Viral Video: ಕಾರಿನಡಿ ಸಿಲುಕುತ್ತಿದ್ದ ಬಾಲಕನ ಜೀವ ಕಾಪಾಡಿದ ಪೌರ ಕಾರ್ಮಿಕ; ವಿಡಿಯೋ ವೈರಲ್

ಕಸದ ಲಾರಿ ಮುಂದೆ ಹೋಗುತ್ತಿದ್ದಂತೆ ವೇಗವಾಗಿ ರಸ್ತೆ ದಾಟಲು ನೋಡಿದ ಬಾಲಕ ಇನ್ನೇನು ಕಾರಿನಡಿ ಸಿಲುಕುವುದರಲ್ಲಿದ್ದ. ಆದರೆ, ಅಷ್ಟರಲ್ಲಿ ಅಲ್ಲೇ ಇದ್ದ ಪೌರ ಕಾರ್ಮಿಕ ಆ ಬಾಲಕನನ್ನು ಎಳೆದು ನಿಲ್ಲಿಸಿ, ಕಾಪಾಡಿದ್ದಾರೆ.

Viral Video: ಕಾರಿನಡಿ ಸಿಲುಕುತ್ತಿದ್ದ ಬಾಲಕನ ಜೀವ ಕಾಪಾಡಿದ ಪೌರ ಕಾರ್ಮಿಕ; ವಿಡಿಯೋ ವೈರಲ್
ವೈರಲ್ ವಿಡಿಯೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 07, 2021 | 1:16 PM

ಇನ್ನೇನು ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಆ ಬಾಲಕ ಕಾರಿನ ಅಡಿ ಸಿಲುಕಿ ಅಪ್ಪಚ್ಚಿಯಾಗುತ್ತಿದ್ದ. ಆದರೆ, ಅಷ್ಟರಲ್ಲಿ ದೇವರಂತೆ ಬಂದ ಪೌರ ಕಾರ್ಮಿಕ ಆ ಬಾಲಕನನ್ನು ಎಳೆದು ನಿಲ್ಲಿಸಿ ದೊಡ್ಡ ಅಪಾಯದಿಂದ ಪಾರು ಮಾಡಿದ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಚಿಕ್ಕ ಬಾಲಕನ ಜೀವ ಉಳಿಸಿದ ಆ ಪೌರ ಕಾರ್ಮಿಕನ ಸಮಯಪ್ರಜ್ಞೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈ ಘಟನೆ ಬ್ರೆಜಿಲ್​ನ ರೋಲಾಂಡಿಯದಲ್ಲಿ ನಡೆದಿದೆ. ಆ ಬಾಲಕನ ತಾತ ಮನೆಯ ಗೇಟ್ ದಾಟಿ ಮುಂದೆ ಹೋಗಿದ್ದರು. ಅವರ ಜೊತೆ ಹೊರಟಿದ್ದ ಮೊಮ್ಮಗನೂ ಇನ್ನೇನು ರಸ್ತೆ ದಾಟಿ ಹೋಗಬೇಕು ಎನ್ನುವಷ್ಟರಲ್ಲಿ ಕಸದ ಲಾರಿ ಬಂದಿತು. ಆ ಕಸದ ಲಾರಿಯ ಹಿಂಭಾಗದಿಂದ ಇನ್ನೊಂದು ಕಾರು ಬರುತ್ತಿತ್ತು. ಆದರೆ, ಎದುರಿನಲ್ಲಿ ಲಾರಿ ಇದ್ದುದರಿಂದ ಬಾಲಕನಿಗೆ ಆ ಕಾರು ಕಾಣಲಿಲ್ಲ.

ಕಸದ ಲಾರಿ ಮುಂದೆ ಹೋಗುತ್ತಿದ್ದಂತೆ ವೇಗವಾಗಿ ರಸ್ತೆ ದಾಟಲು ನೋಡಿದ ಬಾಲಕ ಇನ್ನೇನು ಕಾರಿನಡಿ ಸಿಲುಕುವುದರಲ್ಲಿದ್ದ. ಆದರೆ, ಅಷ್ಟರಲ್ಲಿ ಅಲ್ಲೇ ಇದ್ದ ಪೌರ ಕಾರ್ಮಿಕ ಆ ಬಾಲಕನನ್ನು ಎಳೆದು ನಿಲ್ಲಿಸಿ, ಕಾಪಾಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 1 ಮಿಲಿಯನ್​ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ, 60 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ಆ ಪೌರ ಕಾರ್ಮಿಕ ಕೇವಲ ಬಾಲಕನನ್ನು ಮಾತ್ರ ಕಾಪಾಡಲಿಲ್ಲ, ಆ ಬಾಲಕನನ್ನು ಕೊಂದುಬಿಟ್ಟೆನಲ್ಲ ಎಂದು ಜೀವನಪೂರ್ತಿ ನೆನಪಿಸಿಕೊಂಡು ಕೊರಗಬೇಕಾಗಿದ್ದ ಕಾರು ಚಾಲಕನನ್ನು ಕೂಡ ಕಾಪಾಡಿದ್ದಾನೆ. ಆತ ನಿವಾದ ಹೀರೋ ಎಂದು ಟ್ವಿಟ್ಟಿಗರು ಕಮೆಂಟ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

(Sanitation worker saves boy from being run over by Car Shocking Video has over 1 million views)