ಟಾಲಿವುಡ್​ ಅಂಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಕೀರ್ತಿ ಸುರೇಶ್​ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ನಾಯಕಿ ಪ್ರಧಾನ ಕಥೆಗಳಿಗೆ ಕೀರ್ತಿ ಸುರೇಶ್​ ಅವರು ಹೆಚ್ಚು ಸೂಕ್ತ ಆಗುತ್ತಾರೆ. ‘ಮಿಮಿ’ ಕೂಡ ಅಂಥದ್ದೇ ಕಥೆಯನ್ನು ಹೊಂದಿದ್ದು, ಅದರ ರಿಮೇಕ್​ನಲ್ಲಿ ಕೀರ್ತಿ ನಟಿಸಿದರೆ ಉತ್ತಮ ಎಂಬ ಅಭಿಪ್ರಾಯ ಅನೇಕರದ್ದು. ಆದರೆ ಇದು ರಿಮೇಕ್​ ಎಂಬ ಕಾರಣಕ್ಕೆ ಅವರು ಒಪ್ಪಿಕೊಳ್ಳದೇ ಇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಸರ್ಕಾರು ವಾರಿ ಪಾಟ, ಅಣ್ಣಾತೆ ಮಾತ್ರವಲ್ಲದೆ ಮೋಹನ್​ಲಾಲ್​ ನಾಯಕತ್ವದ ಬಹುನಿರೀಕ್ಷಿತ ‘ಮರಕ್ಕರ್​’ ಚಿತ್ರದಲ್ಲೂ ಕೀರ್ತಿ ನಟಿಸಿದ್ದಾರೆ. ಇಂಥ ಸ್ಟಾರ್​ ನಟರ ಜೊತೆ ಮಿಂಚುತ್ತಿರುವ ಅವರು ಆ ಸಿನಿಮಾಗಳು ಬಿಡುಗಡೆ ಆಗಲಿ ಎಂದು ಕಾಯುತ್ತಿದ್ದಾರೆ.

ಇದನ್ನೂ ಓದಿ:

‘ಪರಮ ಸುಂದರಿ’ ಹಾಡಿನಿಂದ ಮಿಂಚುತ್ತಿರುವ ನಟಿ ಕೃತಿ ಸನೋನ್​ ಸಂಭಾವನೆ ಎಷ್ಟು? ಇಲ್ಲಿವೆ ಇಂಟರೆಸ್ಟಿಂಗ್​ ವಿಷಯಗಳು

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಚಿತ್ರದಿಂದ ಹೊರ ನಡೆದ ಕೀರ್ತಿ ಸುರೇಶ್

Follow us on

Related Stories

Most Read Stories

Click on your DTH Provider to Add TV9 Kannada