Shocking News: ಹಾವು ಕಡಿತಕ್ಕೆ ಸೇಡು ತೀರಿಸಿಕೊಳ್ಳಲು ಹಾವನ್ನೇ ಜಗಿದ ಕುಡಿದು ಅಮಲಿನಲ್ಲಿದ್ದ ಯುವಕರು!

ಇಬ್ಬರು ಯುವಕರು ಅರೆಬರೆ ಸುಟ್ಟ ಹಾವನ್ನು ನೋಡಿದ್ದಾರೆ. ಇಬ್ಬರೂ ಸಹ ಹಾವನ್ನು ಎತ್ತಿಕೊಂಡು ಅಗಿಯಲು ಪ್ರಾರಂಭಿಸಿದ್ದಾರೆ. ಇದರ ಪರಿಣಾಮ ಇಬ್ಬರಿಗೂ ತಲೆಸುತ್ತು ಮತ್ತು ವಾಂತಿ ಶುರುವಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Shocking News: ಹಾವು ಕಡಿತಕ್ಕೆ ಸೇಡು ತೀರಿಸಿಕೊಳ್ಳಲು ಹಾವನ್ನೇ ಜಗಿದ ಕುಡಿದು ಅಮಲಿನಲ್ಲಿದ್ದ ಯುವಕರು!
ಕಾಳಿಂಗ ಸರ್ಪ
Follow us
TV9 Web
| Updated By: shruti hegde

Updated on:Sep 07, 2021 | 11:30 AM

ಛತ್ತೀಸ್​ಗಢದ ಇಂದಿರಾ ನಗರದಲ್ಲಿ ಇಬ್ಬರು ಯುವಕರು ಅರೆಬರೆ ಸುಟ್ಟ ಹಾವನ್ನು ಅಗಿಯತ್ತಿದ್ದ ಆಘಾತಕಾರಿ ಘಟನೆಯೊಂದು ನಡೆದಿದೆ. ಇದರ ಪರಿಣಾಮ ಇಬ್ಬರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವನ್ನು ತಿಂದ ಯುವಕರು ನಾವು ಕುಡಿದ ಅಮಲಿನಲ್ಲಿದ್ದೆವು ಎಂದು ಬಾಯ್ಬಿಟ್ಟಿದ್ದಾರೆ. ಹಾವು ಕಡಿತಕ್ಕೆ ಸೇಡು ತೀರಿಸಿಕೊಳ್ಳಲು ಕೋಪದಿಂದ ಹಾವನ್ನು ಜಗಿದಿದ್ದೇವೆ ಎಂದು ಹೇಳಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.

ವರದಿಯ ಪ್ರಕಾರ ಸ್ಳಳೀಯರು ಹಾವನ್ನು ಕೊಂದು ಚರಂಡಿಯ ಬಳಿ ಸುಟ್ಟಿದ್ದಾರೆ. ಆದರೆ ಹಾವಿನ ಅರ್ಧಭಾಗ ಭಾಗ ಮಾತ್ರ ಸುಟ್ಟಿತ್ತು. ರಾಜು ಜಾಂಗ್ಡೆ ಮತ್ತು ಹಿತೇಂದ್ರ ಆನಂದ ಮದ್ಯ ಸೇವನೆಯಿಂದ ಅಮಲಿನಲ್ಲಿದ್ದು, ಅರೆಬರೆ ಸುಟ್ಟ ಹಾವನ್ನು ನೋಡಿದ್ದಾರೆ. ಇಬ್ಬರೂ ಸಹ ಹಾವನ್ನು ಎತ್ತಿಕೊಂಡು ಅಗಿಯಲು ಪ್ರಾರಂಭಿಸಿದ್ದಾರೆ. ಇದರ ಪರಿಣಾಮ ಇಬ್ಬರಿಗೂ ತಲೆಸುತ್ತು ಮತ್ತು ವಾಂತಿ ಶುರುವಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾವು ಜೀವಂತವಾಗಿದೆ ಎಂದು ಇಬ್ಬರಿಗೂ ತಿಳಿದಿತ್ತು ರಾಜು ಮತ್ತು ಹಿತೇಂದ್ರ ಅತಿಯಾದ ಮದ್ಯ ಸೇವನೆಯಿಂದ ಅಮಲಿನಲ್ಲಿದ್ದರು. ಆದರೆ ಹಾವು ಜೀವಂತವಾಗಿದೆ ಎಂದು ಕಂಡುಕೊಂಡಿದ್ದಾರೆ. ರಾಜು ಹಾವನ್ನು ಎತ್ತಿಕೊಂಡು ಅಗಿಯಲು ಪ್ರಾರಂಭಿಸುತ್ತಿದ್ದಂತೆಯೇ ಹಿತೇಂದ್ರ ಅದನ್ನು ಕಸಿದುಕೊಂಡು ತಾನೂ ಸಹ ಜಗಿಯಲು ಶುರು ಮಾಡುತ್ತಾನೆ. ಇದರ ಪರಿಣಾಮ ಇಬ್ಬರಿಗೂ ಆರೋಗ್ಯ ಹದಗೆಟ್ಟಿದೆ. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿರುವುದನ್ನು ಇಬ್ಬರು ಯುವಕರು ಬಹಿರಂಗಪಡಿಸಿದ್ದಾರೆ.

ಹಾವನ್ನು ತಿಂದರೆ ಅದು ಬೇರೆಯವರನ್ನು ಕಚ್ಚದಿರಬಹುದು ಆಸ್ಪತ್ರೆಗೆ ದಾಖಲಾದ ಯುವಕರು ಪ್ರಜ್ಞೆ ಮರಳಿದ ಬಳಿಕ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ನಮ್ಮ ಗ್ರಾಮದಲ್ಲಿ ಹಲವು ದಿನಗಳಿಂದ ಹಾವು ಬರುತ್ತಲೇ ಇದೆ. ನಾನು ಈ ಕುರಿತಾಗಿ ತುಂಬಾ ಚಿಂತೆಗೆ ಒಳಗಾಗಿದ್ದೆ. ರಾಜು ಮತ್ತು ನಾನು ಇಬ್ಬರೂ ಕುಡಿದಿದ್ದೆವು. ಹಾವಿನ ಮೇಲಿದ್ದ ಕೋಪದಿಂದ ಹೀಗೆ ಮಾಡಿದ್ದೇವೆ ಆ ಸಮಯದಲ್ಲಿ ಏನೂ ಅರ್ಥವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಭಯವಾಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಯುವಕರು, ಆ ಸಮಯದಲ್ಲಿ ಹಾವು ತಿಂದ ಬಳಿಕ ಏನಾಗಬಹುದು ಎಂದು ಯೋಚಿಸುತ್ತಿದ್ದೆವು ಎಂದು ಉತ್ತರಿಸಿದ್ದಾರೆ. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಷಕಾರಿ ಹಾವು ಯುವಕರು ಅಗಿದ ಹಾವು ತುಂಬಾ ವಿಷಕಾರಿಯಾದದ್ದು, ಮನುಷ್ಯನಿಗೆ ಕಚ್ಚಿದ 15 ನಿಮಿಷದಲ್ಲಿ ವ್ಯಕ್ತಿ ಸಾವನ್ನಪ್ಪುತ್ತಾನೆ, ಅಷ್ಟು ವಿಷವನ್ನು ಹೊಂದಿರುವ ಹಾವದು ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:

Viral News: ವಿಷಕಾರಿ ಪ್ರಾಣಿಗಳಿರುವ ಕಾಡಿನಲ್ಲಿ ಕಳೆದಹೋದ 72 ವರ್ಷದ ವೃದ್ಧ ಮರಳಿ ಮನೆಗೆ ಬಂದ ಇಂಟ್ರೆಸ್ಟಿಂಗ್​​ ಸ್ಟೋರಿ ಇಲ್ಲಿದೆ

Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!

(Two drunkards eat snakes in Chhattisgarh viral news)

Published On - 11:29 am, Tue, 7 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ