AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?

ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್ ಆಯ್ದುಕೊಳ್ಳುವ ಸಿನಿಮಾಗಳಲ್ಲಿ ಮನರಂಜನೆ ಜತೆ ಒಂದೊಳ್ಳೆಯ ಸಂದೇಶ ಇರುತ್ತದೆ. ಅಕ್ಷಯ್​ ಕುಮಾರ್​ ಹಲವು ಬಯೋಪಿಕ್​ನಲ್ಲಿ ನಟಿಸಿದ್ದಾರೆ ಕೂಡ.

ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?
ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?
TV9 Web
| Edited By: |

Updated on: Aug 09, 2021 | 5:19 PM

Share

ಟೋಕಿಯೋ ಒಲಿಂಪಿಕ್ಸ್ -2020ರಲ್ಲಿ ನೀರಜ್ ಚೋಪ್ರಾ ಅವರು ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ನೀರಜ್​ ಚೋಪ್ರಾ ಬಯೋಪಿಕ್​ಗೆ ನಟ ಅಕ್ಷಯ ಕುಮಾರ್​ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮೀಮ್​ಗಳು ಹರಿದಾಡಿದ್ದವು. ಆದರೆ, ಈ ವಿಚಾರದಲ್ಲಿ ಅಕ್ಷಯ್​ ಕುಮಾರ್​ ನೀಡಿದ ಹೇಳಿಕೆ ಭಿನ್ನವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್ ಆಯ್ದುಕೊಳ್ಳುವ ಸಿನಿಮಾಗಳಲ್ಲಿ ಮನರಂಜನೆ ಜತೆ ಒಂದೊಳ್ಳೆಯ ಸಂದೇಶ ಇರುತ್ತದೆ. ಅಕ್ಷಯ್​ ಕುಮಾರ್​ ಹಲವು ಬಯೋಪಿಕ್​ನಲ್ಲಿ ನಟಿಸಿದ್ದಾರೆ ಕೂಡ. ಈ ಎಲ್ಲಾ ಕಾರಣಕ್ಕೆ ಯಾವುದೇ ವ್ಯಕ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದರೆ, ಆ ವ್ಯಕ್ತಿಯ ಬಯೋಪಿಕ್​ನಲ್ಲಿ ಅಕ್ಷಯ್​ ನಟಿಸುತ್ತಾರೆ ಎನ್ನುವ ವಿಚಾರ ಮುನ್ನೆಲೆಗೆ ಬರುತ್ತದೆ.

ಈ ಬಾರಿ ನೀರಜ್​ ಒಲಂಪಿಕ್ಸ್​ನಲ್ಲಿ ಪದಕ ಗೆದ್ದಾಗ ಅಕ್ಷಯ್​ ಕುಮಾರ್​ ಅವರು ಜಾವೆಲಿನ್​ ಹಿಡಿದುಕೊಂಡಿದ್ದ ಹಳೆಯ ಫೋಟೋ ವೈರಲ್​ ಆಗಿತ್ತು. ನೀರಜ್​ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಿದ್ದಾರೆ ಎಂದು ಕೆಲವರು ಟ್ರೋಲ್​ ಮಾಡಿದ್ದರು. ಈ ಬಗ್ಗೆ ಅಕ್ಷಯ್​ ಪ್ರತಿಕ್ರಿಯೆ ನೀಡಿದ್ದಾರೆ.

‘ನೀರಜ್​ ಚೋಪ್ರಾ ಬಯೋಪಿಕ್​ಗೆ ಅಕ್ಷಯ್​ ತರಬೇತಿ ಆರಂಭಿಸಿದರು ಎಂದು ಕೆಲವರು ಹೇಳುತ್ತಿದ್ದಾರೆ. ಇದು ಸಾಕಷ್ಟು ಫನ್ನಿ ಎಂದು ನನಗನ್ನಿಸುತ್ತದೆ. ವೈರಲ್​ ಆದ ಫೋಟೋ ನನ್ನ ಮೊದಲ ಚಿತ್ರ ‘ಸೌಗಂಧ್​’ ಹಾಡೊಂದರಲ್ಲಿ ಬರುವ ದೃಶ್ಯ ಅದು. ನೀರಜ್​ ಸುಂದರವಾಗಿದ್ದಾರೆ. ನನ್ನ ಬಯೋಪಿಕ್​ನಲ್ಲಿ ಯಾರಾದರೂ ನಟಿಸಬೇಕು ಎಂದರೆ ಅದು ನೀರಜ್​’ ಎಂದು ನಕ್ಕಿದ್ದಾರೆ ಅಕ್ಷಯ್​ ಕುಮಾರ್.

ಅಕ್ಷಯ್ ಕುಮಾರ್​ ನಟನೆಯ ‘ಬೆಲ್​ ಬಾಟಂ’ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅತರಂಗಿ ರೇ, ರಾಮ್​ ಸೇತು, ರಕ್ಷಾ ಬಂದನ್​, ಬಚ್ಚನ್​ ಪಾಂಡೆ ಸೇರಿದಂತೆ ಹಲವಾರು ಸಿನಿಮಾಗಳು ಅಕ್ಷಯ್​ ಕುಮಾರ್​ ಕೈಯಲ್ಲಿವೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಅಕ್ಷಯ್​ ಕುಮಾರ್​ ಕಡೆಯಿಂದ ಸಿಗಲಿದೆ ಗಿಫ್ಟ್​; ಲೀಕ್​ ಆಯ್ತು ಬಿಗ್​ ನ್ಯೂಸ್​

Follow Us
TV9 Web
TV9 Web

TV9 Kannada

Read More
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!