Viral Video: ಹಾವಿನ ಬಾಲ ಹಿಡಿದು ಕಚ್ಚಿಸಿಕೊಳ್ಳುತ್ತಿದ್ದ ಉರಗ ತಜ್ಞ; ಸೆಕೆಂಡುಗಳಲ್ಲಿ ಅಪಾಯದಿಂದ ಪಾರು
ಅಶೋಕ್ ಅವರು ನಾಗರ ಹಾವಿನ ಬಾಲವನ್ನು ಹಿಡಿಯುತ್ತಿದ್ದಂತೆಯೇ ಬಾಗಿಲಿನಿಂದ ಆಚೆಗೆ ಬಂದ ಹಾವು ದಾಳಿ ನಡೆಸುತ್ತದೆ. ಕಿಂಚಿತ್ತು ತಡವಾಗಿದ್ದರೂ ಅಶೋಕ್ ಅವರಿಗೆ ಹಾವು ಕಚ್ಚಿಬಿಡುತ್ತಿತ್ತು. ಕ್ಷಣಮಾತ್ರದಲ್ಲಿ ದೂರ ಸರಿದು ಹಾವಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ.
ಹಾವು ಹಿಡಿಯುತ್ತಿರುವ ವಿಡಿಯೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಉರಗ ತಜ್ಞರು ಅಪಾಯಕಾರಿ ಹಾವುಗಳನ್ನು ಕೆಲ ನಿಮಿಷಗಳಲ್ಲಿ ಹಿಡಿದು ಜನರನ್ನು ದಿಗ್ಭ್ರಮೆಗೊಳಿಸುತ್ತಾರೆ. ಕೆಲವು ಬಾರಿ ಅನುಭವಿ ಹಾವು ಹಿಡಿಯುವವರೂ ಕೂಡಾ ಅಪಾಯದಲ್ಲಿ ಸಿಲುಕಿಕೊಳ್ಳಬಹುದು. ಇತ್ತೀಚಿಗೆ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ಹಾವಿನ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಉರಗ ತಜ್ಞ ತಪ್ಪಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಹಾವು ಹಿಡಿಯುವವ ಅಶೋಕ್ ಎಂದು ಗುರುತಿಸಲಾಗಿದೆ. ಸ್ನಾನಗೃಹದಲ್ಲಿ ಅಡಗಿ ಕುಳಿತಿದ್ದ ಹಾವನ್ನು ರಕ್ಷಿಸಲು ಉರಗ ತಜ್ಞ ಅಶೋಕ್ ಮುಂದಾಗಿದ್ದಾರೆ. ವಿಡಿಯೋದಲ್ಲಿ ಗಮನಿಸುವಂತೆ ಸುಮಾರು 14 ಅಡಿ ಉದ್ದದ ನಾಗರ ಹಾವು ಹಿಡಿಯಲು ಮುಂದಾಗಿದ್ದ ಅಶೋಕ್ ಹಾವಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
How not to rescue a snake. Especially if it’s a king cobra. Via @judedavid21 pic.twitter.com/yDJ5bLevQf
— Parveen Kaswan (@ParveenKaswan) September 7, 2021
ಅಶೋಕ್ ಅವರು ನಾಗರ ಹಾವಿನ ಬಾಲವನ್ನು ಹಿಡಿಯುತ್ತಿದ್ದಂತೆಯೇ ಬಾಗಿಲಿನಿಂದ ಆಚೆಗೆ ಬಂದ ಹಾವು ದಾಳಿ ನಡೆಸುತ್ತದೆ. ಕಿಂಚಿತ್ತು ತಡವಾಗಿದ್ದರೂ ಅಶೋಕ್ ಅವರಿಗೆ ಹಾವು ಕಚ್ಚಿಬಿಡುತ್ತಿತ್ತು. ಕ್ಷಣಮಾತ್ರದಲ್ಲಿ ದೂರ ಸರಿದು ಹಾವಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ. ವಿಷಪೂರಿತ ನಾಗರ ಹಾವು ಇದ್ದಕ್ಕಿದ್ದಂತೆ ತಲೆ ಎತ್ತಿ ವ್ಯಕ್ತಿಗೆ ಕಚ್ಚಲು ಮುಂದಾಗಿದೆ. ಉರಗ ತಜ್ಞ ಗಾಬರಿಯಿಂದ ಹಿಂದಕ್ಕೆ ಸರಿದಿದ್ದಾರೆ.
ಅದೃಷ್ಟವಶಾತ್ ಅಶೋಕ್ ಹಾವಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು , ಹಾವನ್ನು ಹೇಗೆ ಹಿಡಿಯಬಾರದು ಅದರಲ್ಲಿಯೂ ಮುಖ್ಯವಾಗಿ ನಾಗರ ಹಾವನ್ನು .. ಎಂದು ಬರೆಯುವ ಮೂಲಕ ಭಾರತೀಯ ಅರಣ್ಯ ಸೇವಾ ಸಧಿಕಾರಿ ಪರ್ವೀನ್ ಕಸ್ವಾನ್ ಟ್ವೀಟ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋ ಸುಮಾರು 60,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾವು ರಕ್ಷಕರು ಅದೃಷ್ಟ ಮಾಡಿದ್ದರು ಎಂದು ಓರ್ವರು ಹೇಳಿದ್ದಾರೆ. ವರದಿಗಳ ಪ್ರಕಾರ ಗೋಪಾಲಕೃಷ್ಣ ಭಟ್ ಎನ್ನುವವರ ಮನೆಯ ಸ್ನಾನ ಗೃಹದಲ್ಲಿ ಹಾವು ಅಡಗಿತ್ತು. ಆಗಸ್ಟ್ ತಿಂಗಳಿನಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಇದನ್ನೂ ಓದಿ:
Viral Video: ಕ್ಯೂಟ್ ಸ್ಮೈಲ್ ಮಾಡುತ್ತಾ ಮೇಕೆ ಜೊತೆ ಸೆಲ್ಫಿ ತೆಗೆಯೋಕೆ ಹೋದ ಯುವತಿಯ ಫಜೀತಿ ನೋಡಿ
Viral Video: ನಗುತ್ತಾ ವಧುವಿನ ಊಟದ ಬಾಳೆಯಲ್ಲಿದ್ದ ಹಪ್ಪಳ ಕದ್ದ ವರ; ಕ್ಯೂಟ್ ವಿಡಿಯೋ ವೈರಲ್
(How Not To Catch a snake video goes viral in social media)
Published On - 2:39 pm, Tue, 7 September 21