Video: ಹಗಲಲ್ಲೇ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು; ಮಾಲೀಕನಿಗೆ ಗನ್ ತೋರಿಸಿ ಲೂಟಿ
ಹಗಲಲ್ಲೇ ನಡೆದ ಈ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಹಾಡಹಗಲಲ್ಲೇ ಹಾರ್ಡ್ವೇರ್ ಸಾಮಗ್ರಿಗಳ ಅಂಗಡಿಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ಅಂಗಡಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಹೆದರಿಸಿ, ಅಲ್ಲಿದ್ದ ಹಣ, ಬೆಲೆಬಾಳುವ ವಸ್ತುಗಳನ್ನೆಲ್ಲ ದೋಚಿದ್ದಾರೆ. ಮೂವರು ಮುಸುಕು ಧಾರಿಗಳು ಪಿಸ್ತೂಲ್ ಹಿಡಿದು ಅಂಗಡಿಗೆ ನುಗ್ಗಿ, ಮಾಲೀಕ ಮತ್ತು ಅಲ್ಲಿದ್ದ ಉಳಿದ ಗ್ರಾಹಕರಿಗೆ ಗುಂಡು ಹೊಡೆಯುವುದಾಗಿ ಬೆದರಿಕೆ ಒಡ್ಡಿದ್ದಾರೆ. ಅವರ ಕೃತ್ಯವೆಲ್ಲ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಘಟನೆ ನಡೆದಿದ್ದು ದೆಹಲಿಯ ನರೇಲಾ ಎಂಬಲ್ಲಿ. ಯಾರ ಜೀವಕ್ಕೂ ಹಾನಿ ಮಾಡದೆ ಇದ್ದರೂ, ಗುಂಡು ಹೊಡೆಯುವುದಾಗಿ ಹೆದರಿಸಿದ್ದಾರೆ. ಮಾಲೀಕನ ಎದುರೇ ಹಣ ಇಟ್ಟಿದ್ದ ಡ್ರಾಯರ್ ತೆಗೆದು ಅಷ್ಟೂ ದುಡ್ಡನ್ನೂ ದೋಚಿದ್ದಾರೆ. ಪೊಲೀಸರು ಪ್ರಕರನ ದಾಖಲಿಸಿಕೊಂಡಿದ್ದು, ಆ ದುಷ್ಕರ್ಮಿಗಳು ಯಾರೆಂದು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ? ಘಟನೆಗೆ ಸಂಬಂಧಪಟ್ಟ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಬೈಕ್ನಲ್ಲಿ ಬಂದ ಮೂವರು ಮುಸುಕುಧಾರಿಗಳು ಸಂಜೆ ಸುಮಾರು 7.50ರ ಹೊತ್ತಿಗೆ ದೆಹಲಿಯ ಅಂಗಡಿಗೆ ನುಗ್ಗುತ್ತಾರೆ. ಆದರೆ ಮಾಲೀಕನಿಗೆ ಅದು ಮೊದಲು ಗೊತ್ತಾಗಲಿಲ್ಲ. ಅವರು ಕ್ಯಾಶಿಯರ್ ಜಾಗದಲ್ಲಿ ನಿಂತು ಫೋನ್ನಲ್ಲಿ ಮಾತನಾಡುತ್ತ ಇರುತ್ತಾರೆ. ಒಳಗೆ ಬಂದ ತಕ್ಷಣ ಉಳಿದ ಗ್ರಾಹಕರು, ಅಂಗಡಿ ಸಿಬ್ಬಂದಿಗೆ ದುಷ್ಕರ್ಮಿಗಳು ಹೆದರಿಸುತ್ತಾರೆ. ಅವರಲ್ಲೊಬ್ಬ ಹಿರಿಯ ನಾಗರಿಕನಿಗೆ ಹೊಡೆಯುತ್ತಾರೆ. ಪಿಸ್ತೂಲ್ ತೋರಿಸಿ ಗುಂಡು ಹಾರಿಸುವ ಬೆದರಿಕೆ ಒಡ್ಡುತ್ತಾರೆ. ನಂತರ ಆ ಮಾಲೀಕ ನಿಂತಲ್ಲಿಗೆ ಬಂದು ಡ್ರಾಯರ್ನಿಂದ ಅಷ್ಟೂ ಹಣ ದೋಚುತ್ತಾರೆ. ಮಾಲೀಕ ಪ್ರತಿರೋಧ ಒಡ್ಡಿದಾಗ ಹೆದರಿಸುವ ಸಂಬಂಧ ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ. ಮಾಲೀಕ ಪ್ರತಿರೋಧ ಒಡ್ಡಿದಾಗ ಅವರ ಕಾಲಿಗೆ ಕೂಡ ಗುಂಡು ಹೊಡೆದಿದ್ದಾರೆ. ಗಾಯಗೊಂಡ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
#WATCH | Two unknown miscreants looted a hardware shop at gunpoint in Delhi’s Khera Khurd area, yesterday pic.twitter.com/DI8Izx5Ky1
— ANI (@ANI) September 5, 2021
ಅಂಗಡಿಯೊಳಗೆ ಲೂಟಿಯಾಗುತ್ತಿದ್ದರೆ ಹೊರಗೆ ನಿಂತ ಕೆಲವರು ಅದನ್ನು ವಿಡಿಯೋ ಮಾಡಿದ್ದಾರೆ. ನಂತರ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ: ಹೊಸ ಜಾಮೀನು ಅರ್ಜಿ ಸಲ್ಲಿಸಿದ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್
ದಾನಿಶ್ ಸೇಠ್ಗೆ ಕರೆ ಮಾಡಿ ಹೊಗಳಿದ ರಣಬೀರ್ ಕಪೂರ್; ಈ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಬೈದ ಬಾಲಿವುಡ್ ನಟ