AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ಆನೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಚಾಲಕರು; ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ರೈಲು ಮುಂದೆ ಸಾಗುತ್ತಿದ್ದಂತೆ ಆನೆಯು ಹಳಿಯಿಂದ ದೂರ ಸರಿದು ಕಾಡಿನೊಳಗೆ ಪ್ರವೇಶಿಸುವುದನ್ನು ಕಾಣಬಹುದು.

Viral Video: ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ಆನೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಚಾಲಕರು; ವಿಡಿಯೋ ನೋಡಿ
ಸಾಂದರ್ಭಿಕ ಚಿತ್ರ
TV9 Web
| Updated By: shruti hegde|

Updated on:Aug 26, 2021 | 1:46 PM

Share

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರೈಲ್ವೆ ಹಳಿಗಳ ಪಕ್ಕದಲ್ಲಿ ಆನೆ ನಡೆದು ಹೋಗುತ್ತಿದ್ದು, ಇಬ್ಬರು ಚಾಲಕರು ಆನೆಯನ್ನು ರಕ್ಷಿಸಿದ್ದಾರೆ. ಆನೆ, ರೈಲು ಹಳಿಯ ಪಕ್ಕದಲ್ಲಿ ನಡೆದು ಸಾಗುತ್ತಿತ್ತು. ಇನ್ನೇನು ರೈಲು ಹಳಿಯನ್ನು ದಾಟಬೇಕು ಅಂದುಕೊಂಡು ಹಳಿಯ ಬದಿಗೆ ಮುಖ ಮಾಡಿತ್ತು. ಇದನ್ನು ಗಮನಿಸಿದ ರೈಲು ಚಾಲಕರು ರೈಲನ್ನು ನಿಲ್ಲಿಸಿ ಆನೆಯನ್ನು ರಕ್ಷಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ರೈಲು ಮುಂದೆ ಸಾಗುತ್ತಿದ್ದಂತೆ ಆನೆಯು ಹಳಿಯಿಂದ ದೂರ ಸರಿದು ಕಾಡಿನೊಳಗೆ ಪ್ರವೇಶಿಸುವುದನ್ನು ಕಾಣಬಹುದು. ಘಟನೆ ಉತ್ತರ ಬಂಗಾಳದ ನಾಗರಕಟ- ಚಾಲ್ಸಾ ಸಾಗುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ರೈಲ್ವೆ ಹಳಿಯನ್ನು ದಾಟುವಾಗ ಆನೆ ಜೀವ ಕಳೆದುಕೊಂಡ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೇವೆ. ಅಂತಹ ವಿಷಯಗಳು ಮನಕಲಕುವಂತಿದೆ. ಅಂತಹ ಸುದ್ದಿಗಳು ನಿಜಕ್ಕೂ ಅಸಮಾಧಾನವನ್ನುಂಟು ಮಾಡುತ್ತದೆ. ಇಲ್ಲಿ ಆನೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಚಾಲಕರಿಗೆ ಶ್ಲಾಘನೆ ವ್ಯಕ್ತವಾಗಿದೆ. ಆನೆ ಪ್ರಾಣಾಪಾಯದಿಂದ ಪಾರಾಗಿದೆ.

ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಶ್ಲಾಘನೆಗೆ ಅರ್ಹವಾದ ಕೆಲಸ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ. ಅನೇಕ ಆನೆಗಳು ಅಪಘಾತದಿಂದ ಸಾವನ್ನಪ್ಪಿದ ಘಟನೆಗಳನ್ನು ಕೇಳಿದಾಕ್ಷಣ ನೋವುಂಟಾಗುತ್ತದೆ. ಇದು ನಿಜಕ್ಕೂ ಶ್ಲಾಘನೆಯ ಕೆಲಸ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಅನಾಥ ಆನೆ ಮರಿಗೆ ಬಾಡಿಗೆ ತಾಯಿಯಾದ ಕೀಪರ್; ಹೃದಯಸ್ಪರ್ಶಿ ವಿಡಿಯೋ ವೈರಲ್

Viral Video: ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ​ ವಿಡಿಯೋದಿಂದ ಸಂಕಷ್ಟಕ್ಕೆ ಸಿಲುಕಿದ ನರ್ಸ್

(Viral Video Loco pilot apply emergency brake to save elephants walking to close railway track)

Published On - 1:44 pm, Thu, 26 August 21