AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದಿಂದ ಸ್ಥಳಾಂತರದ ವೇಳೆ ಜನಿಸಿದ ಮಗುವಿಗೆ ವಿಮಾನದ ಕರೆ ಚಿಹ್ನೆ ರೀಚ್ ಎಂದು ನಾಮಕರಣ

ಸಿ-17 ಮಿಲಿಟರಿ ವಿಮಾನದಲ್ಲಿ ಗರ್ಭಿಣಿಯನ್ನು ಜರ್ಮನಿಗೆ ಸ್ಥಳಾಂತರಿಸುವ ವೇಳೆ ವಿಮಾನದಲ್ಲಿ ಮಗು ಜನಿಸಿದೆ. ಪುಟ್ಟ ಕಂದಮ್ಮನ ಪೋಷಕರು ವಿಮಾನ ಕರೆ ಚಿಹ್ನೆ ರೀಚ್ ಎಂದು ಮಗುವಿಗೆ ನಾಮಕರಣ ಮಾಡಿದ್ದಾರೆ.

ಅಫ್ಘಾನಿಸ್ತಾನದಿಂದ ಸ್ಥಳಾಂತರದ ವೇಳೆ ಜನಿಸಿದ ಮಗುವಿಗೆ ವಿಮಾನದ ಕರೆ ಚಿಹ್ನೆ ರೀಚ್ ಎಂದು ನಾಮಕರಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 26, 2021 | 11:25 AM

Share

ಕಾಬೂಲ್: ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವಾಗ ವಿಮಾನದಲ್ಲಿ ಜನಿಸಿದ ಅಫ್ಘಾನ್​ ಹೆಣ್ಣು ಮಗುವಿಗೆ ರೀಚ್ ಎಂದು ನಾಮಕರಣ ಮಾಡಲಾಗಿದೆ. ಸಿ-17 ಮಿಲಿಟರಿ ವಿಮಾನದಲ್ಲಿ ಗರ್ಭಿಣಿಯನ್ನು ಜರ್ಮನಿಗೆ ಸ್ಥಳಾಂತರಿಸುವ ವೇಳೆ ವಿಮಾನದಲ್ಲಿ ಮಗು ಜನಿಸಿದೆ. ಪುಟ್ಟ ಕಂದಮ್ಮನ ಪೋಷಕರು ವಿಮಾನ ಕರೆ ಚಿಹ್ನೆ ರೀಚ್ ಎಂದು ಮಗುವಿಗೆ ನಾಮಕರಣ ಮಾಡಿದ್ದಾರೆ.

ಸಾರಿಗೆ ವಿಮಾನ ಕರೆ ಚಿಹ್ನೆ ರೀಚ್ 828. ಅಫ್ಘಾನಿಸ್ತಾನದಿಂದ ಸ್ಥಳಾಂತರದ ಸಮಯದಲ್ಲಿ ವಿಮಾನ ಹಾರಟದಲ್ಲಿದ್ದ ವೇಳೆಯಲ್ಲಿ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿ ಜನರಲ್ ಟಾಡ್ ವೋಲ್ಟರ್ಸ್ ಹೇಳಿದ್ದಾರೆ.

ವಿಮಾನದಲ್ಲಿ ಜರ್ಮನಿಗೆ ತೆರಳುತ್ತಿದ್ದ ವೇಳೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಗರ್ಭಿಣಿ ಕಡಿಮೆ ರಕ್ತದೊತ್ತಡವನ್ನು ಅನುಭವಿಸಬೇಕಾಯಿತು. ವಿಮಾನದಲ್ಲಿ ಉಸಿರಾಟಕ್ಕೆ ತೊಂದರೆಯಾಗದಂತೆ ಪೈಲಟ್ ಕಡಿಮೆ ಎತ್ತರದಲ್ಲಿ ವಿಮಾನವನ್ನು ಹಾರಿಸಿದ್ದಾರೆ. 86ನೇ ವೈದ್ಯಕೀಯ ಗುಂಪಿನ ಸದಸ್ಯರು ಗರ್ಭಿಣಿ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ್ದಾರೆ. ಮಗು ಮತ್ತು ತಾಯಿ ಸುರಕ್ಷಿತರಾಗಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:

ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು

ಅಮೆರಿಕದ ವೈಮಾನಿಕ ದಾಳಿಯ ನೆರವಿನಿಂದ ತಾಲಿಬಾನ್​​ನ್ನು ಹಿಮ್ಮೆಟ್ಟಿಸಿದ ಅಫ್ಘಾನ್ ಭದ್ರತಾ ಪಡೆ

(Baby girl born on Afghanistan evacuation flight named reach )

Published On - 11:24 am, Thu, 26 August 21

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ