ಸಲ್ಮಾನ್ ಖಾನ್ನನ್ನು ವಿಮಾನ ನಿಲ್ದಾಣದಲ್ಲಿ ತಡೆದು ವೃತ್ತಿಪರತೆ ಮೆರೆದ ಅಧಿಕಾರಿಯನ್ನು ಪುರುಸ್ಕರಿಸಿದ ಸಿಐಎಸ್ಎಫ್
ಸಿಐಎಸ್ ಎಫ್ ಮಾಡಿರುವುದು ನಿಜಕ್ಕೂ ಅನುಕರಣೀಯ. ಸೆಲೆಬ್ರಿಟಿಗಳು ಉಳಿದ ಜನಸಾಮಾನ್ಯರಿಗಿಂತ ಹೆಚ್ಚು ಸಮಾನರು ಅಲ್ಲ ಎನ್ನವುದನ್ನು ಸಲ್ಮಾನ್ನಂಥ ನಟರು ಅರ್ಥಮಾಡಿಕೊಳ್ಳಬೇಕಿದೆ.
ಮುಂಬೈ: ಇತ್ತೀಚಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ನನ್ನು ತಡೆದು ದೇಶದ ಎಲ್ಲಾ ಮೂಲೆಗಳ ಜನರಿಂದ ಭೇಷ್ ಅನಿಸಿಕೊಂಡಿದ್ದ ಕೇಂದ್ರ ಕೈಗಾರಿಕಾ ಭದ್ರತೆ ಪಡೆ (ಸಿ ಐ ಎಸ್ ಎಫ್) ಅಧಿಕಾರಿಯೊಬ್ಬರನ್ನು ಅವರು ಪ್ರದರ್ಶಿಸಿದ ನಿದರ್ಶನೀಯ ವೃತ್ತಿಪರತೆ ಮತ್ತು ಕರ್ತವ್ಯ ನಿಷ್ಠೆಯ ಹಿನ್ನೆಲೆಯಲ್ಲಿ ಸೂಕ್ತವಾಗಿ ಪುರಸ್ಕರಿಸಿ ಗೌರವಿಸಲಾಗಿದೆ. ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ, ಒಬ್ಬ ಹೆಸರಾಂತ ನಟನನ್ನು ಹಾಗೆ ತಡೆದಿದ್ದುಕ್ಕೆ ಅಧಿಕಾರಿಯನ್ನು ಶಿಕ್ಷೆಗೊಳಪಡಿಸಲಾಗುವುದು, ಜುಲ್ಮಾನೆ ವಿಧಿಸಲಾಗುವುದು ಎಂದು ಹರಡಿದ್ದ ವದಂತಿಗಳಿಗೆ ತದ್ವಿರುದ್ಧವಾಗಿ ಸಿ ಐ ಎಸ್ ಎಫ್ ಅವರ ಕಾರ್ಯವನ್ನು ಶ್ಲಾಘಿಸಿ ಪುರಸ್ಕರಿಸಿ ಒಂದು ಮೇಲ್ಪಂಕ್ತಿಯನ್ನು ಹಾಕಿದೆ.
ಮೊದಲಿನ ಟ್ವೀಟ್ ಅನ್ನು ಉಲ್ಲೇಖಿಸಿ ಮತ್ತೊಂದು ಟ್ವೀಟ್ ಮಾಡಿರುವ ಸಿ ಐ ಎಸ್ ಎಫ್, ‘ಈ ಟ್ವೀಟ್ನಲ್ಲಿ ಹೇಳಿರುವ ಸಂಗತಿಗಳು ಸತ್ಯಕ್ಕೆ ದೂರ ಮತ್ತು ಆಧಾರರಹಿತವಾಗಿವೆ. ವಾಸ್ತವ ಸಂಗತಿಯೆಂದರೆ, ಸದರಿ ಅಧಿಕಾರಿಯನ್ನು ಅವರು ತೋರಿದ ಅಪ್ರತಿಮ ವೃತ್ತ್ತಿಪರತೆ ಮತ್ತು ಕರ್ತವ್ಯ ನಿಷ್ಠೆಯ ಹಿನ್ನೆಲೆಯಲ್ಲಿ ಸೂಕ್ತವಾಗಿ ಪುರಸ್ಕರಿಸಲಾಗಿದೆ,’ (sic) ಎಂದು ಹೇಳಿದೆ. ಒಬ್ಬ ಟ್ವಿಟರ್ ಯೂಸರ್ ಅಧಿಕಾರಿಯ ಮೇಲೆ ದಂಡ ವಿಧಿಸಲಾಗುವುದು ಎಂದು ತನ್ನ ಟ್ವೀಟ್ನಲ್ಲಿ ಹೇಳಿದ್ದ. ಪ್ರಾಯಶಃ ಅವನು ನಟನ ಭಕ್ತನಿರಬಹುದು!
The contents of this tweet are incorrect & without factual basis. In fact, the officer concerned has been suitably rewarded for exemplary professionalism in the discharge of his duty. @PIBHomeAffairs
— CISF (@CISFHQrs) August 24, 2021
ಸಿಐಎಸ್ ಎಫ್ ಮಾಡಿರುವುದು ನಿಜಕ್ಕೂ ಅನುಕರಣೀಯ. ಸೆಲೆಬ್ರಿಟಿಗಳು ಉಳಿದ ಜನಸಾಮಾನ್ಯರಿಗಿಂತ ಹೆಚ್ಚು ಸಮಾನರು ಅಲ್ಲ ಎನ್ನವುದನ್ನು ಸಲ್ಮಾನ್ನಂಥ ನಟರು ಅರ್ಥಮಾಡಿಕೊಳ್ಳಬೇಕಿದೆ.
ಕಳೆದ ಗುರುವಾರ ಸಲ್ಮಾನ್ ಖಾನ್ ಮತ್ತು ನಟಿ ಕತ್ರೀನಾ ಕೈಫ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಮೂಲಗಳ ಪ್ರಕಾರ ಅವರು ‘ಟೈಗರ್ 3’ ಚಿತ್ರದ ಶೂಟ್ಗಾಗಿ ರಷ್ಯಾಗೆ ತೆರಳಿದರು.
ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅವ್ಯಾಹತವಾಗಿ ಶೇರ್ ಆಗಿರುವ ವಿಡಿಯೋನಲ್ಲಿ ಸಲ್ಮಾನ್ ಮತ್ತು ಕತ್ರೀನಾ ಏರ್ಪೋರ್ಟ್ಗೆ ಆಗಮಿಸುತ್ತಿದ್ದು ಅವರ ಹಿಂದೆ ಮಾಧ್ಯಮದವರು ಬರುತ್ತಿದ್ದಾರೆ. ನಿಲ್ದಾಣದಲ್ಲಿ ಸಲ್ಮಾನ್ನನ್ನು ತಡೆದ ಸಿ ಐ ಎಸ್ಎಫ್ ಆಧಿಕಾರಿಯು ಟರ್ಮಿನಲ್ ಪ್ರವೇಶಿಸದಂತೆ ತಡೆದು, ಸೆಕ್ಯುರಿಟಿ ಚೆಕ್ ಪಾಯಿಂಟ್ನಿಂದ ಕ್ಲಿಯರೆನ್ಸ್ ಪಡೆಯುವಂತೆ ಹೇಳುತ್ತಿರುವುದು ಕಾಣಿಸುತ್ತಿದೆ.
ಟೈಗರ್ 3 ಚಿತ್ರವು ‘ಏಕ್ ಥಾ ಟೈಗರ್’ ಸಿನಿಮಾದ ಸೀಕ್ವೆಲ್ ಆಗಿದೆ. ಚಿತ್ರವನ್ನು ಮನೀಶ್ ಶರ್ಮ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ: ತಾಲಿಬಾನಿಗಳ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಲ್ಮಾನ್ ಖಾನ್ ನಾಯಕಿ; 20 ವರ್ಷ ಹಿಂದಕ್ಕೆ ಹೋದ ಆಪ್ಘನ್