- Kannada News Photo gallery Actor Prakash Raj shares photos of his 11th wedding anniversary with wife Pony Verma
Prakash Raj: ಮಕ್ಕಳ ಎದುರಲ್ಲೇ ಪ್ರಕಾಶ್ ರೈ ಮತ್ತೊಮ್ಮೆ ಮದುವೆ; ಇಲ್ಲಿವೆ ಖುಷಿಯ ಕ್ಷಣದ ಫೋಟೋಗಳು
Prakash Raj | Pony Verma: ನಟ ಪ್ರಕಾಶ್ ರೈ ಮತ್ತೊಮ್ಮೆ ಮದುವೆ ಆಗಿದ್ದಾರೆ. ಈ ಸುದ್ದಿಯನ್ನು ಅವರೇ ಹಂಚಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಫೋಟೋಗಳೂ ಲಭ್ಯ ಆಗಿವೆ. ಆದರೆ ಈ ಮದುವೆಯಲ್ಲಿ ಒಂದು ಟ್ವಿಸ್ಟ್ ಇದೆ.
Updated on: Aug 25, 2021 | 1:37 PM

Actor Prakash Raj shares photos of his 11th wedding anniversary with wife Pony Verma

Actor Prakash Raj shares photos of his 11th wedding anniversary with wife Pony Verma

ಪ್ರಕಾಶ್ ರೈ ಅವರಿಗೆ ಪೋನಿ ವರ್ಮಾ ಎರಡನೇ ಪತ್ನಿ. 2010ರಲ್ಲಿ ಅವರಿಬ್ಬರ ಮದುವೆ ನೆರವೇರಿತ್ತು. ಮಂಗಳವಾರ (ಆ.25) 11ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಈ ಜೋಡಿ ಆಚರಿಸಿಕೊಂಡಿತು.

ಪ್ರಕಾಶ್ ರೈ ಮತ್ತು ಪೋನಿ ವರ್ಮಾಗೆ 2015ರಲ್ಲಿ ಗಂಡು ಮಗು ಜನಿಸಿತು. ಮಗನಿಗೆ ವೇದಾಂತ್ ಎಂದು ಹೆಸರು ಇಟ್ಟಿದ್ದಾರೆ. ಪುತ್ರನ ಕೋರಿಕೆಯಂತೆ 11ನೇ ವಿವಾಹ ವಾರ್ಷಿಕೋತ್ಸವದ ದಿನ ಈ ಜೋಡಿ ಮತ್ತೊಮ್ಮೆ ಮದುವೆ ಆಗಿರುವುದು ವಿಶೇಷ.

ಬಹುಭಾಷಾ ನಟನಾಗಿ ಮಿಂಚುತ್ತಿರುವ ಪ್ರಕಾಶ್ ರೈ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹಂಚಿಕೊಂಡಿರುವ ಈ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಮೆಂಟ್ಗಳ ಮೂಲಕ ಶುಭ ಕೋರಲಾಗುತ್ತಿದೆ.

ಪ್ರಕಾಶ್ ರೈ-ಪೋನಿ ವರ್ಮಾ ಅಂದು-ಇಂದು. 11 ವರ್ಷಗಳಿಂದ ಈ ಸೆಲೆಬ್ರಿಟಿ ದಂಪತಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಪ್ರಕಾಶ್ ರೈ ಅವರ ಸಿನಿಪಯಣಕ್ಕೆ ಪೋನಿ ವರ್ಮಾ ಬೆಂಬಲವಾಗಿ ನಿಂತಿದ್ದಾರೆ.




