ದಾನಿಶ್​ ಸೇಠ್​ಗೆ ಕರೆ ಮಾಡಿ ಹೊಗಳಿದ ರಣಬೀರ್​ ಕಪೂರ್​; ಈ ವಿಡಿಯೋ ಅಪ್​ಲೋಡ್​ ಮಾಡಿದ್ದಕ್ಕೆ ಬೈದ ಬಾಲಿವುಡ್​ ನಟ

ಬಾಲಿವುಡ್​ ಖ್ಯಾತ ನಟ ರಣಬೀರ್​ ಕಪೂರ್​ ಅವರು ದಾನಿಶ್​ಗೆ ಕರೆ ಮಾಡಿ ಹೊಗಳಿದ್ದಾರೆ. ಈ ವಿಡಿಯೋವನ್ನು ದಾನಿಶ್​ ಸೋಶೀಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದಾನಿಶ್​ ಸೇಠ್​ಗೆ ಕರೆ ಮಾಡಿ ಹೊಗಳಿದ ರಣಬೀರ್​ ಕಪೂರ್​; ಈ ವಿಡಿಯೋ ಅಪ್​ಲೋಡ್​ ಮಾಡಿದ್ದಕ್ಕೆ ಬೈದ ಬಾಲಿವುಡ್​ ನಟ
ದಾನಿಶ್​ ಸೇಠ್​ಗೆ ಕರೆ ಮಾಡಿ ಹೊಗಳಿದ ರಣಬೀರ್​ ಕಪೂರ್​; ಈ ವಿಡಿಯೋ ಅಪ್​ಲೋಡ್​ ಮಾಡಿದ್ದಕ್ಕೆ ಬೈದ ಬಾಲಿವುಡ್​ ನಟ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 06, 2021 | 1:58 PM

ನಟ ದಾನಿಶ್​ ಸೇಠ್​ ಸೋಶಿಯಲ್​ ಮೀಡಿಯಾದಲ್ಲಿ ವಿವಿಧ ರೀತಿಯ ವಿಡಿಯೋ ಅಪ್​ಲೋಡ್​ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಸಿದ್ಧಪಡಿಸುವ ಕಂಟೆಂಟ್​ಗಳು ಸಾಕಷ್ಟು ಜನರಿಗೆ ಇಷ್ಟವಾಗುತ್ತದೆ. ಈ ಕಾರಣಕ್ಕೆ ಅವರ ಅಭಿಮಾನಿ ಬಳಗ ದೊಡ್ಡದಿದೆ. ಈಗ ಅವರಿಗೆ ಅಚ್ಚರಿ ಒಂದು ಸಿಕ್ಕಿದೆ. ಅದೇನೆಂದರೆ ಬಾಲಿವುಡ್​ ಖ್ಯಾತ ನಟ ರಣಬೀರ್​ ಕಪೂರ್​ ಅವರು ದಾನಿಶ್​ಗೆ ಕರೆ ಮಾಡಿ ಹೊಗಳಿದ್ದಾರೆ. ಈ ವಿಡಿಯೋವನ್ನು ದಾನಿಶ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದಾನಿಶ್​ ಅವರಿಗೆ ರಣಬೀರ್​ ಮ್ಯಾನೇಜರ್​ನಿಂದ ಕರೆ ಬಂದಿದೆ. ನಂತರ ಕಾಲ್​ ರಣಬೀರ್​ಗೆ ವರ್ಗಾವಣೆ ಆಗಿದೆ. ‘ನಿಮ್ಮ ವಿಡಿಯೋವನ್ನು ನನ್ನ ಟೀಮ್​ನವರು ತೋರಿಸಿದರು. ಅವುಗಳು ನಿಜಕ್ಕೂ ತುಂಬಾನೇ ಫನ್ನಿ ಆಗಿದೆ’ ಎಂದರು ರಣಬೀರ್​. ಈ ಮಾತನ್ನು ಕೇಳಿ ದಾನಿಶ್​ ಸಾಕಷ್ಟು ಖುಷಿ ಆದರು. ಅವರಿಗೆ ದಾನಿಶ್ ಧನ್ಯವಾದ ಹೇಳಿದರು. ‘ನಿತ್ಯವೂ ನೀವು ಈ ವಿಡಿಯೋ ಹೇಗೆ ಮಾಡ್ತೀರಾ’ ಎಂದು ಅಚ್ಚರಿಯಿಂದ ಪ್ರಶ್ನೆ ಮಾಡಿದರು ರಣಬೀರ್​. ಇದಕ್ಕೆ ದಾನಿಶ್​ ವಿವರಣೆ ನೀಡಿದ್ದಾರೆ. ಹೀಗೆ, ಮಾತುಕತೆ ಮುಂದುವರಿದಿದೆ.

ಈ ವಿಡಿಯೋವನ್ನು ದಾನಿಶ್​ ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಈ ವಿಡಿಯೋ ನಿಜವೋ ಅಥವಾ ಸುಳ್ಳೋ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ದಾನಿಶ್​ ಎಲ್ಲರನ್ನೂ ಪ್ರ್ಯಾಂಕ್​ ಮಾಡುವುದರಲ್ಲಿ ಎತ್ತಿದ ಕೈ. ಅವರು ಚೆನ್ನಾಗಿ ಮಿಮಿಕ್ರಿ ಕೂಡ ಮಾಡುತ್ತಾರೆ. ಹೀಗಾಗಿ, ದೂರವಾಣಿ ಕರೆಯಲ್ಲಿ ಮಾತನಾಡಿದ್ದು ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಕೆಲವರು ಇದು ರಣಬೀರ್​ ಎಂದರೆ, ಇನ್ನೂ ಕೆಲವರು ಇದು ಪ್ರ್ಯಾಂಕ್​ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Danish sait (@danishsait)

ಇದಾದ ಬೆನ್ನಲ್ಲೇ ದಾನಿಶ್​ ಮತ್ತೊಂದು ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ‘ನಾನು ವಿಡಿಯೋ ಅಪ್​ಲೋಡ್​ ಮಾಡಿದ್ದಕ್ಕೆ ರಣಬೀರ್​ ಬೈದಿದ್ದಾರೆ’ ಎಂಬುದಾಗಿ ದಾನಿಶ್​ ಹೇಳಿಕೊಂಡಿದ್ದಾರೆ.

View this post on Instagram

A post shared by Danish sait (@danishsait)

ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಕನ್​ಫ್ಯೂಸ್​ ಆಗಿದ್ದಾರೆ. ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂದು ಫ್ಯಾನ್ಸ್​​ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ, ದಾನಿಶ್​ ಈ ಮೊದಲು ವಿದ್ಯಾ ಬಾಲನ್​, ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್​ ವಾರ್ನರ್​ ಸೇರಿ ಸಾಕಷ್ಟು ಸೆಲೆಬ್ರಿಟಿಗಳ ಜತೆ ಮಾತನಾಡಿದ್ದಾರೆ.

ಇದನ್ನೂ ಓದಿ: ಒನ್ ಕಟ್ ಟೂ ಕಟ್​ನಲ್ಲಿ ದಾನಿಶ್ ಸೇಠ್ ‘ಗೋಪಿ’ ಅವತಾರ! ಹೊಸ ಚಿತ್ರದ ಬಗ್ಗೆ ಕುತೂಹಲ

Danish Sait: ಅನ್ಯಾ ಜತೆ ರಿಜಿಸ್ಟರ್ ಮ್ಯಾರೇಜ್ ಆದ ದಾನಿಶ್​ ಸೇಠ್​; ಫೋಟೋ ವೈರಲ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ