AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಭಾರತಕ್ಕೆ ಸುತ್ತಾಡಲೆಂದು ಬರುವವರಿಗೆ ಕಿವಿಮಾತು ಹೇಳಿದ ವಿದೇಶಿ ಮಹಿಳೆ

ಭಾರತಕ್ಕೆ ಬರುವ ವಿದೇಶಿಗರಿಗೆ ವಿವಿಧ ರೀತಿ ಅನುಭವ ಆಗೋಗಿದೆ. ಆದರೆ ಇದೀಗ ವಿದೇಶಿ ಮಹಿಳೆಯೊಬ್ಬಳು ಭಾರತಕ್ಕೆ ಬರುವ ಮುನ್ನ ಈ ಕೆಲವು ವಿಷ್ಯಗಳು ನಿಮ್ಗೆ ತಿಳಿದಿರಲಿ ಎಂದು ಸಲಹೆ ನೀಡಿದ್ದಾರೆ. ಹೌದು, ಈ ಭಾರತವು ಕೇವಲ ಒಂದು ಪ್ರವಾಸಿ ತಾಣವಲ್ಲ, ಇದು ನಿಮ್ಮನ್ನೇ ಸಂಪೂರ್ಣವಾಗಿ ಬದಲಾಯಿಸಬಲ್ಲ ಒಂದು ಸುಂದರ ಅನುಭವ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಾರತಕ್ಕೆ ಸುತ್ತಾಡಲೆಂದು ಬರುವವರಿಗೆ ಕಿವಿಮಾತು ಹೇಳಿದ ವಿದೇಶಿ ಮಹಿಳೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 16, 2026 | 3:13 PM

Share

ವಿದೇಶಿಗರು (foreigner) ಭಾರತಕ್ಕೆ ಬಂದು ಎಂಜಾಯ್ ಮಾಡುತ್ತಾರೆ. ಇಲ್ಲಿನ ಆಚಾರ ವಿಚಾರ, ಸಂಸ್ಕೃತಿ, ಆಹಾರ ಪದ್ಧತಿಯ ಬಗ್ಗೆ ತಿಳಿದುಕೊಳ್ಳಲು ಇಷ್ಟ ಪಡ್ತಾರೆ. ಆದರೆ ಇದೀಗ ವಿದೇಶಿ ಮಹಿಳೆ ಭಾರತಕ್ಕೆ ಬರಲು ಬಯಸುವವರಿಗೆ ಸಲಹೆ ನೀಡಿದ್ದಾರೆ. ಭಾರತದ ಈ ಕೆಲ ವಿಷ್ಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಕಿವಿ ಮಾತು ಹೇಳಿದ್ದಾರೆ. ಭಾರತ ಟ್ರಿಪ್ ಎಂಜಾಯ್ ಮಾಡುತ್ತಿರುವ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಟ್ರಿಪ್ ಎಂಜಾಯ್ ಮಾಡುತ್ತಿರುವ ವಿದೇಶಿ ಮಹಿಳೆ

ಸೋಲೋ ಫೀಮೇಲ್ ಟ್ರಾವೆಲ್ (Solo female travel) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲೋ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿದೇಶಿ ಮಹಿಳೆ ಭಾರತ ಪ್ರವಾಸ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಭಾರತಕ್ಕೆ ಬರುವವರಿಗೆ ವಿದೇಶಿ ಮಹಿಳೆಯ ಕಿವಿಮಾತು

ಈ ವಿಡಿಯೋದಲ್ಲಿ ಭಾರತವು ಕೇವಲ ಒಂದು ಪ್ರವಾಸಿ ತಾಣವಲ್ಲ; ಇದು ನಿಮ್ಮನ್ನೇ ಸಂಪೂರ್ಣವಾಗಿ ಬದಲಾಯಿಸಬಲ್ಲ ಒಂದು ಅನುಭವ. ಆದರೆ ಇಲ್ಲಿಗೆ ಬರುವ ಮುನ್ನ, ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಮೊದಲನೇಯದು ಭಾರತವು ನಿಮ್ಮ ನಿರೀಕ್ಷೆಗಳಿಗೆ ಸವಾಲೊಡ್ಡಬಹುದು. ಇಲ್ಲಿನ ಗದ್ದಲ, ಸಂಚಾರ ದಟ್ಟಣೆ, ಜನಸಂದಣಿ ಆರಂಭದಲ್ಲಿ ಎಲ್ಲವೂ ನಿಮಗೆ ಅತಿಯೆನಿಸಬಹುದು ಅಥವಾ ದಿಗ್ಭ್ರಮೆಗೊಳಿಸಬಹುದು. ಪರಿಸ್ಥಿತಿಗೆ ಹೊಂದಿಕೊಳ್ಳಲು ನಿಮಗೆ ನೀವೇ ಸಮಯ ನೀಡಿ ಎಂದು ಸಲಹೆ ನೀಡಿದ್ದಾರೆ.

ಈ ಟ್ರಿಪ್ ಅನುಭವ ಆರಾಮದಾಯಕವಾಗಿರುವುದಿಲ್ಲ

ಎರಡನೇಯದು ಪ್ರತಿಯೊಂದು ಅನುಭವವೂ ಆರಾಮದಾಯಕವಾಗಿ ಇರುವುದಿಲ್ಲ. ಜನರು ನಿಮ್ಮನ್ನು ದಿಟ್ಟಿಸಿ ನೋಡಬಹುದು, ನಿಮ್ಮಿಂದ ಹೆಚ್ಚು ಹಣ ವಸೂಲಿ ಮಾಡಬಹುದು ಅಥವಾ ಈ ವರ್ತನೆಗಳಿಂದ ದಣಿದುಹೋಗಬಹುದು. ಒಂಟಿಯಾಗಿ ಪ್ರಯಾಣಿಸುವ ಮಹಿಳೆಯಾಗಿ ಆತ್ಮವಿಶ್ವಾಸದಿಂದ ಇರಿ ಹಾಗೂ ಸ್ಪಷ್ಟವಾದ ಗಡಿಗಳನ್ನು ನಿಗದಿಪಡಿಸಿಕೊಳ್ಳಿ. ಮೂರನೇಯದು ಭಾರತವು ಅತ್ಯಂತ ಸುಂದರವಾದ ರೀತಿಯಲ್ಲಿ ನಿಮಗೆ ಆಶ್ಚರ್ಯ ಉಂಟು ಮಾಡುತ್ತದೆ. ಅಪರಿಚಿತರ ದಯೆ, ಆಹಾರ, ಆಧ್ಯಾತ್ಮಿಕತೆ ಮತ್ತು ಇಲ್ಲಿ ಬೆಸೆದುಕೊಳ್ಳುವ ಬಾಂಧವ್ಯಗಳು ನಿಮ್ಮೊಂದಿಗೆ ಶಾಶ್ವತವಾಗಿ ಉಳಿದುಕೊಳ್ಳುತ್ತವೆ ಎಂದು ಬರೆದಿದ್ದಾರೆ.

ಟ್ರಿಪ್‌ಗಾಗಿ ಭಾರತವನ್ನು ಆಯ್ಕೆ ಮಾಡಿಕೊಳ್ಳಿ

ನಾನು ಅನೇಕ ದೇಶಗಳಿಗೆ ಪ್ರಯಾಣಿಸಿದ್ದೇನೆ, ಆದರೆ ಭಾರತವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದನ್ನೆಲ್ಲಾ ಕೇಳಿದ ನಂತರವೂ ನೀವು ಭಾರತಕ್ಕೆ ಭೇಟಿ ನೀಡಲು ಬಯಸುತ್ತೀರಾ?.ನಿಮ್ಮ ಮುಂದಿನ ಪ್ರವಾಸಕ್ಕಾಗಿ ಈ ದೇಶವನ್ನು ಆಯ್ಕೆ ಮಾಡಿಕೊಳ್ಳಿ. ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿರುವವರಿಗೆ ಇದನ್ನು ಕಳುಹಿಸಿ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಇದೇ ಕಣ್ರೀ ನಿಜವಾದ ಮಾನವೀಯತೆ; ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ಧ ವ್ಯಕ್ತಿಗೆ ಸಹಾಯ ಮಾಡಿದ ವಿದೇಶಿಗ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಏನಾಯಿತು ಎಂದು ಕೇಳಿದ್ದಾರೆ. ಮತ್ತೊಬ್ಬರು, ಎಲ್ಲಾ ಅನುಭವವಾದ್ರೆ ಮಾತ್ರ ಪ್ರವಾಸ ಚಂದ ಎಂದಿದ್ದಾರೆ. ಇನ್ನೊಬ್ಬರು, ಹೊಸ ಅನುಭವಗಳು ನಮ್ಮನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us