ಲೆಕ್ಕಾಚಾರದಲ್ಲಿ ಯಾಮಾರಿದ ಅಕ್ಷಯ್ ಕುಮಾರ್; ಅಕ್ಕಿ ತೆಗೆದುಕೊಂಡ್ರು ಮಹತ್ವದ ನಿರ್ಧಾರ
ಕೊವಿಡ್ ಎರಡನೇ ಅಲೆ ಜೋರಾದ ನಂತರದಲ್ಲಿ ಚಿತ್ರಮಂದಿರಕ್ಕೆ ಬೀಗ ಹಾಕಲಾಗಿತ್ತು. ಈಗ ಚಿತ್ರಮಂದಿರ ತೆರೆದಿದೆಯಾದರೂ ಅನೇಕ ರಾಜ್ಯಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ.
ಅಕ್ಷಯ್ ಕುಮಾರ್ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತವೆ. ಅವರ ಅನೇಕ ಚಿತ್ರಗಳು ನೂರ ಕೋಟಿ ಕಲೆಕ್ಷನ್ ಮಾಡಿವೆ. ಸಿನಿಮಾ ಉತ್ತಮವಾಗಿದ್ದರೆ ವೀಕ್ಷಕರು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಅವರದ್ದು. ‘ಬೆಲ್ ಬಾಟಮ್’ ವಿಚಾರದಲ್ಲಿ ಈ ಲೆಕ್ಕಾಚಾರ ತಪ್ಪಿದೆ. ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದರೂ ಚಿತ್ರಮಂದಿರದತ್ತ ಯಾರೂ ಹೆಜ್ಜೆ ಹಾಕುತ್ತಿಲ್ಲ. ಪರಿಣಾಮ ‘ಬೆಲ್ ಬಾಟಮ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೊರಗಿದೆ. ಇದು ಅಕ್ಷಯ್ ಚಿಂತೆಗೆ ಕಾರಣವಾಗಿದೆ.
ಕೊವಿಡ್ ಎರಡನೇ ಅಲೆ ಜೋರಾದ ನಂತರದಲ್ಲಿ ಚಿತ್ರಮಂದಿರಕ್ಕೆ ಬೀಗ ಹಾಕಲಾಗಿತ್ತು. ಈಗ ಚಿತ್ರಮಂದಿರ ತೆರೆದಿದೆಯಾದರೂ ಅನೇಕ ರಾಜ್ಯಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಅಂದರೆ, ಅಕ್ಕಪಕ್ಕ ಕೂರುವಂತಿಲ್ಲ. ಹೀಗಿರುವಾಗ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರದತ್ತ ಮುಖ ಮಾಡುವ ಸಾಧ್ಯತೆ ಕಡಿಮೆ. ಇದೇ ಕಾರಣಕ್ಕೆ ‘ಬೆಲ್ ಬಾಟಮ್’ ಸಿನಿಮಾ ವೀಕ್ಷಣೆಗೆ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಇದು ಸಿನಿಮಾ ಕಲೆಕ್ಷನ್ಗೆ ಹೊಡೆತ ನೀಡಿದೆ.
ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ ಈ ಚಿತ್ರ ಶುಕ್ರವಾರ 2.75 ಕೋಟಿ ರೂಪಾಯಿ ಹಾಗೂ ಶನಿವಾರ 2.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾಗೆ ತೀವ್ರ ಹಿನ್ನಡೆ ಆಗಿದೆ ಎನ್ನಬಹುದು. ಹೀಗಾಗಿ ಈ ಸಿನಿಮಾ ಕೆಲವೇ ವಾರಗಳಲ್ಲಿ ಅಮೇಜಾನ್ ಪ್ರೈಮ್ನಲ್ಲಿ ಪ್ರಸಾರವಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಒಟಿಟಿಯವರು ದೊಡ್ಡ ಮೊತ್ತಕ್ಕೆ ಆಫರ್ ಮಾಡಿದ್ದರಿಂದ ಚಿತ್ರತಂಡ ಇದಕ್ಕೆ ಒಕೆ ಎಂದಿದೆ. ಅಕ್ಷಯ್ ಕೂಡ ಇದಕ್ಕೆ ತಲೆ ಆಡಿಸಿದ್ದಾರೆ.
ಇನ್ನು, ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಕಾಂಬಿನೇಷನ್ ‘ಸೂರ್ಯವಂಶಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಆದರೆ, ಕೊವಿಡ್ ಎರಡನೇ ಅಲೆ ಇದಕ್ಕೆ ಆಸ್ಪದ ನೀಡಿಲ್ಲ. ಈಗ ಚಿತ್ರತಂಡದವರು ಸಿನಿಮಾ ರಿಲೀಸ್ಗೆ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ, ಈಗ ಇನ್ನೂ ಸ್ವಲ್ಪ ಸಮಯ ಕಾದು ಸಿನಿಮಾ ರಿಲೀಸ್ ಮಾಡುವಂತೆ ಅಕ್ಷಯ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಕ್ಷಯ್ ಕುಮಾರ್ ಸಿನಿಮಾ ಬ್ಯಾನ್ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್ ಆಫೀಸ್ ಕಲೆಕ್ಷನ್ಗೆ ಹೊಡೆತ
Published On - 7:14 am, Sun, 22 August 21