AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಾರ್ಜುನ ಜನ್ಮದಿನ: ಸ್ವಾರ್ಥಕ್ಕಾಗಿ ಪ್ರಕಾಶ್​ ರೈ ಪಾರ್ಟಿ? ಮಾ ಚುನಾವಣೆ ಹೊಸ್ತಿಲಲ್ಲಿ ಹೊಸ ಆರೋಪ

Akkineni Nagarjuna Birthday: ಪ್ರಕಾಶ್​ ರೈ ಪರವಾಗಿ ಪ್ರಚಾರ ಮಾಡುತ್ತಿರುವ ಸಮೀರ್​ ಅವರು ಬಿಗ್​ ಬಾಸ್​ನ ಎಲ್ಲ ಮಾಜಿ ಸ್ಪರ್ಧಿಗಳನ್ನು ನಾಗಾರ್ಜುನ ಅವರ ಬರ್ತ್​ಡೇ ಪಾರ್ಟಿಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಸಮೀರ್​ ಆಹ್ವಾನ ನೀಡಿದ್ದಾರೆ ಎನ್ನಲಾದ ಮೆಸೇಜ್​ ವೈರಲ್​ ಆಗುತ್ತಿದೆ.

ನಾಗಾರ್ಜುನ ಜನ್ಮದಿನ: ಸ್ವಾರ್ಥಕ್ಕಾಗಿ ಪ್ರಕಾಶ್​ ರೈ ಪಾರ್ಟಿ? ಮಾ ಚುನಾವಣೆ ಹೊಸ್ತಿಲಲ್ಲಿ ಹೊಸ ಆರೋಪ
ಅಕ್ಕಿನೇನಿ ನಾಗಾರ್ಜುನ, ಪ್ರಕಾಶ್​ ರಾಜ್
TV9 Web
| Edited By: |

Updated on: Aug 29, 2021 | 8:15 AM

Share

ಟಾಲಿವುಡ್​ನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರಿಗೆ ಇಂದು (ಆ.29) ಹುಟ್ಟುಹಬ್ಬದ ಸಂಭ್ರಮ. ಅಪಾರ ಸಂಖ್ಯೆಯ ಅಭಿಮಾನಿಗಳು, ಸೆಲೆಬ್ರಿಟಿಗಳು, ಸ್ನೇಹಿತರು, ವಿವಿಧ ಕ್ಷೇತ್ರದ ಗಣ್ಯರು ನಾಗಾರ್ಜುನ ಅವರಿಗೆ ಜನ್ಮದಿನದ ಶುಭಕೋರುತ್ತಿದ್ದಾರೆ. ಈ ನಡುವೆ ಪ್ರಕಾಶ್​ ರೈ (Prakash Rai) ಅವರ ಮೇಲೆ ಒಂದು ಆರೋಪ ಕೇಳಿಬಂದಿದೆ. ಮುಂಬರುವ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA)​ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ನಾಗಾರ್ಜುನ ಜನ್ಮದಿನವನ್ನು ಪ್ರಕಾಶ್​ ರೈ ಆಚರಿಸಿದ್ದಾರೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟಾಲಿವುಡ್​ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ತೆಲುಗು ಬಿಗ್​ ಬಾಸ್​ಗೆ ನಾಗಾರ್ಜುನ ನಿರೂಪಕರಾಗಿದ್ದಾರೆ. ಸೆ.5ರಂದು ಹೊಸ ಸೀಸನ್​ ಕೂಡ ಆರಂಭ ಆಗಲಿದೆ. ಈ ಹಿಂದಿನ ನಾಲ್ಕು ಸೀಸನ್​ಗಳಲ್ಲಿ ಭಾಗವಹಿಸಿರುವ ಎಲ್ಲ ಸ್ಪರ್ಧಿಗಳನ್ನು ಆಹ್ವಾನಿಸಿ, ಆ.28ರ ರಾತ್ರಿ ಪ್ರಕಾಶ್​ ರಾಜ್​ ಆಫೀಸ್​ನಲ್ಲಿ ನಾಗಾರ್ಜುನ​ ಅವರ ಬರ್ತ್​ಡೇ ಪಾರ್ಟಿ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಪ್ರಕಾಶ್​ ರೈ ಪರವಾಗಿ ಪ್ರಚಾರ ಮಾಡುತ್ತಿರುವ ಸಮೀರ್​ ಅವರು ಬಿಗ್​ ಬಾಸ್​ನ ಎಲ್ಲ ಮಾಜಿ ಸ್ಪರ್ಧಿಗಳಿಗೆ ಈ ಕುರಿತು ಆಹ್ವಾನ ನೀಡಿದ್ದಾರೆ ಎನ್ನಲಾದ ಮೆಸೇಜ್​ ವೈರಲ್​ ಆಗುತ್ತಿದೆ.

ಪ್ರಕಾಶ್​ ರೈ ಮೂಲತಃ ತೆಲುಗಿನವರಲ್ಲ ಎಂಬ ಕಾರಣಕ್ಕೆ ಅವರು ಮೂವೀ ಆರ್ಟಿಸ್ಟ್ ಅಸೋಸಿಯೇಷನ್​ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಅನೇಕರು ತಕರಾರು ತೆಗೆದಿದ್ದಾರೆ. ಅದರ ನಡುವೆಯೂ ಅವರಿಗೆ ಹಲವರ ಬೆಂಬಲ ಸಿಗುತ್ತಿದೆ. ಇನ್ನಷ್ಟು ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಉದ್ದೇಶದಿಂದಲೇ ಪ್ರಕಾಶ್​ ರೈ ಅವರು ಈ ಬರ್ತ್​ಡೇ ಪಾರ್ಟಿಯನ್ನು ಆಯೋಜಿಸಿದ್ದರು ಎಂಬ ಆರೋಪ ಕೇಳಿಬರುತ್ತಿದೆ.

ಸದ್ಯ ಈ ಯಾವ ವಿಚಾರಗಳಿಗೂ ಪ್ರಕಾಶ್​ ರೈ ಪ್ರತಿಕ್ರಿಯೆ ನೀಡಿಲ್ಲ. ನಾಗಾರ್ಜುನ ಕೂಡ ಏನನ್ನೂ ಹೇಳಿಲ್ಲ. ಸದ್ಯ ಅವರು ಬಿಗ್​ ಬಾಸ್​ ತೆಲುಗು ಸೀಸನ್​ 5ರ ನಿರೂಪಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೆ.5ರಂದು ಅದ್ದೂರಿಯಾಗಿ ಸ್ಟಾರ್​ ಮಾ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಆರಂಭ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋಗಳು ವೈರಲ್​ ಆಗಿವೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಕೂಡ ಹರಿದಾಡುತ್ತಿದೆ. ಅಂತಿಮವಾಗಿ ಯಾರಿಗೆಲ್ಲ ಈ ಬಾರಿ ಬಿಗ್​ ಬಾಸ್​ ಮನೆ ಪ್ರವೇಶಿಸುವ ಅವಕಾಶ ಸಿಗಲಿದೆ ಎಂಬುದು ಸೆ.5ರ ಸಂಜೆ ಜಗಜ್ಜಾಹೀರಾಗಲಿದೆ.

ಇದನ್ನೂ ಓದಿ:

Prakash Raj: ಮಕ್ಕಳ ಎದುರಲ್ಲೇ ಪ್ರಕಾಶ್​ ರೈ ಮತ್ತೊಮ್ಮೆ ಮದುವೆ; ಇಲ್ಲಿವೆ ಖುಷಿಯ ಕ್ಷಣದ ಫೋಟೋಗಳು

ಸರ್ಜರಿ ಬಳಿಕ​ ಚಿರಂಜೀವಿ ಜೊತೆ ಪ್ರಕಾಶ್​ ರೈ ಫೋಟೋ ವೈರಲ್​; ಇನ್ನಷ್ಟು ಹೆಚ್ಚಿತು ಅನುಮಾನ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ