Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!

ಎಲ್ಲಾ ವಿಷಯಗಳನ್ನು ಸುಲಭವಾಗಿ ಸ್ವೀಕರಿಸಬೇಕು. ಅದರಲ್ಲಿಯೂ ತಿನ್ನುವ ವಿಷಯದಲ್ಲಿ ಮಾತ್ರ ಯಾವುದೇ ನಿರ್ಬಂಧಗಳಿಲ್ಲ ಎಂದು ಜಾನ್ ಹೇಳಿದ್ದಾರೆ.

Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!
ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!
Follow us
TV9 Web
| Updated By: shruti hegde

Updated on:Aug 30, 2021 | 10:05 AM

ಆರೋಗ್ಯವಂತರಾಗಿ ಹೆಚ್ಚು ವರ್ಷಗಳ ಕಾಲ ಬದುಕಲು ಸಿಕ್ರೆಟ್​ಗಳಿರುತ್ತವೆ. ಕೆಲವರು ನಿಷ್ಠೆಯಿಂದ ವ್ಯಾಯಾಮ, ಪೌಷ್ಟಿಕ ಆಹಾರ, ಒಳ್ಳೆಯ ಡಯಟ್ ಮತ್ತು ಪ್ರತಿನಿತ್ಯ ಯೋಗ ಮಾಡುವ ಮೂಲಕ ಹೆಚ್ಚಿನ ಆಯಸ್ಸನ್ನು ಪಡೆಯುತ್ತಾರೆ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವವರು ಹೆಚ್ಚಿನ ಆಯಸ್ಸಿನ ಜತೆಗೆ ಒಳ್ಳೆಯ ಆರೋಗ್ಯ ಪಡೆಯುತ್ತಾರೆ. 109 ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿರುವ ಬ್ರಿಟನ್​ ವ್ಯಕ್ತಿ ಜಾನ್ ತಿನ್ನಿಸ್​ವುಡ್​ ಅವರಲ್ಲಿ ನಿಮ್ಮ ವಯಸ್ಸಿನ ಸಿಕ್ರೆಟ್​ ಏನು ಎಂದು ಪ್ರಶ್ನೆ ಮಾಡಿದ್ದಕ್ಕೆ ಶಾಕ್ ಆಗುವ ಉತ್ತರವೊಂದನ್ನ ನೀಡಿದ್ದಾರೆ. ಈ ಸುದ್ದಿ ಇದೀಗ ವೈರಲ್ ಅಗಿದ್ದು ನೆಟ್ಟಿರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಎಲ್ಲಾ ವಿಷಯಗಳನ್ನು ಸುಲಭವಾಗಿ ಸ್ವೀಕರಿಸಬೇಕು. ಅದರಲ್ಲಿಯೂ ತಿನ್ನುವ ವಿಷಯದಲ್ಲಿ ಮಾತ್ರ ಯಾವುದೇ ನಿರ್ಬಂಧಗಳಿಲ್ಲ ಎಂದು ಜಾನ್ ಹೇಳಿದ್ದಾರೆ. ನಿಮಗೆ ಇಷ್ಟವಾದ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಸಂತೋಷದಿಂದಿರಿ. ಇಲ್ಲದೆ ಹೋದರೆ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುತ್ತೀರಿ ಎಂದು ಜಾನ್ ಹೇಳಿದ್ದಾರೆ.

ಯಾವುದೇ ಆಗಲಿ ಅತಿಯಾಗಿ ಮಾಡಬಾರದು. ಸೇವಿಸುವ ಆಹಾರವಾದರೂ ಅಷ್ಟೇ! ಎಂದು 109 ವರ್ಷದ ಜಾನ್ ಹೇಳಿದ್ದಾರೆ. ಸ್ಥಳೀಯ ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಭಾಗಿಯಾದ ಜಾನ್ ಅವರು ಮಾತನಾಡಿ, ಪ್ರತಿ ಶುಕ್ರವಾರ ನಾನು ಮೀನು ಮತ್ತು ಚಿಪ್ಸ್ಅನ್ನು ತಿನ್ನುತ್ತೇನೆ. ವಾಸ್ತವವಾಗಿ ಹೇಳುವುದಾದರೆ ಇದು ನನ್ನ ದೀರ್ಘಾಯುಷ್ಯಕ್ಕೆ ಕಾರಣ ಎಂದು ಹೇಳಿದ್ದಾರೆ.

ಮೀನು ಮತ್ತು ಚಿಪ್ಸ್ ನನ್ನ ನೆಚ್ಚಿನ ಖಾದ್ಯ. ಇದು ಎಂದಿಗೂ ನನಗೆ ರುಚಿಕರವಾದ ತಿಂಡಿ. ಚಿಪ್ಸ್ ಎದುರು ಕುಳಿತಿದ್ದರೆ ನಾನು ಇನ್ನೂ ಯುವಕನಾಗಿಬಿಡುತ್ತೇನೆ ಎಂದು ಅವರು ಹೇಳಿದ್ದಾರೆ. ಜಾನ್ ಅವರು 1912ರಲ್ಲಿ ಜನಿಸಿದರು. ದೃಷ್ಟಿಹೀನತೆಯಿಂದಾಗಿ ಅವರು ಸೈನ್ಯಕ್ಕೆ ಸೇರಲು ಸಾಧ್ಯವಾಗಲಿಲ್ಲ. ನಂತರ ಅಕೌಂಟೆಂಟ್ಆಗಿ ಕೆಲಸಕ್ಕೆ ಸೇರಬೇಕಾಯಿತು. 1942ರ ಸಮಯದಲ್ಲಿ ಜಾನ್ ಅವರು, ಬ್ಲಾಡ್ವೆನ್ ಅವರನ್ನು ಮದುವೆಯಾದರು. 113ನೇ ವಯಸ್ಸಿನಲ್ಲಿ ನಿಧನರಾದ ಹೆನ್ರಿ ಅಲ್ಲಿಗ್ಹ್ಯಾಮ್ ನಂತರ ಬ್ರಿಟನ್​ನಲ್ಲಿ ದಾಖಲಾದ ಅತ್ಯಂತ ಹಿರಿಯ ವ್ಯಕ್ತಿ ಇವರು.

ಇದನ್ನೂ ಓದಿ:

Viral News: ಹೊಟೆಲ್​ನಲ್ಲಿ ಆರ್ಡರ್​​ ಮಾಡಿದ ಊಟದ​ ಬೆಲೆ​ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!

Viral News: ನಿಮಗಿದು ಗೊತ್ತಾ?; ಈ ಕಾಳಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್ ನೀಡಲಾಗುತ್ತೆ!

(Viral news 109 years old man attributes ling life to weekly fish and chips )

Published On - 9:53 am, Mon, 30 August 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ