AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕ್ಯೂಟ್ ಸ್ಮೈಲ್ ಮಾಡುತ್ತಾ ಮೇಕೆ ಜೊತೆ ಸೆಲ್ಫಿ ತೆಗೆಯೋಕೆ ಹೋದ ಯುವತಿಯ ಫಜೀತಿ ನೋಡಿ

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ದಿ ಡಾರ್ವಿನ್ ಅವಾರ್ಡ್ಸ್ ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ.

Viral Video: ಕ್ಯೂಟ್ ಸ್ಮೈಲ್ ಮಾಡುತ್ತಾ ಮೇಕೆ ಜೊತೆ ಸೆಲ್ಫಿ ತೆಗೆಯೋಕೆ ಹೋದ ಯುವತಿಯ ಫಜೀತಿ ನೋಡಿ
ಕ್ಯೂಟ್ ಸ್ಮೈಲ್ ಮಾಡುತ್ತಾ ಮೇಕೆ ಜೊತೆ ಸೆಲ್ಫಿ ತೆಗೆಯೋಕೆ ಹೋದ ಯುವತಿಯ ಫಜೀತಿ ನೋಡಿ
TV9 Web
| Edited By: |

Updated on:Sep 05, 2021 | 9:49 AM

Share

ಮೇಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಆಸೆ ಇದ್ದ ಯುವತಿಯ ಫಜೀತಿ ನೋಡಿದ್ರೆ ಬೆರಗಾಗ್ತೀರಾ! ಕೆಲವು ತಮಾಷೆಯ ದೃಶ್ಯವಾಗಿದ್ದರೂ ಸಹ ಎಚ್ಚರಿಕೆಯ ಸಂದೇಶವನ್ನು ಸಾರುತ್ತದೆ. ಸೆಲ್ಫಿ ಸೆಲ್ಫಿ ಅಂತ ಹೋದ್ರೆ ಏನಾಲ್ಲಾ ಸಂಭವಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ ಇಲ್ಲೊಂದು ವಿಡಿಯೋವಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಕೆಲವರು ತಮಷೆ ಮಾಡಿ ನಗುತ್ತಿದ್ದರೆ ಇನ್ನು ಕೆಲವರು ಎಚ್ಚರಿಕೆಯೂ ಹೌದು ಎಂದು ಎಚ್ಚರಿಸಿದ್ದಾರೆ.

ಯುವತಿಯು ಮೇಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ದಿ ಡಾರ್ವಿನ್ ಅವಾರ್ಡ್ಸ್ ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಇದೀಗ 411 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜತೆಗೆ 1.4 ಸಾವಿರ ಲೈಕ್ಸ್​ಗಳು ಲಭ್ಯವಾಗಿವೆ.

11 ಸೆಕೆಂಡುಗಳಿರುವ ಸಣ್ಣ ವಿಡಿಯೋ ಕ್ಲಿಪ್ ಗಮನಿಸುವಂತೆ ಯುವತಿ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಳೆ. ಹಿಂಬದಿಯಿಂದ ಮೇಕೆಯೊಂದು ನಿಂತಿರುವುದು ಕಾಣಿಸುತ್ತದೆ. ಯುವತಿಯ ಮುಖದಲ್ಲಿ ನಗುವಿದೆ. ಮೊದಲಿಗೆ ಮೇಕೆ ಕ್ಯಾಮರಾ ಹತ್ತಿರ ಬಂದು ಯುವತಿಯನ್ನು ನೋಡುತ್ತಾಳೆ. ಯುವತಿ ಮತ್ತೂ ಸಂತೋಷಗೊಂಡಿದ್ದಾಳೆ.

ಹಿಂತಿರುಗಿ ಹೋದ ಮೇಕೆ ಮತ್ತೊಮ್ಮೆ ಕ್ಯಾಮರಾದ ಮುಂದೆ ಬರುತ್ತದೆ. ಎರಡನೇಯ ಬಾರಿಯೂ ಸಹ ಯುವತಿಯ ಹತ್ತಿರ ಬಂದು ಹಿಂತಿರುಗಿ ಹೋಗಿದೆ. ಮೂರನೇ ಬಾರಿ ಯುವತಿಯ ಹಿಂಬದಿಯಿಂದ ಓಡಿ ಬಂದು ತಲೆಯಿಂದ ಗುದ್ದಿದೆ. ಮೇಕೆ ಗುದ್ದಿದ ರಭಸಕ್ಕೆ ಯುವತಿ ಹೆದರಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ:

Viral Video: ಬಾಯಾರಿಕೆ ನೀಗಿಸಿಕೊಳ್ಳಲು ಬುದ್ಧಿವಂತಿಕೆ ಉಪಯೋಗಿಸಿದ ಆನೆ; ವೈರಲ್​ ಆಯ್ತು ವಿಡಿಯೋ

Video: ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಕಿರುಚಿ, ಕುಣಿದಾಡಿದ ಯುವತಿ; ಅಮಲಿನಲ್ಲಿ ಅವಾಂತರ

(Woman tries to take selfie with goat what happened next watch to video)

Published On - 9:48 am, Sun, 5 September 21