AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತೀವ್ರಗತಿಯಲ್ಲಿ ಸಾಗುತ್ತಿದೆ. ಕೋರ್ಟ್ ವಿಚಾರಣೆಯಲ್ಲಿ ತಮಗೆ ಖುದ್ದಾಗಿ ಹಾಜರಾಗಲು ಅವಕಾಶ ಕೇಳಿದ್ದ ನಟ ದರ್ಶನ್ ಅವರ ಮನವಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಆರೋಪಿಗಳು ತಮ್ಮ ವಕೀಲರೊಂದಿಗೆ ಮಾತನಾಡಲು ಖಾಸಗಿತನದ ವ್ಯವಸ್ಥೆ ಕಲ್ಪಿಸಲು ಕೋರ್ಟ್ ಸೂಚನೆ ನೀಡಿದೆ.

ದರ್ಶನ್ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ
Renukaswamy, Darshan
ರಮೇಶ್​ ಎಮ್​.
| Edited By: |

Updated on: Aug 17, 2026 | 4:14 PM

Share

ಮುಖ್ಯಾಂಶಗಳು

  • ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ.
  • ಖುದ್ದು ಹಾಜರಿಗೆ ವಿರೋಧ ವ್ಯಕ್ತಪಡಿಸಿದ್ದ ಎಸ್‌ಪಿಪಿ ವಾದವನ್ನು ಮನ್ನಿಸಿರುವ ಕೋರ್ಟ್.
  • ಆದರೆ ಸಾಕ್ಷಿಗಳ ಹೇಳಿಕೆ ಸ್ಪಷ್ಟವಾಗಿ ಕೇಳಲು ತಾಂತ್ರಿಕ ವ್ಯವಸ್ಥೆ ಕಲ್ಪಿಸುವಂತೆ ಕೋರ್ಟ್ ಸೂಚನೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಕೋರ್ಟ್ ವಿಚಾರಣೆಯಲ್ಲಿ ತಮಗೆ ವಿಡಿಯೋ ಕಾನ್ಫರೆನ್ಸ್ ಬದಲು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ನಟ ದರ್ಶನ್ ಅವರು ಮನವಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಂದು (ಆಗಸ್ಟ್ 17) ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಆದೇಶ ಪ್ರಕಟಿಸಿದೆ. ದರ್ಶನ್ (Darshan Thoogudeepa) ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ಹಾಜರಿಗೆ ಸೂಚನೆ ನೀಡಲಾಗಿದೆ.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದರು. ಖುದ್ದು ಹಾಜರುಪಡಿಸಿದರೆ ಸಾಕ್ಷ್ಯ ವಿಚಾರಣೆ ವೇಳೆ ಸೂಚನೆ ಪಡೆಯಲು ಅನುಕೂಲ ಆಗುತ್ತದೆ. ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಎಸ್​ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.

‘ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಕಾನೂನಿನಲ್ಲೇ ಅವಕಾಶವಿದೆ. ದರ್ಶನ್ ಅವರನ್ನು ಖುದ್ದು ಹಾಜರುಪಡಿಸಿದರೆ ಕೋರ್ಟ್ ಕಲಾಪಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಖುದ್ದು ಹಾಜರಿ ಅಗತ್ಯವಿಲ್ಲ’ ಎಂದು ಪ್ರಸನ್ನ ಕುಮಾರ್ ವಾದ ಮಾಡಿದ್ದರು. ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಕಾಯ್ದಿರಿಸಿದ್ದರು. ಇಂದು ಆದೇಶ ಪ್ರಕಟ ಆಗಿದ್ದು, ದರ್ಶನ್ ಅವರಿಗೆ ಹಿನ್ನಡೆ ಆಗಿದೆ.

ಇದನ್ನೂ ಓದಿ: ಮಾಫಿ ಸಾಕ್ಷಿ: ನಟ ದರ್ಶನ್ ಮೇಲ್ಮನವಿ ವಜಾ; ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ

ಆರೋಪಿಗಳು ತಮ್ಮ ವಕೀಲರೊಂದಿಗೆ ಮಾತನಾಡಲು ಖಾಸಗಿತನದ ವ್ಯವಸ್ಥೆ ಕಲ್ಪಿಸಲು ಕೋರ್ಟ್ ಸೂಚನೆ ನೀಡಿದೆ. ನಿಯಮ 8.3 ಅಡಿಯಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಸಾಕ್ಷ್ಯ ವಿಚಾರಣೆ ವೇಳೆ ಅಗತ್ಯವಿರುವಾಗ ಸಂಪರ್ಕದ ಅವಕಾಶ ನೀಡಬೇಕು. ಸಾಕ್ಷ್ಯ ವಿಚಾರಣೆಗೆ ಮೊದಲು, ನಡುವೆ, ನಂತರ ಸಂಪರ್ಕಿಸಬಹುದು. ಸಾಕ್ಷಿಗಳ ಹೇಳಿಕೆಯನ್ನು ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಥೆ ಕಲ್ಪಿಸಿ ಎಂದು ಸಿವಿಲ್ ಕೋರ್ಟ್​ನ ತಾಂತ್ರಿಕ ವಿಭಾಗಕ್ಕೆ ಕೋರ್ಟ್ ಸೂಚನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು