1500 ಕೋಟಿ ರೂ. ಆಸ್ತಿ…ಕತ್ತಲೆಯಲ್ಲಿ ಅಣ್ಣ ಸಹಿ ಹಾಕಿಸಿದ ಎಂದ ತಂಗಿ

ಗುಜರಾತಿನ ಮಾಜಿ ಹಣಕಾಸು ಸಚಿವ ಮತ್ತು ಮಾಜಿ ರಾಜಕೋಟ್ ರಾಜಕುಮಾರ ಮನೋಹರ್ ಜಡೇಜಾ ಅವರ ಮರಣದ ನಂತರ, ಅವರ ಒಡಹುಟ್ಟಿದವರ ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟಿದೆ.

1500 ಕೋಟಿ ರೂ. ಆಸ್ತಿ...ಕತ್ತಲೆಯಲ್ಲಿ ಅಣ್ಣ ಸಹಿ ಹಾಕಿಸಿದ ಎಂದ ತಂಗಿ
Rajkot Royal Family
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 25, 2021 | 8:23 PM

ರಾಜಮನೆತನ ಎಂದರೇನೇ ಘನತೆ ಗಾಂಭೀರ್ಯತೆಯಿಂದ ಕೂಡಿರುತ್ತದೆ. ಅವರ ಬದುಕು ಕೂಡ ಸಖತ್ ರಾಯಲ್ ಆಗಿರುವುದರಿಂದ ರಾಯಲ್ ಫ್ಯಾಮಿಲಿ ಎನ್ನಲಾಗುತ್ತದೆ. ಆದರೆ ಗುಜರಾತ್​ನ ಈ ರಾಜ ಕುಟುಂಬ ಸಖತ್ ಸುದ್ದಿಯಾಗಿದ್ದು ಆಸ್ತಿ ವಿವಾದದಿಂದ. ಅದರಲ್ಲೂ ಅಣ್ಣನ ವಿರುದ್ದ ತಂಗಿ ಮಾಡಿದ ಆರೋಪದಿಂದ ಎಂಬುದು ವಿಶೇಷ. ಹೌದು, ಗುಜರಾತಿನ ರಾಜ್​ಕೋಟ್​ನ ರಾಜಮನೆತನದಲ್ಲೀಗ (Rajkot Royal Family) ಆಸ್ತಿ ವಿವಾದ ಏರ್ಪಟ್ಟಿದೆ. ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ. ಆದರೆ ಈ ವಿವಾದದ ವೇಳೆ ರಾಜಕುಮಾರಿ ಅಂಬಾಲಿಕಾ ದೇವಿ ನೀಡಿದ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನೆಂದರೆ…ಅಣ್ಣ ತನ್ನನ್ನು ಕತ್ತಲೆಯಲ್ಲಿಟ್ಟು ಸಹಿ ಹಾಕಿಸಿಕೊಂಡ. ತನಗೆ ಅಪ್ಪನ ಆಸ್ತಿಯಲ್ಲಿ ಏನೂ ಬೇಡ ಎಂದು ಬರೆಯುವಂತೆ ಮಾಡಿದ್ದ ಎಂದು ಮಹಾರಾಜರ ಮಗಳು ಹೇಳಿದ್ದಾರೆ. ಅದು ಕೂಡ 1500 ಕೋಟಿ ಆಸ್ತಿ ವಿಚಾರದಲ್ಲಿ ಎಂಬುದು ಮತ್ತೊಂದು ವಿಶೇಷ.

ಹೌದು, ರಾಜ್​ಕೋಟ್​ನ ರಾಜಮನೆತನದ ರಾಜ ಮಾಂಧಾತ ಸಿಂಗ್ ಜಡೇಜಾ ಅವರೀಗ ಆಸ್ತಿ ಹಂಚಿಕೆ ವಿಚಾರದಲ್ಲಿ ಕಾನೂನು ಹೋರಾಟ ಎದುರಿಸುತ್ತಿದ್ದಾರೆ. ಹೀಗೆ ಆಸ್ತಿ ವಿಚಾರದಲ್ಲಿ ಕೋರ್ಟ್​ ಮೆಟ್ಟಿಲೇರಿರುವುದು ಸಹೋದರಿ/ರಾಜಕುಮಾರಿ ಅಂಬಾಲಿಕಾ ದೇವಿ. ಆಸ್ತಿ ಕಬಳಿಕೆ ವಿಚಾರದಲ್ಲಿ ಇದೀಗ ಉಪವಿಭಾಗದ ನ್ಯಾಯಾಲಯ ನೀಡಿದ ತೀರ್ಪು ಅಂಬಾಲಿಕಾ ಪರವಾಗಿದೆ. ಅದರಂತೆ ಕುಟುಂಬದಲ್ಲಿನ 1500 ಕೋಟಿಗಳ ಚರ ಮತ್ತು ಸ್ಥಿರ ಆಸ್ತಿ ವಿಭಜನೆಯಾಗುವ ಸಾಧ್ಯತೆಯಿದೆ.

ಪೂರ್ವಜರ ಆಸ್ತಿಯ ಹಂಚಿಕೆಯ ವಿಚಾರದಲ್ಲಿ ಅಣ್ಣ ನನಗೆ ಮೋಸ ಮಾಡಿದ್ದಾರೆ. ಅವರು ತನ್ನನ್ನು ಕತ್ತಲೆಯಲ್ಲಿಟ್ಟು ಸಹಿ ಹಾಕಿಸಿಕೊಂಡಿದ್ದರು. ತನಗೆ ಅಪ್ಪನ ಆಸ್ತಿಯಲ್ಲಿ ಏನೂ ಬೇಡ ಎಂದು ಬರೆಯುವಂತೆ ಮಾಡಿದ್ದರು ಎಂದು ರಾಜಕುಮಾರಿ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಅಂಬಾಲಿಕಾ ನ್ಯಾಯಾಲಕ್ಕೆ ಸಾಕ್ಷ್ಯ ಒದಗಿಸಿದ್ದು, ಅದರಂತೆ ಕೋರ್ಟ್ ರಾಜಕುಮಾರಿ ಪರವಾಗಿ​ ತೀರ್ಪು ನೀಡಿದೆ.

ಇತ್ತ ಸಹೋದರಿಯ ಆರೋಪವನ್ನು ತಳ್ಳಿಹಾಕಿರುವ ರಾಜ ಮಾಧಾಂತ ಸಿಂಗ್, ಉಪವಿಭಾಗೀಯ ನ್ಯಾಯಾಲಯದ ಆದೇಶವನ್ನು ಕಲೆಕ್ಟರ್​ ಮುಂದೆ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಪ್ರಾಂತೀಯ ಅಧಿಕಾರಿಯು ನೀಡಿದ ತೀರ್ಪಿನ ವಿರುದ್ಧ 60 ದಿನಗಳೊಳಗೆ ಕಲೆಕ್ಟರ್ ಮುಂದೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂದು ರಾಜ ಕುಟುಂಬದ ಕಾನೂನು ಸಲಹೆಗಾರ ತಿಳಿಸಿದ್ದಾರೆ. ಇದಕ್ಕಾಗಿ ಮಧಾಂತ ಸಿಂಗ್​ ಅವರು ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ರಾಜಕೀಯ-ರಾಜಕುಟುಂಬ: ಗುಜರಾತಿನ ಮಾಜಿ ಹಣಕಾಸು ಸಚಿವ ಮತ್ತು ಮಾಜಿ ರಾಜಕೋಟ್ ರಾಜಕುಮಾರ ಮನೋಹರ್ ಜಡೇಜಾ ಅವರ ಮರಣದ ನಂತರ, ಅವರ ಒಡಹುಟ್ಟಿದವರ ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟಿದೆ. ರಾಜ ಮಾಂಧಾತ ಸಿಂಗ್ ತನ್ನ ಸಹೋದರನ ಆಸೆಯಂತೆ ತನ್ನ ಸಹೋದರಿ ಅಂಬಾಲಿಕಾ ದೇವಿಗೆ 1.5 ಕೋಟಿ ರೂಪಾಯಿಗಳನ್ನು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ರಾಣಿ ಅಂಬಾಲಿಕಾ ದೇವಿ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರು ಸೇರಿದಂತೆ ನಾಲ್ಕು ಜನರ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ರಾಜಮನೆತನ ಆಸ್ತಿ ವಿವಾದ ಭಾರೀ ಚರ್ಚೆಗೆ ಕಾರಣವಾಗಿದ್ದು, ಮೊದಲ ತೀರ್ಪು ಅಂಬಾಲಿಕಾ ದೇವಿ ಪರವಾಗಿ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜಕುಮಾರಿ  ವಿರುದ್ಧ ರಾಜ ಕುಟುಂಬ ಯಾವ ರೀತಿಯ ಕಾನೂನು ಹೋರಾಟ ಕೈಗೊಳ್ಳಲಿದೆ ಎಂಬುದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್​ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(Rajkot Royal Family Fight Over Property)

Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ