AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಸ್​​ ಮಾಡಬೇಕೆಂದರೂ ಅಭಿಮಾನಿಗಳು ಒಪ್ಪಲ್ಲ; ಬೇಸರ ತೋಡಿಕೊಂಡ ನಟಿ

ಪ್ರೀತಿಗೆ ಬೇರೆಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು, ಹೊಸ ಪಾತ್ರಗಳಿಗೆ ತೆರೆದುಕೊಳ್ಳಬೇಕು ಎನ್ನುವ ಆಸೆ ಇದೆ. ಆದರೆ, ಅಭಿಮಾನಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ.

ಕಿಸ್​​ ಮಾಡಬೇಕೆಂದರೂ ಅಭಿಮಾನಿಗಳು ಒಪ್ಪಲ್ಲ; ಬೇಸರ ತೋಡಿಕೊಂಡ ನಟಿ
ಕಿಸ್​​ ಮಾಡಬೇಕೆಂದರೂ ಅಭಿಮಾನಿಗಳು ಒಪ್ಪಲ್ಲ; ಬೇಸರ ತೋಡಿಕೊಂಡ ನಟಿ
TV9 Web
| Edited By: |

Updated on: Aug 22, 2021 | 1:31 PM

Share

ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಕೆಲ ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ ಅದೇ ರೀತಿಯ ಪಾತ್ರಗಳಲ್ಲಿ ನೋಡೋಕೆ ಅಭಿಮಾನಿಗಳು ಇಷ್ಟಪಡುತ್ತಾರೆ. ಇದಕ್ಕೆ ಪ್ರೀತಿ ಜಾಂಗಿಯಾನಿ ಉತ್ತಮ ಉದಾಹರಣೆ. ಇವರು ಸಿನಿಮಾಗಳಲ್ಲಿ ಸೀರೆಉಟ್ಟು ಲಕ್ಷಣವಾಗಿ ಕಾಣಿಸಿಕೊಳ್ಳುತ್ತಿದ್ದರು. ಅವರನ್ನು ಅದೇ ರೀತಿ ನೋಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಇದು ಅವರಿಗೆ ಉಸಿರುಗಟ್ಟಿಸುತ್ತಿದೆ.

ಪ್ರೀತಿಗೆ ಬೇರೆಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು, ಹೊಸ ಪಾತ್ರಗಳಿಗೆ ತೆರೆದುಕೊಳ್ಳಬೇಕು ಎನ್ನುವ ಆಸೆ ಇದೆ. ಆದರೆ, ಅಭಿಮಾನಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ‘ವಿಕ್ಟೋರಿಯಾ ನಂಬರ್​ 203 ಸಿನಿಮಾದಲ್ಲಿ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಇದು ನನಗೆ ಇಷ್ಟವಾಗಿತ್ತು. ಆದರೆ, ಫ್ಯಾನ್ಸ್​ಗೆ ಇದು ಇಷ್ಟವಾಗಿಲ್ಲ. ನಾನು ಇದನ್ನು ಬದಲಾಯಿಸೋಕೆ ಪ್ರಯತ್ನಿಸಿದ್ದೀನಿ. ಏನೇ ಮಾಡಿದರೂ ಇದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ’ ಎನ್ನುತ್ತಾರೆ ಪ್ರೀತಿ.

‘ಕಿಸ್ಸಿಂಗ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ನನಗೆ ಅನಿಸಿದರೂ ಅದನ್ನು ಮಾಡೋಕೆ ಸಾಧ್ಯವಾಗುವುದಿಲ್ಲ. ನನಗೆ ಒಂದೇ ಪಾತ್ರಕ್ಕೆ ಸೀಮಿತವಾಗೋಕೆ ಇಷ್ಟವಿಲ್ಲ. ಅಸಹಾಯಕ ಸೊಸೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳೋಕೆ ನನಗೆ ಮನಸ್ಸಿಲ್ಲ. ಆದರೆ, ಅದೇ ರೀತಿಯ ಪಾತ್ರಗಳು ನನ್ನ ಹುಡುಕಿಕೊಂಡು ಬರುತ್ತಿವೆ. ಇದನ್ನು ನಾನು ಒಪ್ಪಿಕೊಳ್ಳಲೇ ಬೇಕಿದೆ. ನನ್ನನ್ನು ಅಭಿಮಾನಿಗಳು ಒಂದು ಪಾತ್ರಕ್ಕೆ ಸೀಮಿತ ಮಾಡಿದ್ದಾರೆ’ ಎಂದು ಬೇಸರ ಹೊರಹಾಕುತ್ತಾರೆ ಅವರು.

1997ರಲ್ಲಿ ರಿಲೀಸ್​ ಆದ ‘ಯೇ ಹೇ ಪ್ರೇಮ್​’ ಆಲ್ಬಮ್​ ಮೂಲಕ ಬಣ್ಣದ ಲೋಕಕ್ಕೆ ಪ್ರೀತಿ ಪರಿಚಯಗೊಂಡರು. ನಂತರ ಅವರಿಗೆ ಸಿನಿಮಾ ಅವಕಾಶಗಳು ಬಂದವು. 1999ರಿಂದ ಇಲ್ಲಿಯವರೆಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2017ರಿಂದ ಈಚೆಗೆ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿಲ್ಲ. ಇವರಿಗೆ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಸದ್ಯ, ಕುಟುಂಬದವರ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ‘ಬಿಗ್​ ಬಾಸ್​ ಮನೆಯಲ್ಲಿ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ, ಆದರೆ ತೋರಿಸಿಲ್ಲ’; ಸತ್ಯ ಬಾಯ್ಬಿಟ್ಟ ಸ್ಪರ್ಧಿ

ಮಾಡೋಕೆ ಏನೂ ಕೆಲಸ ಇಲ್ಲದಿದ್ದರೆ ರಶ್ಮಿಕಾ ಮಂದಣ್ಣ ಏನು ಮಾಡ್ತಾರೆ? ಫೋಟೋ ಸಹಿತ ಸಿಕ್ತು ಉತ್ತರ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'