AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವಿನ ಸಹಾಯದಿಂದ ಕಸದ ಬುಟ್ಟಿ ಬಳಿ ನೊಣಗಳು ಸುಳಿಯದಂತೆ ಮಾಡಬಹುದು

ಪ್ರತಿಯೊಬ್ಬರೂ ಸಹ ಅಡುಗೆಮನೆಯ ಒಂದು ಮೂಲೆಯಲ್ಲಿ ಕಸದ ಬುಟ್ಟಿ ಇಟ್ಟಿರುತ್ತಾರೆ. ತರಕಾರಿ ಸಿಪ್ಪೆಗಳಿಂದ ಹಿಡಿದು ಅಳಸಿದ ಆಹಾರದವರೆಗೆ ಎಲ್ಲಾ ರೀತಿಯ ಕಸವನ್ನು ಕೂಡ ಅದೇ ಬುಟ್ಟಿಗೆ ಹಾಕುವ ಕಾರಣ ಬುಟ್ಟಿಯಿಂದ ಹೊರ ಬರುವ ಕೆಟ್ಟ ವಾಸನೆಗೆ ಕೀಟ, ನೊಣಗಳು ಬರುತ್ತವೆ ಮತ್ತು ಕಸದ ಬುಟ್ಟಿ, ಅಡುಗೆ ಮನೆ ಸುತ್ತಲೂ ಸುಳಿದಾಡುತ್ತಿರುತ್ತವೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಕಸದ ಬುಟ್ಟಿ ಬಳಿ ಸುಳಿದಾಡುವ ನೊಣಗಳ ಕಾಟಕ್ಕೆ ಬ್ರೇಕ್‌ ಹಾಕಲು ಈ ಒಂದು ಸಲಹೆಯನ್ನು ಅನುಸರಿಸಿ.

ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವಿನ ಸಹಾಯದಿಂದ ಕಸದ ಬುಟ್ಟಿ ಬಳಿ ನೊಣಗಳು ಸುಳಿಯದಂತೆ ಮಾಡಬಹುದು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 17, 2026 | 7:54 PM

Share

ಹೆಚ್ಚಿನವರು ಅಡುಗೆಮನೆಯ ಒಂದು ಮೂಲೆಯಲ್ಲಿ ಕಸದ ಬುಟ್ಟಿಯನ್ನು (dustbins) ಇಟ್ಟಿರುತ್ತಾರೆ. ಹಣ್ಣು ತರಕಾರಿಗಳ ಸಿಪ್ಪೆಗಳಿಂದ ಹಿಡಿದು ಅಳಸಿದ ಆಹಾರ, ಬಳಸಿ ಟೀ, ಕಾಫಿ ಪುಡಿ ಎಲ್ಲವನ್ನೂ ಕಸದ ಬುಟ್ಟಿಗೆ ಹಾಕಿಬಿಡುತ್ತೇವೆ. ಇವೆಲ್ಲವೂ ತೇವಯುಕ್ತವಾಗಿರುವುದರಿಂದ ಕಸದ ಬುಟ್ಟಿಯಿಂದ ವಾಸನೆ ಬರಲು ಪ್ರಾರಂಭಿಸುತ್ತದೆ ಮತ್ತು ಇದು ಕೀಟ, ನೊಣಗಳನ್ನು  ಸಹ ಆಕರ್ಷಿಸುತ್ತವೆ. ಹೀಗೆ ಬರುವ ನೊಣಗಳು ಕಸದ ಬುಟ್ಟಿಯ ಸುತ್ತಾ ಸುಳಿದಾಡುತ್ತಾ ಅಲ್ಲೇ ಮೊಟ್ಟೆಯಿಟ್ಟು ಸಂತಾನೋತ್ಪತ್ತಿಯನ್ನು ಮಾಡುತ್ತವೆ. ನೊಣಗಳ ಕಾಟ ಹೆಚ್ಚಾದಂತೆ ನಮ್ಮ ಆರೋಗ್ಯವೂ ಹದಗೆಡುತ್ತಾ ಬರುತ್ತದೆ. ಆದ್ದರಿಂದ ಕಸದ ಬುಟ್ಟಿ ಬಳಿ ನೊಣಗಳು ಸುಳಿದಾಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಈ ಸಮಸ್ಯೆಗೆ ಮುಕ್ತಿ ಪಡೆಯಲು ಹೆಚ್ಚೇನು ಖರ್ಚು ಮಾಡಬೇಕಿಲ್ಲ. ಅಡುಗೆ ಮನೆಯಲ್ಲಿ ಲಭ್ಯವಿರುವ ಲವಂಗದಿಂದ ಸುಲಭ ಪರಿಹಾರವನ್ನು ಪಡೆಯಬಹುದು. ಅದು ಹೇಗೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕಸದ ಬುಟ್ಟಿಗೆ ನೊಣಗಳು ಆವರಿಸದಂತೆ ತಡೆಯಲು ಏನು ಮಾಡಬೇಕು?

ಲವಂಗ: ಕಸದ ಬುಟ್ಟಿಯಿಂದ ಬರುವ ಕೆಟ್ಟ ವಾಸನೆ ನೊಣಗಳನ್ನು ಆಕರ್ಷಿಸುತ್ತವೆ. ಹೀಗಿರುವಾಗ ಅಡುಗೆ ಮನೆಯಲ್ಲಿಯೇ ಲಭ್ಯವಿರುವ ಲವಂಗದ ಸಹಾಯದಿಂದ ಈ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು. ಲವಂಗವು ಕಟುವಾದ ವಾಸನೆಯನ್ನು ಹೊಂದಿದ್ದು, ಇದು ಕೀಟ, ಸೊಳ್ಳೆಗಳನ್ನು ದೂರವಿಡುತ್ತದೆ. ಹೀಗಿರುವಾಗ ನೀವು ನಾಲ್ಕರಿಂದ ಐದು ಲವಂಗವನ್ನು ತೆಗೆದುಕೊಂಡು ಅದನ್ನು ಕಸದ ಬುಟ್ಟಿಯ ಮೇಲೆ ಇಡುವುದರಿಂದ ನೊಣಗಳು ಬರುವುದನ್ನು ತಡೆಯಬಹುದು. ಇದಲ್ಲದೆ ನೀವು ಕಸದ ಬುಟ್ಟಿಯ ಅಡಿಯಲ್ಲೂ ಲವಂಗವನ್ನು ಇಡಬಹುದು. ಇದು ನೊಣಗಳು ಕಸದ ಬುಟ್ಟಿ ಬಳಿ ಸುಳಿದಾಡದಂತೆ ನೋಡಿಕೊಳ್ಳಲು ತುಂಬಾನೇ ಸಹಕಾರಿ.

ಇದನ್ನೂ ಓದಿ: ಡಬ್ಬಗಳಲ್ಲಿ ಶೇಖರಿಸಿಡುವ ಅಕ್ಕಿಯಲ್ಲಿ ಹುಳಗಳಾಗಂತೆ ತಡೆಯಲು ಈ ಸಿಂಪಲ್‌ ಟಿಪ್ಸ್‌ ಪಾಲಿಸಿ

ಲವಂಗದ ಎಣ್ಣೆ: ಇದಲ್ಲದೆ ಸ್ಪ್ರೇ ಬಾಟಲಿಯಲ್ಲಿ ಲವಂಗ ಎಣ್ಣೆಯನ್ನು ತುಂಬಿಸಿ ಮತ್ತು ಅದನ್ನು ಕಾಲಕಾಲಕ್ಕೆ ಕಸದ ಬುಟ್ಟಿಯ ಒಳಗೆ ಮತ್ತು ಹೊರಗೆ ಮತ್ತು ಕಸದ ಬುಟ್ಟಿಯ ಸುತ್ತಲೂ  ಸಿಂಪಡಿಸಿ. ಇದು ನೊಣಗಳು ಸುಳಿದಾಡುವುದನ್ನು ತಡೆಯುವುದು ಮಾತ್ರವಲ್ಲ ಕಸದ ಬುಟ್ಟಿ ವಾಸನೆ ಬರುವುದನ್ನು ಸಹ ತಡೆಯುತ್ತದೆ.

ನಿಂಬೆ ಮತ್ತು ಲವಂಗ: ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರೊಳಗೆ 7-8 ಲವಂಗ ಹಾಕಿ. ಅದನ್ನು ಕಸದ ಬುಟ್ಟಿಯ ಮೇಲೆ ಅಥವಾ ಪಕ್ಕದಲ್ಲಿಯೇ ಇಟ್ಟು ಬಿಡಿ. ಇವೆರಡರ  ನೈಸರ್ಗಿಕ ಪರಿಮಳವು ನೊಣಗಳನ್ನು ದೂರವಿಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ