ಅಕ್ಷಯ್​ ಕುಮಾರ್ ಸಿನಿಮಾ ಬ್ಯಾನ್​ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ

ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಿದ್ದರೂ ಬೆಲ್​ ಬಾಟಮ್​ ನಿರ್ಮಾಪಕರು ದೊಡ್ಡ ರಿಸ್ಕ್​ ತೆಗೆದುಕೊಂಡು ಸಿನಿಮಾ ರಿಲೀಸ್​ ಮಾಡಿದ್ದಾರೆ.

ಅಕ್ಷಯ್​ ಕುಮಾರ್ ಸಿನಿಮಾ ಬ್ಯಾನ್​ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ
ಬೆಲ್​ಬಾಟಂ ಚಿತ್ರದಲ್ಲಿ ಅಕ್ಷಯ್ ಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 21, 2021 | 8:02 PM

ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್ ಸಾಕಷ್ಟು ಬದಲಾಗಿದ್ದಾರೆ. ದೇಶಭಕ್ತಿ ಪ್ರಧಾನ ಸಿನಿಮಾಗಳಿಗೆ ಅಕ್ಷಯ್​ ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ಕಾರಣಕ್ಕೆ ಅವರ ಅಭಿಮಾನಿ ಬಳಗ ಮತ್ತೂ ಹಿರಿದಾಗಿದೆ. ಈಗ ಅಕ್ಷಯ್​ ಕುಮಾರ್​ ನಟನೆಯ ಸ್ಪೈ ಥ್ರಿಲ್ಲರ್​ ‘ಬೆಲ್​ ಬಾಟಮ್’​ ರಿಲೀಸ್​ ಆಗಿದ್ದು ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾವನ್ನು ಪ್ರಮುಖ ಮೂರು ರಾಷ್ಟ್ರಗಳು ಬ್ಯಾನ್​ ಮಾಡಿವೆ ಅನ್ನೋದು ಬೇಸರದ ಸಂಗತಿ.  

ಕೊವಿಡ್​ ಎರಡನೇ ಅಲೆ ಕೊಂಚ ತಣ್ಣಗಾಗಿದೆ. ಈ ಮಧ್ಯೆ ಮೂರನೇ ಅಲೆ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಈ ಎಲ್ಲ ಬೆಳವಣಿಗೆಯಿಂದ ಚಿತ್ರಮಂದಿರಗಳು ಸಂಕಷ್ಟಕ್ಕೆ ಸಿಲುಕಿವೆ. ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರದಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಿದ್ದರೂ ಬೆಲ್​ ಬಾಟಮ್​ ನಿರ್ಮಾಪಕರು ದೊಡ್ಡ ರಿಸ್ಕ್​ ತೆಗೆದುಕೊಂಡು ಸಿನಿಮಾ ರಿಲೀಸ್​ ಮಾಡಿದ್ದಾರೆ. ​ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಕೆಲ ರಾಷ್ಟ್ರಗಳಲ್ಲಿ ಈ ಸಿನಿಮಾ ತೆರೆಕಂಡಿಲ್ಲ.

ಗಲ್ಫ್​ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವಾಯತ್​ ಹಾಗೂ ಖತಾರ್​ನಲ್ಲಿ ಈ ಸಿನಿಮಾ ತೆರೆಕಾಣಲು ಅವಕಾಶ ನೀಡಿಲ್ಲ. ಇದಕ್ಕೆ ಕಾರಣವೂ ಇದೆ. ಇದು ನೈಜ ಘಟನೆ ಆಧರಿಸಿ ಸಿದ್ಧಗೊಂಡ ಸಿನಿಮಾ. ಇದರಲ್ಲಿ ಬೇರೆ ರಾಷ್ಟ್ರಗಳ ಉಲ್ಲೇಖ ಕೂಡ ಇದೆ. ಆದರೆ, ನೈಜ ಅಂಶಗಳನ್ನು ತಿರುಚಲಾಗಿದೆ ಎಂಬುದು ಈ ಮೂರು ರಾಷ್ಟ್ರಗಳ ಆರೋಪ. ಈ ಕಾರಣಕ್ಕೆ ಸೌದಿ ಅರೇಬಿಯಾ, ಕುವಾಯತ್​ ಹಾಗೂ ಖತಾರ್​​ನಲ್ಲಿ ಸಿನಿಮಾ ತೆರೆಕಾಣೋಕೆ ಅವಕಾಶ ಇಲ್ಲ.

‘ಬೆಲ್ ಬಾಟಮ್‌’ ದ್ವಿತೀಯಾರ್ಧದಲ್ಲಿ ಅಪಹರಣಕಾರರು ಲಾಹೋರ್‌ನಿಂದ ವಿಮಾನವನ್ನು ದುಬೈಗೆ ತೆಗೆದುಕೊಂಡು ಹೋಗಿದ್ದನ್ನು ತೋರಿಸಲಾಗಿದೆ. 1984ರಲ್ಲಿ ನಡೆದ ನೈಜ ಘಟನೆಯ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್ ರಕ್ಷಣಾ ಸಚಿವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ವೈಯಕ್ತಿಕವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದರು ಎನ್ನಲಾಗಿದೆ.  ಆದರೆ, ಸಿನಿಮಾದಲ್ಲಿ ಈ ಕಥೆಯನ್ನು ಬದಲಾಯಿಸಲಾಗಿದೆ ಎನ್ನುವ ಆರೋಪ ಈ ದೇಶಗಳದ್ದು. ಈ ಕಾರಣಕ್ಕೆ ಅಲ್ಲಿಯ ಸೆನ್ಸಾರ್​ ಮಂಡಳಿಯವರು ಸಿನಿಮಾ ರಿಲೀಸ್​ಗೆ ಅವಕಾಶ ನೀಡಿಲ್ಲ.

ಕೊರೊನಾ ಮಧ್ಯೆ ಸಿನಿಮಾ ಸಾಧಾರಣ ಕಲೆಕ್ಷನ್​ ಮಾಡುತ್ತಿದೆ. ಈ ಚಿತ್ರ ಶುಕ್ರವಾರ 2.75 ಕೋಟಿ ರೂಪಾಯಿ ಹಾಗೂ ಶನಿವಾರ 2.40 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎನ್ನಲಾಗಿದೆ. ಪಕ್ಕಾ ಲೆಕ್ಕಾಚಾರವನ್ನು ಚಿತ್ರತಂಡ ಇನ್ನಷ್ಟೇ ಬಿಟ್ಟುಕೊಡಬೇಕಿದೆ.

ಇದನ್ನೂ ಓದಿ: ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ