Video: ಐಷಾರಾಮಿ ಬದುಕಿಗೆ ಗುಡ್ ಬೈ ಹೇಳಿ ಭಾರತದ ಸೊಸೆಯಾದ ವಿದೇಶಿ ಮಹಿಳೆ
ಸಿಟಿಯಲ್ಲಿ ಬೆಳೆದ ಹೆಣ್ಮಕ್ಳಳಿಗೆ ಹಳ್ಳಿಯಲ್ಲಿ ಜೀವನ ನಡೆಸೋದು ಕಷ್ಟ. ಆದರೆ ಇಲ್ಲೊಬ್ಬ ವಿದೇಶಿ ಮಹಿಳೆ ಹಳ್ಳಿ ಜೀವನಕ್ಕೆ ಒಗ್ಗಿಕೊಂಡ ರೀತಿ ನಿಮ್ಮನ್ನು ಹುಬ್ಬೇರಿಸುವಂತೆ ಮಾಡಿದೆ. ಅಮೆರಿಕದ ಐಷಾರಾಮಿ ಜೀವನ ತೊರೆದು ಹಳ್ಳಿಯೊಂದರಲ್ಲಿ ಭಾರತೀಯ ಪತಿಯೊಂದಿಗೆ ಖುಷಿಯಿಂದ ಬದುಕುತ್ತಿದ್ದಾರೆ. ಈ ವಿದೇಶಿ ಮಹಿಳೆಯ ದೈನಂದಿನ ಜೀವನದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ವಿದೇಶಿಗರು (foreigner) ಭಾರತೀಯರನ್ನು ಮೆಚ್ಚಿ ಮದ್ವೆಯಾಗ್ತಾರೆ. ಕೆಲವರು ಇಲ್ಲಿನ ಆಚಾರ ವಿಚಾರ, ಸಂಸ್ಕೃತಿಗೆ ಹೊಂದಿಕೊಂಡು ಇಲ್ಲೇ ಸೆಟ್ಲ್ ಆಗ್ತಾರೆ. ಇದಕ್ಕೆ ಉದಾಹರಣೆಯಂತಿದ್ದಾರೆ ಅಮೆರಿಕನ್ ಮಹಿಳೆ. ಭಾರತೀಯನನ್ನು ಮದುವೆಯಾದ ವಿದೇಶಿ ಮಹಿಳೆ ಬಿಹಾರದ ಹಳ್ಳಿಯೊಂದರಲ್ಲಿ ನೆಲೆಸಿದ್ದಾರೆ. ಇದೀಗ ಇಷ್ಟ ಪಟ್ಟು ಮನೆ ಕೆಲಸವನ್ನು ನಿರ್ವಹಿಸುವ ಈ ವಿದೇಶಿಗಳ ವಿಡಿಯೋ ಸದ್ಯ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
ಹಳ್ಳಿ ಲೈಫ್ ಎಂಜಾಯ್ ಮಾಡುವ ವಿದೇಶಿ ಮಹಿಳೆ
ಸಿಂಗ್ ಫ್ಯಾಮಿಲಿ (Singhfamily2.0) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವಿದೇಶಿ ಮಹಿಳೆ ಬಟ್ಟೆ ತೊಳೆಯುವುದು, ಅಡುಗೆ ಮನೆ ಮಾಡುವುದು ಹೀಗೆ ದೈನಂದಿನ ಕೆಲಸವನ್ನು ಖುಷಿಯಿಂದಲೇ ಮಾಡುತ್ತಿರುವುದನ್ನು ಕಾಣಬಹುದು. ವಿದೇಶಿ ಮಹಿಳೆ ಮನೆ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಿದ್ದು, ಹಳ್ಳಿ ಬದುಕನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಭಾರತಕ್ಕೆ ಸುತ್ತಾಡಲೆಂದು ಬರುವವರಿಗೆ ಕಿವಿಮಾತು ಹೇಳಿದ ವಿದೇಶಿ ಮಹಿಳೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನೀವು ನಿಜವಾದ ಭಾರತೀಯ ಹೌಸ್ ವೈಫ್ ಎಂದಿದ್ದಾರೆ. ಇನ್ನೊಬ್ಬರು, ಮೈಂಡ್ ಸೆಟ್ ಹಾಗೂ ವಿಲ್ ಪವರ್ ಬಹಳ ಮುಖ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತೀಯರಿಗೂ ಈ ವಿದೇಶಿ ಮಹಿಳೆ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




