ಸೂರ್ಯ ಜೊತೆ ಸಿನಿಮಾ ಯಾವಾಗ? ಜಾಣತನದ ಉತ್ತರ ನೀಡಿದ ರಾಜಮೌಳಿ
ತಮಿಳು ನಟ ಸೂರ್ಯ ಹಾಗೂ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕಾಂಬಿನೇಷನ್ ಸಿನಿಮಾ ಕುರಿತಾದ ಪ್ರಶ್ನೆಗೆ ರಾಜಮೌಳಿ ನೀಡಿದ ಜಾಣತನದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಪ್ರಚಾರ ಕಾರ್ಯಕ್ರಮದಲ್ಲಿ ರಾಜಮೌಳಿ ಚತುರತೆಯಿಂದ ಉತ್ತರಿಸಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡರು. ಈ ವಿಡಿಯೋ ವೈರಲ್ ಆಗಿದೆ.

ಮುಖ್ಯಾಂಶಗಳು
- ಸೂರ್ಯ ಕಾಂಬಿನೇಷನ್ ಸಿನಿಮಾ ಯಾವಾಗ?
- ವೇದಿಕೆಯಲ್ಲೇ ರಾಜಮೌಳಿ ನೀಡಿದ ಸೀಕ್ರೆಟ್ ಆನ್ಸರ್
- ಸೂರ್ಯ ಎದುರಲ್ಲೇ ಗೆದ್ದ ಎಸ್.ಎಸ್. ರಾಜಮೌಳಿ
ತಮಿಳು ನಟ ಸೂರ್ಯ ಹಾಗೂ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ದೀರ್ಘಕಾಲದಿಂದಲೂ ಇದೆ. ಇತ್ತೀಚೆಗೆ ನಡೆದ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಕಾರ್ಯಕ್ರಮದಲ್ಲಿ ಈ ಕುರಿತು ರಾಜಮೌಳಿ ಅವರಿಗೆ ನೇರ ಪ್ರಶ್ನೆ ಎದುರಾಯಿತು. ಅವರು ಜಾಣತನದ ಯತ್ತರ ನೀಡಿದ್ದಾರೆ.
‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜಮೌಳಿ ಅವರಿಗೆ, ಸೂರ್ಯ ಅವರೊಂದಿಗಿನ ಕಾಂಬಿನೇಷನ್ ಸಿನಿಮಾ ಯಾವಾಗ ಎಂದು ನಿರೂಪಕಿ ಪ್ರಶ್ನಿಸಿದರು. ಈ ವೇಳೆ ನಗುಮುಖದಿಂದಲೇ ಉತ್ತರಿಸಿದ ರಾಜಮೌಳಿ, ‘ನನಗೆ ಈ ಪ್ರಶ್ನೆ ಎದುರಾಗುತ್ತದೆ ಎಂದು ಮೊದಲೇ ತಿಳಿದಿತ್ತು. ಅದಕ್ಕಾಗಿ ಉತ್ತರ ಸಿದ್ಧಪಡಿಸಿಕೊಂಡೇ ಬಂದಿದ್ದೇನೆ’ ಎಂದರು.
ಮುಂದುವರಿದು ಮಾತನಾಡಿದ ಅವರು, ‘ನಾವು ಇಲ್ಲಿಗೆ ಬಂದಿರುವುದು ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾವನ್ನು ಪ್ರಚಾರ ಮಾಡಲು. ನಾನು ಈಗ ಸೂರ್ಯ ಹಾಗೂ ನನ್ನ ಕಾಂಬಿನೇಷನ್ ಬಗ್ಗೆ ಏನಾದರೂ ಮಾತನಾಡಿದರೆ, ಅದೇ ಮುಖ್ಯ ಸುದ್ದಿಯಾಗುತ್ತದೆ. ಆಗ ಈ ಸಿನಿಮಾ ಹಿನ್ನೆಲೆಗೆ ಸರಿದುಬಿಡುತ್ತದೆ. ಅದಕ್ಕಾಗಿಯೇ ನಾನು ಆ ಅವಕಾಶ ನೀಡುವುದಿಲ್ಲ’ ಎಂದು ಜಾಣತನದಿಂದ ಉತ್ತರಿಸಿ ನಗೆಚಟಾಕಿ ಹಾರಿಸಿದರು.
Suriya–Rajamouli Combo & #Varanasi Exclusive Update:@ssrajamouli answers both questions! pic.twitter.com/OXRBvraLl2
— M9 NEWS (@M9News_) September 27, 2026
ಇದೇ ವೇಳೆ, ರಾಜಮೌಳಿ ಅವರು ತಾವು ಮತ್ತು ಸೂರ್ಯ ಒಂದಾಗಿ ಸಿನಿಮಾ ಮಾಡಿದರೆ ಅದು ಖಂಡಿತವಾಗಿಯೂ ಅತ್ಯಂತ ವಿಶೇಷವಾಗಿರಲಿದೆ ಎಂಬ ಭರವಸೆಯನ್ನೂ ನೀಡಿದರು. ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ನಟ ಸೂರ್ಯ ಹಾಗೂ ಮುಂಭಾಗದಲ್ಲಿದ್ದ ಪ್ರೇಕ್ಷಕರು ರಾಜಮೌಳಿ ಅವರ ಈ ಚತುರ ಉತ್ತರವನ್ನು ಕೇಳಿ ಚಪ್ಪಾಳೆ ತಟ್ಟಿದರು.
ಇದನ್ನೂ ಓದಿ: ರಿಲೀಸ್ಗೆ 200 ದಿನ ಬಾಕಿ ಇರುವಾಗ ‘ವಾರಣಾಸಿ’ ಶೂಟಿಂಗ್ ಮುಗಿಸಿದ ರಾಜಮೌಳಿ
ರಾಜಮೌಳಿ ಅವರು ಸದ್ಯ ‘ವಾರಣಾಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ರಿಲೀಸ್ಗೆ ಇನ್ನೂ 6-7 ತಿಂಗಳು ಬಾಕಿ ಇರುವಾಗಲೇ ಅವರು ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:34 am, Mon, 28 September 26




