AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಚಿತ್ರದಿಂದ ಹೊರ ನಡೆದ ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್​ ಸದ್ಯ ಸೌತ್​ ಸಿನಿಮಾರಂಗದ ಸ್ಟಾರ್ ನಟಿ. ಸ್ಟಾರ್​ ನಿರ್ದೇಶಕರು ಕೂಡ ಈಕೆಯ ಡೇಟ್​ಗಾಗಿ ಕಾಯುವಂತಾಗಿದೆ. ಹೀಗಿರುವಾಗ ಒಪ್ಪಿಕೊಂಡ ಸ್ಟಾರ್​ ನಿರ್ದೇಶಕನ ಸಿನಿಮಾದಿಂದ ಕೀರ್ತಿ ಹೊರ ನಡೆದಿದ್ದಾರೆ. ದೊಡ್ಡ ಅವಕಾಶಯೊಂದನ್ನ ಕೀರ್ತಿ ಕೈ ಬಿಟ್ಟಿದ್ದಾರೆ ಅಂತಿದೆ ಚಿತ್ರರಂಗ. ಕೀರ್ತಿ ಸುರೇಶ್… ಮಹಾನಟಿ ಸಿನಿಮಾದ ನಂತ್ರ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಷ್ಟೇ ಸಿನಿಮಾ ಅವಕಾಶಗಳು ಬಂದ್ರೂ, ಕೀರ್ತಿ ಮಾತ್ರ ಸಿನಿಮಾ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ. ಅಳೆದು-ತೂಗಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ. ಆದ್ರೆ, ಸ್ಟಾರ್ ನಿರ್ದೇಶಕ ಮಣಿರತ್ನಂರ ಚಿತ್ರದಲ್ಲಿ […]

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಚಿತ್ರದಿಂದ ಹೊರ ನಡೆದ ಕೀರ್ತಿ ಸುರೇಶ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 14, 2019 | 8:56 AM

Share

ನಟಿ ಕೀರ್ತಿ ಸುರೇಶ್​ ಸದ್ಯ ಸೌತ್​ ಸಿನಿಮಾರಂಗದ ಸ್ಟಾರ್ ನಟಿ. ಸ್ಟಾರ್​ ನಿರ್ದೇಶಕರು ಕೂಡ ಈಕೆಯ ಡೇಟ್​ಗಾಗಿ ಕಾಯುವಂತಾಗಿದೆ. ಹೀಗಿರುವಾಗ ಒಪ್ಪಿಕೊಂಡ ಸ್ಟಾರ್​ ನಿರ್ದೇಶಕನ ಸಿನಿಮಾದಿಂದ ಕೀರ್ತಿ ಹೊರ ನಡೆದಿದ್ದಾರೆ. ದೊಡ್ಡ ಅವಕಾಶಯೊಂದನ್ನ ಕೀರ್ತಿ ಕೈ ಬಿಟ್ಟಿದ್ದಾರೆ ಅಂತಿದೆ ಚಿತ್ರರಂಗ.

ಕೀರ್ತಿ ಸುರೇಶ್… ಮಹಾನಟಿ ಸಿನಿಮಾದ ನಂತ್ರ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಷ್ಟೇ ಸಿನಿಮಾ ಅವಕಾಶಗಳು ಬಂದ್ರೂ, ಕೀರ್ತಿ ಮಾತ್ರ ಸಿನಿಮಾ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ. ಅಳೆದು-ತೂಗಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ.

ಆದ್ರೆ, ಸ್ಟಾರ್ ನಿರ್ದೇಶಕ ಮಣಿರತ್ನಂರ ಚಿತ್ರದಲ್ಲಿ ನಟಿಸದೇ ಕೀರ್ತಿ ಹೊರ ನಡೆದಿದ್ದಾರೆ. ಮಣಿರತ್ನಂ ಚಿತ್ರದಲ್ಲಿ ನಟಿಸಲು ಅವಕಾಶಕ್ಕಾಗಿ ಕಾದು ಕುಳಿತಿರ್ತಾರೆ. ಆದ್ರೆ, ಕೀರ್ತಿ ಸುರೇಶ್ ಮಾತ್ರ ಸಿಕ್ಕ ಚಾನ್ಸ್​ನ್ನೂ ಕೈ ಚೆಲ್ಲಿದ್ದಾರೆ. ಮಣಿರತ್ನಂ ನಿರ್ದೇಶಿಸಲಿರೋ ಹೆಸರಾಂತ ಕಾದಂಬರಿ ಆಧಾರಿತ “ಪೊನ್ನಿಯಿನ್ ಸೆಲ್ವನ್” ಸಿನಿಮಾದಲ್ಲಿ ಕೀರ್ತಿ ಸುರೇಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳ ಬೇಕಿತ್ತು. ಮೊದಲಿಗೆ ಸಿನಿಮಾವನ್ನ ಒಪ್ಪಿಕೊಂಡು ನಂತ್ರ ಸಿನಿಮಾದಿಂದ ಹೊರ ನಡೆದಿದ್ದಾರಂತೆ.

ಈ ಕಲಾತ್ಮಕ ಸಿನಿಮಾದಿಂದ ನಟಿ ಕೀರ್ತಿ ಹೊರ ನಡೆಯಲು ಕಾರಣ ಸೂಪರ್​ ಸ್ಟಾರ್​ ರಜನಿಕಾಂತ್. ತಲೈವಾ ರಜನಿಕಾಂತ್ ಜೊತೆಗೆ ಅಭಿನಯಿಸ ಬೇಕು ಅನ್ನೋದು ಕೀರ್ತಿ ಸುರೇಶ್ ಕನಸು. ಹೀಗಾಗಿ, ತಲೈವಾ 168 ಸಿನಿಮಾದಲ್ಲಿ ರಜನಿಕಾಂತ್​ ಜೊತೆಗೆ ಕೀರ್ತಿ ಅಭಿನಯಿಸುತ್ತಿದ್ದಾರೆ.

ತಲೈವಾ 168 ಸಿನಿಮಾ ಅದಾಗ್ಲೇ ಸೆಟ್ಟೇರಿದ್ದರಿಂದ, ಎರಡು ಸಿನಿಮಾಗಳಿಗೂ ಡೇಟ್​ ಹೊಂದಾಣಿಕೆ ಆಗಿರಲಿಲ್ಲವಂತೆ. ಇದೇ ಕಾರಣ ಕೀರ್ತಿ ರಜನಿ ಸಿನಿಮಾಕ್ಕೆ ಓಟ್​ ಹಾಕಿ ಮಣಿರತ್ನಂ ಸಿನಿಮಾಕ್ಕೆ ನೋ ಎಂದಿದ್ದಾರೆ.

ಮೂಲಗಳ ಪ್ರಕಾರ ಪೊನ್ನಿಯಿನ್​ ಸೆಲ್ವನ್​ ಸಿನಿಮಾದಲ್ಲಿ ಕೀರ್ತಿ ಸುರೇಶ್​ ಪಾತ್ರ ತುಂಬಾನೇ ಚೆನ್ನಾಗಿತ್ತಂತೆ. ಇದ್ರಿಂದ ಕೀರ್ತಿ ಒಂದೊಳ್ಳೆ ಅವಕಾಶ ಕಳೆದುಕೊಂಡಿದ್ದಾರೆ ಎನ್ನಲಾಗ್ತಿದೆ.

Published On - 8:54 am, Sat, 14 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ