AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅನಾಥ ಆನೆ ಮರಿಗೆ ಬಾಡಿಗೆ ತಾಯಿಯಾದ ಕೀಪರ್; ಹೃದಯಸ್ಪರ್ಶಿ ವಿಡಿಯೋ ವೈರಲ್

ತನ್ನ ಕುಟುಂಬವನ್ನು ಸೇರಬೇಕೆಂಬ ಗುರಿ ಆನೆ ಮರಿಯದ್ದು, ಹೀಗಿರುವಾಗ ಕುಟುಂಬ ಕಳೆದುಕೊಂಡು ಅನಾಥವಾದ ಆನೆ ಮರಿಗೆ ಬಾಡಿಗೆ ತಾಯಿಯಂತೆ ಕೀಪರ್ ವರ್ತಿಸುತ್ತಿದ್ದಾನೆ.

Viral Video: ಅನಾಥ ಆನೆ ಮರಿಗೆ ಬಾಡಿಗೆ ತಾಯಿಯಾದ ಕೀಪರ್; ಹೃದಯಸ್ಪರ್ಶಿ ವಿಡಿಯೋ ವೈರಲ್
ಅನಾಥ ಆನೆ ಮರಿಗೆ ಬಾಡಿಗೆ ತಾಯಿಯಾದ ಕೀಪರ್
Follow us
TV9 Web
| Updated By: shruti hegde

Updated on: Aug 25, 2021 | 2:28 PM

ಪ್ರಾಣಿಗಳು ಮಾನವರನ್ನು ಅತಿಬೇಗ ಹಚ್ಚಿಕೊಳ್ಳುತ್ತವೆ. ಆದರೆ ಕೊಂಚ ಪ್ರೀತಿ ತೋರಿಸಬೇಕಷ್ಟೆ. ಮೂಕ ಪ್ರಾಣಿಗಳಾದರೂ ಸಹ ಮಾನವನಿಗೆ ಸಹಾಯ ಮಾಡುವ ಅದೆಷ್ಟೋ ವಿಡಿಯೋಗಳನ್ನು ನೋಡಿದ್ದೇವೆ. ಪ್ರಾಣಿಗಳಿಗೂ ಸಹ ಭಾವನೆಗಳಿವೆ. ಅಳು, ನಗು, ಸಂತೋಷವನ್ನು ಅವರ ರೀತಿಯಲ್ಲಿಯೇ ತೋರಿಸುತ್ತವೆ. ಅಂಥಹುದೇ ಒಂದು ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ನ ಕುಟುಂಬವನ್ನು ಕಳೆದುಕೊಂಡ ಆನೆ ಮರಿಗೆ ತುಂಬಾ ನೋವು ಉಂಟಾಗಿದೆ. ಬೇಸರಗೊಂಡು ಮುಖ ಬಾಗಿಸಿಕೊಂಡಿದೆ. ತನ್ನ ಕುಟುಂಬವನ್ನು ಸೇರಬೇಕೆಂಬ ಗುರಿ ಆನೆ ಮರಿಯದ್ದು, ಹೀಗಿರುವಾಗ ಕುಟುಂಬ ಕಳೆದುಕೊಂಡು ಅನಾಥವಾದ ಆನೆ ಮರಿಗೆ ಬಾಡಿಗೆ ತಾಯಿಯಂತೆ ಕೀಪರ್ ವರ್ತಿಸುತ್ತಿದ್ದಾನೆ. ಆನೆಗೆ ಪ್ರೀತಿ, ವಾತ್ಸಲ್ಯದಿಂದ ಕಾಳಜಿ ತೋರುತ್ತಿದ್ದಾನೆ. ವಿಡಿಯೋ ಮನಕಲಕುವಂತಿದೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಶೆಲ್ಡ್ರಿಕ್​ ವೈಲ್ಡ್ ಲೈಫ್ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಬಾಡಿಗೆ ತಾಯಿಯಂತೆ ವರ್ತಿಸುತ್ತಾ ಆನೆ ಮರಿಗಳಿಗೆ ಪ್ರೀತಿ ತೋರುವುದು ಪ್ರಾಣಿಗಳಿಗೆ ಮಾಡುವ ಸಹಾಯ. ಇದರಿಂದ ಒಂದು ದಿನ ಅವು ಕಾಡಿಗೆ ಮರಳಬಹುದು ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ವಿಡಿಯೋ ಸುಮಾರು 50,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ರೀಟ್ವೀಟ್ ಕೂಡಾ ಮಾಡಲಾಗುತ್ತಿದೆ. 1,200 ಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. ಹೃದಯಸ್ಪರ್ಶಿ ಈ ವಿಡಿಯೋವನ್ನು ನೆಟ್ಟಿಗರು ಹೆಚ್ಚು ಇಷ್ಟ ಪಟ್ಟಿದ್ದಾರೆ.

ವಿಡಿಯೋ ತುಂಬಾ ಸುಂದರವಾಗಿದೆ ಎಂದು ಓರ್ವರು ಹೇಳಿದ್ದಾರೆ. ಹಸಿರು ಬಣ್ಣದ ಅಂಗಿ ತೊಟ್ಟ ಕೀಪರ್ ಆನೆಯ ಬಳಿ ವರ್ತಿಸುತ್ತಿರುವ ರೀತಿ ಇಷ್ಟವಾಯಿತು ಎಂದು ಇನ್ನೋರ್ವರು ಹೇಳಿದ್ದಾರೆ. ಕೆಲವರು ಅದ್ಭುತ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಎಮೋಜಿಗಳನ್ನು ಕಳುಹಿಸುವ ಮೂಲಕ ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ

Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

(Keeper acts mother with elephant watch video)