‘ನೀಚವಾಗಿ ಬೈಯ್ದು, ರಾಜಕೀಯ ಮಾಡುವವರ ಲೆವೆಲ್ಗೆ ರಮ್ಯಾ ಇಳಿಯಲ್ಲ’: ಕವಿತಾ ಲಂಕೇಶ್
‘ರಮ್ಯಾ ಮತ್ತೆ ಸಿನಿಮಾಗೆ ಬರಬೇಕು ಎಂಬ ಆಸೆ ನನಗೂ ಇದೆ. ಅವಳ ವಯಸ್ಸಿಗೆ ತಕ್ಕಂತಹ ಕಥೆ ಸಾಕಷ್ಟಿವೆ. ಅವಳು ಒಪ್ಪಿಕೊಂಡರೆ ಖಂಡಿತಾ ಒಂದು ಕಮರ್ಷಿಯಲ್ ಸಿನಿಮಾ ಮಾಡ್ತೀನಿ’ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.
ನಟಿ ರಮ್ಯಾ ಈಗ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಅವರು ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂಬುದು ಅನೇಕರ ಆಸೆ. ಈ ಬಗ್ಗೆ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿದ್ದಾರೆ. ‘ಅವಳು ಮತ್ತೆ ಸಿನಿಮಾಗೆ ಬರಬೇಕು ಎಂಬ ಆಸೆ ನನಗೂ ಇದೆ. ಅವಳ ವಯಸ್ಸಿಗೆ ತಕ್ಕಂತಹ ಕಥೆ ಸಾಕಷ್ಟಿವೆ. ಅವಳು ಒಪ್ಪಿಕೊಂಡರೆ ಖಂಡಿತಾ ಒಂದು ಕಮರ್ಷಿಯಲ್ ಸಿನಿಮಾ ಮಾಡ್ತೀನಿ. ಅವಳ ಬಗ್ಗೆ ಜನರಿಗೆ ಇನ್ನೂ ಕ್ರೇಜ್ ಹಾಗೆಯೇ ಇದೆ’ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ. ರಾಜಕೀಯ ಪಯಣದಲ್ಲಿ ರಮ್ಯಾ ಎದುರಿಸಿದ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.
‘ಮಹಿಳೆ ಎಂಬ ಕಾರಣಕ್ಕೆ ರಾಜಕೀಯದಲ್ಲಿ ಅವರನ್ನು ಕೆಟ್ಟದಾಗಿ ಟೀಕೆ ಮಾಡಲಾಯಿತು. ಅಪ್ಪನ ಬಗ್ಗೆ ಮಾತನಾಡಲಾಯಿತು. ಅದನ್ನು ಅವಳು ತುಂಬ ಚೆನ್ನಾಗಿ ನಿಭಾಯಿಸುತ್ತಾಳೆ. ಯಾರು ಎಷ್ಟೇ ನೀಚವಾಗಿ ಬೈಯ್ದು, ರಾಜಕೀಯ ಮಾಡಿದರೂ ಆ ಲೆವೆಲ್ಗೆ ಇಳಿದು ರಮ್ಯಾ ಜಗಳ ಮಾಡಿಲ್ಲ. ಅವಳು ಗೌರವದಿಂದಲೇ ನಡೆದುಕೊಂಡಿದ್ದಾಳೆ. ಈಗ ಸಿನಿಮಾ ಬೇಡ ಅಂತ ಬೇರೆ ಕೆಲಸ ಮಾಡಿಕೊಂಡಿದ್ದಾಳೆ. ಖುಷಿಯಾಗಿದ್ದರೆ ತಪ್ಪೇನೂ ಇಲ್ಲ’ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.
ಇದನ್ನೂ ಓದಿ:
ಗ್ಯಾಂಗ್ ರೇಪ್: ಹುಡುಗಿಯದ್ದೇ ತಪ್ಪು ಅನ್ನೋರಿಗೆ ರಮ್ಯಾ ಛೀಮಾರಿ; ಪರಿಸ್ಥಿತಿ ಬದಲಾಗ್ಬೇಕು ಎಂದ ನಟಿ
ಸಿನಿಮಾ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬಂದ ಕೇಂದ್ರದ ವಿರುದ್ಧ ಕಿಡಿಕಾರಿದ ನಟಿ ರಮ್ಯಾ
Published on: Aug 29, 2021 09:58 AM
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ

