ತಾಲಿಬಾನಿಗಳ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಲ್ಮಾನ್​ ಖಾನ್​ ನಾಯಕಿ; 20 ವರ್ಷ ಹಿಂದಕ್ಕೆ ಹೋದ ಆಪ್ಘನ್​

‘ಲವ್​ ರಾತ್ರಿ’ ಸಿನಿಮಾವನ್ನು ಸಲ್ಮಾನ್​ ಖಾನ್​ ನಿರ್ಮಾಣ ಮಾಡಿದ್ದರು. ಸಲ್ಲು ಭಾವ ಆಯುಷ್​ ಶರ್ಮಾ ಈ ಚಿತ್ರದ ಹೀರೋ. ಈ ಚಿತ್ರದ ಮೂಲಕ ವರಿನಾ ಬಾಲಿವುಡ್​ಗೆ ಕಾಲಿಟ್ಟರು.

ತಾಲಿಬಾನಿಗಳ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಲ್ಮಾನ್​ ಖಾನ್​ ನಾಯಕಿ; 20 ವರ್ಷ ಹಿಂದಕ್ಕೆ ಹೋದ ಆಪ್ಘನ್​
ತಾಲಿಬಾನಿಗಳ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಲ್ಮಾನ್​ ಖಾನ್​ ನಾಯಕಿ; 20 ವರ್ಷ ಹಿಂದಕ್ಕೆ ಹೋದ ಆಪ್ಘನ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Aug 22, 2021 | 12:52 PM

ತಾಲಿಬಾನಿಗಳ ಕ್ರೌರ್ಯಕ್ಕೆ ಇಡೀ ಅಪ್ಘಾನಿಸ್ತಾನ ತತ್ತರಿಸಿದೆ. ಸಾಕಷ್ಟು ಜನರು ದೇಶ ಬಿಟ್ಟು ಹೊರ ಬರೋಕೆ ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅನೇಕರು ಮೃತಪಟ್ಟಿದ್ದಾರೆ. ಇನ್ನು ಮಹಿಳೆಯರ ಮೇಲೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಈ ಮೂಲಕ ಆಪ್ಘನ್​​ ಮತ್ತೆ 20 ವರ್ಷ ಹಿಂದೆ ಹೋಗಿದೆ.  ಆಪ್ಘನ್ ಎರಡು ದಶಕಗಳ ಹಿಂದೆ​ ಹೇಗಿತ್ತು ಎಂದು ಬಾಲಿವುಡ್​ ನಟಿ ವರಿನಾ ಹುಸೇನ್​ ವಿವರಿಸಿದ್ದಾರೆ.  

‘ಲವ್​ ರಾತ್ರಿ’ ಸಿನಿಮಾವನ್ನು ಸಲ್ಮಾನ್​ ಖಾನ್​ ನಿರ್ಮಾಣ ಮಾಡಿದ್ದರು. ಸಲ್ಲು ಭಾವ ಆಯುಷ್​ ಶರ್ಮಾ ಈ ಚಿತ್ರದ ಹೀರೋ. ಈ ಚಿತ್ರದ ಮೂಲಕ ವರಿನಾ ಬಾಲಿವುಡ್​ಗೆ ಕಾಲಿಟ್ಟರು. 20 ವರ್ಷದ ಹಿಂದೆ ಅವರು ಎದುರಿಸಿದ ಕಷ್ಟದ ಬಗ್ಗೆ ಈಗ ಹೇಳಿಕೊಂಡಿದ್ದಾರೆ

‘20 ವರ್ಷಗಳ ಹಿಂದಿನ ಮಾತು. ನಾನು ಮತ್ತು ನನ್ನ ಕುಟುಂಬ ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿದ್ದೆವು. ಅಲ್ಲಿಂದ ತೆರಳುವಂತೆ ತಾಲಿಬಾನಿಗಳು ಒತ್ತಾಯ ಹೇರಿದ್ದರು. ಈಗ ಅಲ್ಲಿರುವವರು ನಮ್ಮಂತೆ ಕುಟುಂಬವನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಬಾಲ್ಯದಲ್ಲಿ ಅಫ್ಘಾನಿಸ್ತಾನವನ್ನು ತೊರೆದ ನಂತರ ಅವರು ಭಾರತಕ್ಕೆ ಬಂದರು. ಇಲ್ಲಿ 10 ವರ್ಷಗಳ ಕಾಲ ವಾಸ ಮಾಡಿದ್ದಾರೆ. ಆದರೆ ಅವರು ಯಾವಾಗಲೂ ತಮ್ಮ ದೇಶವನ್ನು ನೆನಪಿಸಿಕೊಳ್ಳುತ್ತಾರೆ. ‘ಯಾವಾಗಲೂ ನನ್ನ ಕುಟುಂಬ, ಅಲ್ಲಿನ ಆಹಾರ ಮತ್ತು ಕಾಬೂಲ್​ನ ಸುಂದರ ವಸಂತದ ನೆನಪೂ ಇಂದಿಗೂ ಕಾಡುತ್ತದೆ. ಹೊಸ ಜೀವನ ಕಟ್ಟಿಕೊಳ್ಳಲು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳೋದು ತುಂಬಾನೇ ಕಷ್ಟ’ ಎಂದಿದ್ದಾರೆ ವರಿನಾ.

‘ಭಾರತ ನನ್ನನ್ನು ಒಪ್ಪಿಕೊಂಡು ನನಗೆ ಜಾಗ ಕಲ್ಪಿಸಿದೆ. ಇದು ನನ್ನ ಮನೆ ಆಗಿದೆ. ನಿಜಕ್ಕೂ ನಾನು ಅದೃಷ್ಟವಂತ. ಆದರೆ, ಎಲ್ಲರಿಗೂ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಇಷ್ಟು ವರ್ಷ ಅಪ್ಘಾನಿಸ್ತಾನ ಮಾಡಿದ ಅಭಿವೃದ್ಧಿ ಕೆಲಸಗಳು ವ್ಯರ್ಥವಾಗಿದೆ. ಮಹಿಳೆಯರು ಮಕ್ಕಳು ಹೆರುವ ಯಂತ್ರವಾಗಿ ಬದಲಾಗಬೇಕಿದೆ. ಯುವಕರು ದ್ವೇಷ ಜ್ವಾಲೆಯನ್ನು ತುಂಬಿಕೊಂಡು ಹೋರಾಡಬೇಕಿದೆ’ ಎಂದು ಅಲ್ಲಿನ ಪರಿಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ ಅವರು.

‘ಲವ್​ ರಾತ್ರಿ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವರಿನಾ ‘ದಬಾಂಗ್​ 3’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

Published On - 12:38 pm, Sun, 22 August 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ