17ನೇ ವಯಸ್ಸಿಗೆ ‘ಪೋರ್ನ್ ಸ್ಟಾರ್’ ಎಂಬ ಅಪವಾದ; ಮಾನಸಿಕ ಹಿಂಸೆ ನೀಡಿದ್ದ ತಂದೆ: ಬಿಗ್​ಬಾಸ್ ಸ್ಪರ್ಧೆಯ ದಾರುಣ ಕತೆಯಿದು 

Big Boss OTT: ಬಿಗ್​ಬಾಸ್ ಒಟಿಟಿ ಮನೆಯಿಂದ ಹೊರಹೋಗಿರುವ ಮೊದಲ ಸ್ಪರ್ಧಿ ಉರ್ಫಿ ಜಾವೇದ್ ಈ ಹಿಂದೆ ತಾವು ಅನುಭವಿಸಿದ್ದ ಕಷ್ಟಗಳನ್ನು ಎಳೆಎಳೆಯಾಗಿ ಹಂಚಿಕೊಂಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಬಲಿಯಾಗಿ, ನಂತರ ಮೇಲೆದ್ದು ನಿಂತ ಅವರು ಈಗ ಕಿರುತೆರೆ ನಟಿಯಾಗಿ ಬದುಕು ಕಟ್ಟಿಕೊಂಡು ಖ್ಯಾತರಾಗಿದ್ದಾರೆ.

17ನೇ ವಯಸ್ಸಿಗೆ ‘ಪೋರ್ನ್ ಸ್ಟಾರ್’ ಎಂಬ ಅಪವಾದ; ಮಾನಸಿಕ ಹಿಂಸೆ ನೀಡಿದ್ದ ತಂದೆ: ಬಿಗ್​ಬಾಸ್ ಸ್ಪರ್ಧೆಯ ದಾರುಣ ಕತೆಯಿದು 
ಉರ್ಫಿ ಜಾವೇದ್
Follow us
TV9 Web
| Updated By: shivaprasad.hs

Updated on: Aug 20, 2021 | 1:10 PM

ಬಿಗ್​ಬಾಸ್ ಒಟಿಟಿಯ ಮೂಲಕ ಜನಪ್ರಿಯಗೊಂಡ ನಟಿ ಉರ್ಫಿ ಜಾವೇದ್ ತಮ್ಮ ಬದುಕಿನ ದಾರುಣ ಕತೆಯನ್ನು ತೆರೆದಿಟ್ಟಿದ್ದಾರೆ. ತಮ್ಮದಲ್ಲದ ತಪ್ಪಿಗೆ ಕಷ್ಟಗಳನ್ನು ಅನುಭವಿಸಿದ್ದು, ಆ ಸಂದರ್ಭದಲ್ಲಿ ತಂದೆ ನೀಡಿದ ಮಾನಸಿಕ ಹಾಗೂ ದೈಹಿಕ ಹಿಂಸೆ, ಇವೆಲ್ಲವನ್ನೂ ಮೆಟ್ಟಿ ಮೇಲೇರಿ ಬಂದ ಪರಿ- ಈ ಎಲ್ಲವನ್ನೂ ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆರ್​ಜೆ ಸಿದ್ಧಾರ್ಥ್ ಕಣ್ಣನ್ ಜೊತೆ ಮಾತನಾಡುತ್ತಾ ಉರ್ಫಿ ತಮ್ಮ ಬದುಕಿನ ಕರಾಳ ಘಟನೆಗಳನ್ನು ತೆರೆದಿಟ್ಟಿದ್ದಾರೆ. ಈ ಎಲ್ಲಾ ಘಟನೆಗಳು ನಡೆದಾಗ ಉರ್ಫಿ ಇನ್ನೂ ಕಾಲೇಜು ಮೆಟ್ಟಿಲು ಹತ್ತಿರಲಿಲ್ಲವಂತೆ. ಅಶ್ಲೀಲ ಚಿತ್ರ ಪ್ರಸಾರ ಮಾಡುವ ಸೈಟ್ ಒಂದರಲ್ಲಿ ಉರ್ಫಿ ಅವರ ಚಿತ್ರಗಳು ಪ್ರಕಟವಾಗಿದ್ದವಂತೆ. ಯಾರೋ ಮಾಡಿದ ಕೆಟ್ಟ ಕೆಲಸಕ್ಕೆ ತಾನು ಬಲಿಯಾದೆ ಎಂದು ಅವರು ಹೇಳಿಕೊಂಡಿದ್ದಾರೆ.

ಆರ್​ಜೆ ಸಿದ್ಧಾರ್ಥ್ ಅವರೊಂದಿಗೆ ಉರ್ಫಿ ಮಾತನಾಡುತ್ತಾ ಆಗಿನ ಸಂದರ್ಭವನ್ನು ವಿವರಿಸಿದ್ದಾರೆ. ‘‘ನಾನಾಗ ಇನ್ನೂ ಕಾಲೇಜು ಮೆಟ್ಟಿಲು ಕೂಡಾ ಹತ್ತಿರಲಿಲ್ಲ. ಹನ್ನೊಂದನೇ ತರಗತಿಯಲ್ಲಿದ್ದೆ. ಆಗ ಯಾರೋ ಕಿಡಿಗೇಡಿಗಳು ನನ್ನ ಚಿತ್ರವನ್ನು ಅಶ್ಲೀಲ ಸೈಟ್​ಗೆ ಅಪ್ಲೋಡ್ ಮಾಡಿದ್ದರು. ಆ ಸಮಯ ಬಹಳ ಕಷ್ಟಕರವಾಗಿತ್ತು. ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿರಲಿಲ್ಲ. ನಾನೇ ತಪ್ಪಿತಸ್ಥೆ ಎಂದು ದೂಷಿಸಲಾಗುತ್ತಿತ್ತು. ನಮ್ಮ ಸಂಬಂಧಿಕರು ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ನಾನೊಬ್ಬ ಗುಪ್ತ ಪೋರ್ನ್ ಸ್ಟಾರ್ ಎಂದು ಕರೆದಿದ್ದರು. ಅಲ್ಲದೇ ನನ್ನ ಬ್ಯಾಂಕ್ ಖಾತೆಗೆ ಕೋಟಿ ಕೋಟಿ ದುಡ್ಡು ಬಂದು ಬಿದ್ದಿರಬಹುದು ಎಂಬ ಗುಮಾನಿಯೂ ಅವರಲ್ಲಿತ್ತು. ಈ ಸಂದರ್ಭದಲ್ಲಿ ಬೆಂಬಲಕ್ಕೆ ನಿಲ್ಲಬೇಕಾದ ತಂದೆ ಎರಡು ವರ್ಷಗಳ ಕಾಲ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದರು. ನಾನಾಗ ನನ್ನ ಹೆಸರನ್ನೂ ಮರೆಯುವಷ್ಟರ ಮಟ್ಟಿಗೆ ನನ್ನ ಸುತ್ತ ಇರುವವರು ನನ್ನ ಕುರಿತು ಅಪವಾದ ಹೊರಿಸಿದ್ದರು. ಯಾವ ಹುಡುಗಿಗೂ ಇಂತಹ ಪರಿಸ್ಥಿತಿ ಬರಬಾರದು’’ ಎಂದು ದುಃಖ ವ್ಯಕ್ತಪಡಿಸಿದ್ದಾರೆ ಉರ್ಫಿ ಜಾವೇದ್.

ಈ ಪ್ರಕರಣದ ಸಂದರ್ಭದಲ್ಲಿ ತಾನು ಮಾತನಾಡುವ ಹಕ್ಕನ್ನೇ ಕಳೆದುಕೊಂಡಿದ್ದೆ ಎಂದು ಉರ್ಫಿ ವಿವರಿಸಿದ್ದಾರೆ. ‘‘ನನ್ನ ತಂದೆ ಆರೋಪ ಮಾಡಿದ್ದರೂ ಕೂಡಾ, ನಾನು ಪ್ರತ್ಯುತ್ತರಿಸುವಂತೆ ಇರಲಿಲ್ಲ. ನನಗಿದ್ದ ಏಕೈಕ ಆಯ್ಕೆಯೆಂದರೆ ಅವರ ಹಿಂಸೆಯನ್ನು ಅನುಭವಿಸುವುದು. ಹುಡುಗಿಯರಿಗೆ ಮನೆಯಲ್ಲಿ ಮಾತನಾಡುವ ಸ್ವಾತಂತ್ರ್ಯವೇ ಇರುವುದಿಲ್ಲ ಎಂದು ನಾನ್ಯಾವಾಗಲೂ ಹೇಳುತ್ತಿರುತ್ತೇನೆ. ಕೇವಲ ಪುರುಷರು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಆದರೆ ನಾನ್ಯಾವಾಗ ಮನೆಯಿಂದ ಹೊರಬಂದೆನೋ ಆಗ ನನಗೂ ಧ್ವನಿಯಿದೆ ಎಂಬುದು ಅರ್ಥವಾಯಿತು’’ ಎಂದಿದ್ದಾರೆ ಉರ್ಫಿ ಜಾವೇದ್. ಈಗ ನನ್ನ ವ್ಯಕ್ತಿತ್ವ ನನಗರ್ಥವಾಗಿದೆ. ತನ್ನನ್ನು ಹಿಡಿದಿಡುವವರು, ತಡೆಯುವವರು ಯಾರೂ ಇಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ ಬಿಗ್​ಬಾಸ್​ ಒಟಿಟಿಯ ಮಾಜಿ ಸ್ಪರ್ಧಿ.

2020ರ ಸಂದರ್ಶನವೊಂದರಲ್ಲಿ ಮನೆಯಿಂದ ಓಡಿ ಬಂದ ನಂತರ ಏನಾಗಿತ್ತು ಎಂದು ಉರ್ಫಿ ವಿವರಿಸಿದ್ದರು. ‘‘ಮನೆಯಿಂದ ಇಬ್ಬರು ಸಹೋದರಿಯರೊಂದಿಗೆ ಹೊರಬಂದ ನಾನು ದೆಹಲಿಯ ಪಾರ್ಕ್ ಒಂದರಲ್ಲಿ ಒಂದು ವಾರಗಳ ಕಾಲ ಇದ್ದೆ. ನಂತರ ನಾವು ಕೆಲಸಕ್ಕೆ ಹುಡುಕಾಡಿ ಕಾಲ್ ಸೆಂಟರ್ ಒಂದಕ್ಕೆ ಸೇರಿಕೊಂಡೆವು. ಕೆಲವೇ ದಿನಗಳಲ್ಲಿ ನಮ್ಮ ತಂದೆ ಬೇರೊಂದು ಮದುವೆಯಾದರು. ಆಗ ನಮ್ಮ ಇಡೀ ಕುಟುಂಬದ ಜವಾಬ್ದಾರಿ ನನ್ನ ಹಾಗೂ ಸಹೋದರಿಯರ ಮೇಲೆ ಬಿದ್ದಿತ್ತು’’ ಎಂದು  ಆ ಸಂದರ್ಭದ ಪರಿಸ್ಥಿತಿಯನ್ನು ಉರ್ಫಿ ಹಂಚಿಕೊಂಡಿದ್ದರು.

ಸದ್ಯ ಬಿಗ್​ಬಾಸ್ ಒಟಿಟಿಯಲ್ಲಿ ಸ್ಪರ್ಧಿಯಾಗಿದ್ದ ಉರ್ಫಿ ಅಲ್ಲಿ ತಮ್ಮ ಭಿನ್ನ ಉಡುಪುಗಳಿಂದ ಗಮನ ಸೆಳೆದಿದ್ದರು. ಆದರೆ ಅವರು ಮೊದಲ ಸ್ಪರ್ಧಿಯಾಗಿ​​ ಎಲಿಮಿನೇಟ್ ಆಗಿದ್ದು, ಮನೆಯಿಂದ ಹೊರ ಬಂದಿದ್ಧಾರೆ.

ಇದನ್ನೂ ಓದಿ:

ಕಸದ ಚೀಲವನ್ನೇ ಕಾಸ್ಟ್ಯೂಮ್​ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್​ ಬಾಸ್​ನಿಂದ ಔಟ್​; ನಿಲ್ಲದ ಕಣ್ಣೀರು

KGF 2 ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟ; ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

(Big Boss OTT evicted contestant Urfi Javed recalls a incident when her family members calls her a porn star)

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್