AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್​ ಮನೆಯಲ್ಲಿ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ, ಆದರೆ ತೋರಿಸಿಲ್ಲ’; ಸತ್ಯ ಬಾಯ್ಬಿಟ್ಟ ಸ್ಪರ್ಧಿ

ಊರ್ಫಿ ಜಾವೇದ್​ ಈ ರೀತಿಯ ಆರೊಪ ಮಾಡಿದವರು. ಅವರು ಈಗಾಗಲೇ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಾಗಿದೆ. ಆದರೆ, ಅವರು ದೊಡ್ಮನೆಯಲ್ಲಿದ್ದಾಗ ನೀಡಿದ ಹೇಳಿಕೆಯ ವಿಡಿಯೋ ಒಂದು ಈಗ ವೈರಲ್​ ಆಗುತ್ತಿದೆ.

‘ಬಿಗ್​ ಬಾಸ್​ ಮನೆಯಲ್ಲಿ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ, ಆದರೆ ತೋರಿಸಿಲ್ಲ’; ಸತ್ಯ ಬಾಯ್ಬಿಟ್ಟ ಸ್ಪರ್ಧಿ
ಉರ್ಫಿ ಜಾವೇದ್
TV9 Web
| Edited By: |

Updated on:Aug 22, 2021 | 8:50 AM

Share

ಟಿವಿಯಲ್ಲಿ ಪ್ರಸಾರವಾಗುವ ಬಿಗ್​ ಬಾಸ್​ಗೂ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ ಬಾಸ್​ಗೂ ಅಜಗಜಾಂತರ ವ್ಯತ್ಯಾಸವಿದೆ. ಟಿವಿಯಲ್ಲಾದರೆ ಕೆಲವೊಂದಷ್ಟು ಕಟ್ಟುಪಾಡುಗಳು ಎದುರಾಗುತ್ತವೆ. ಆದರೆ, ಒಟಿಟಿಯಲ್ಲಿ ಈ ರೀತಿಯ ನಿರ್ಬಂಧಗಳಿಲ್ಲ. ಇದರ ಲಾಭ ಪಡೆಯೋಕೆ ಸ್ಪರ್ಧಿಗಳು ಮುಂದಾಗಿದ್ದಾರೆ. ಇತ್ತೀಚೆಗೆ ಹಿಂದಿ ಬಿಗ್​ ಬಾಸ್​ ಒಟಿಟಿಯಲ್ಲಿ ಸ್ಪರ್ಧಿಗಳು ಪರಸ್ಪರ ಚುಂಬಿಸಿದ ದೃಶ್ಯ ವೈರಲ್​ ಆಗಿತ್ತು. ಈಗ ಬಿಗ್​ ಬಾಸ್​ ಮನೆಯಲ್ಲಿದ್ದ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ ಎಂದು ಸ್ಪರ್ಧಿಯೊಬ್ಬರು ಆರೋಪಿಸಿದ್ದಾರೆ.

ಊರ್ಫಿ ಜಾವೇದ್​ ಈ ರೀತಿಯ ಆರೊಪ ಮಾಡಿದವರು. ಅವರು ಈಗಾಗಲೇ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಾಗಿದೆ. ಆದರೆ, ಅವರು ದೊಡ್ಮನೆಯಲ್ಲಿದ್ದಾಗ ನೀಡಿದ ಹೇಳಿಕೆಯ ವಿಡಿಯೋ ಒಂದು ಈಗ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿದ ವೀಕ್ಷಕರು ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

‘ಬಿಗ್​ ಬಾಸ್​ ಒಟಿಟಿ ಮನೆಯಲ್ಲಿ ಸೆ* ನಡೆದಿದೆ. ಆದರೆ ಅದನ್ನು ನಿಮಗೆ ತೋರಿಸಿದ್ದಾರೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಕ್ಯಾಮೆರಾ ಎದುರೇ ಅದು ನಡೆದಿದ್ದಂತೂ ನಿಜ’ ಎಂದು ಕ್ಯಾಮೆರಾ ಎದುರು ಬಂದು ಊರ್ಫಿ ಹೇಳಿದ್ದಾರೆ. ಈ ವೇಳೆ ಅಲ್ಲೆ ಇದ್ದ ಮತ್ತೋರ್ವ ಸ್ಪರ್ಧಿ ಪ್ರತೀಜ್​ ಸೆಹಜ್​ಪಾಲ್​ ಶಾಕ್​ಗೆ ಒಳಗಾಗಿದ್ದಾರೆ. ಅಲ್ಲದೆ, ಅಚ್ಚರಿಯಿಂದ ‘ಏನು’ ಎಂದು ಕೇಳಿದ್ದಾರೆ.

ಆಗ ಊರ್ಫಿ, ‘ಮನೆಯಲ್ಲಿ ಸೆ* ನಡೆದಿದ್ದನ್ನು ನೀನು ನೋಡಿಲ್ಲವಾ? ಕ್ಯಾಮೆರಾ ಎದುರೇ ಅದು ನಡೆದಿದೆ’  ಎಂದಿದ್ದಾರೆ. ಇದನ್ನು ಕೇಳಿದ ಪ್ರತೀಜ್​ ತಲೆಕೆಡಿಸಿಕೊಂಡಿದ್ದಾರೆ. ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.  ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಊರ್ಫಿ ದೊಡ್ಮನೆಯಿಂದ ಹೊರ ಬಂದು ಒಂದು ವಾರದ ನಂತರದಲ್ಲಿ ಈ ಹೇಳಿಕೆ ವೈರಲ್​ ಆಗಿರೋದು ಅಚ್ಚರಿಯ ವಿಚಾರ.

ಊರ್ಫಿ ಬಿಗ್​ ಬಾಸ್​ ಸೇರಿದ ನಂತರದಲ್ಲಿ ಎಲ್ಲರ ಗಮನ ಸೆಳೆಯೋಕೆ ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಸ್ನೇಹಿತ ಜೀಶಾನ್​ ಖಾನ್​ ಜೊತೆ ಅವರ ಆಪ್ತವಾಗಿದ್ದರು. ಆದರೆ ಜೀಶಾನ್​ ಅವರಿಂದಲೇ ಊರ್ಫಿಗೆ ಬೆಂಬಲ ಸಿಗಲಿಲ್ಲ. ಹಾಗಾಗಿ ಅವರು ಎಲಿಮಿಮೇಟ್​ ಆಗಬೇಕಾಯಿತು. ಬಿಗ್​ ಬಾಸ್​ನಿಂದ ಹೊರ ಬರುವುದಕ್ಕೂ ಮುನ್ನ ಅವರು ಜೀಶಾನ್​ಗೆ ಹಿಗ್ಗಾಮುಗ್ಗ ಬೈಯ್ದು ಕೋಪ ತೀರಿಸಿಕೊಂಡಿದ್ದರು.

ಇದನ್ನೂ ಓದಿ: 17ನೇ ವಯಸ್ಸಿಗೆ ‘ಪೋರ್ನ್ ಸ್ಟಾರ್’ ಎಂಬ ಅಪವಾದ; ಮಾನಸಿಕ ಹಿಂಸೆ ನೀಡಿದ್ದ ತಂದೆ: ಬಿಗ್​ಬಾಸ್ ಸ್ಪರ್ಧೆಯ ದಾರುಣ ಕತೆಯಿದು 

ಕಸದ ಚೀಲವನ್ನೇ ಕಾಸ್ಟ್ಯೂಮ್​ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್​ ಬಾಸ್​ನಿಂದ ಔಟ್​; ನಿಲ್ಲದ ಕಣ್ಣೀರು

Published On - 7:50 am, Sun, 22 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್