AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಾವೇ ಹೇರ್​ ಬ್ಯಾಂಡ್ ಆಯ್ತು!; ಶಾಪಿಂಗ್​ ಮಾಲ್​ನಲ್ಲಿ ಯುವತಿಯ ತಲೆ ನೋಡಿ ಓಡಿದ ಜನ

Shocking Video: ಫ್ಯಾಷನ್​ ಹುಚ್ಚಿನಿಂದ ಹಾವನ್ನೇ ತಲೆಗೆ ಹೇರ್​ಬ್ಯಾಂಡ್​ನಂತೆ ಸುತ್ತಿಕೊಂಡು ಬಂದ ಯುವತಿಯನ್ನು ನೋಡಿ ಶಾಪಿಂಗ್ ಮಾಲ್​ನಲ್ಲಿದ್ದವರು ಕಂಗಾಲಾಗಿ ಓಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral Video: ಹಾವೇ ಹೇರ್​ ಬ್ಯಾಂಡ್ ಆಯ್ತು!; ಶಾಪಿಂಗ್​ ಮಾಲ್​ನಲ್ಲಿ ಯುವತಿಯ ತಲೆ ನೋಡಿ ಓಡಿದ ಜನ
ಹಾವಿನ ಹೇರ್​ ಬ್ಯಾಂಡ್ ವಿಡಿಯೋ
TV9 Web
| Edited By: |

Updated on: Aug 30, 2021 | 1:23 PM

Share

ಫ್ಯಾಷನ್ ಎಂಬುದಕ್ಕೆ ಯಾವುದೇ ಇತಿ-ಮಿತಿಯಿಲ್ಲ. ಈಗಂತೂ ನಾವೇನೇ ಮಾಡಿದರೂ ಅದು ಫ್ಯಾಷನ್ ಎನಿಸಿಕೊಳ್ಳುತ್ತಿದೆ. ಬೇರೆಯವರಿಗಿಂತ ವಿಭಿನ್ನವಾಗಿ ಏನೇ ಮಾಡಿದರೂ ಅದು ಫ್ಯಾಷನ್. ಆದರೆ, ಕೆಲವೊಮ್ಮೆ ಈ ಕ್ರೇಜಿಯಾದ ಫ್ಯಾಷನ್​ಗಳು ಅತಿರೇಕವಾದರೆ ನೋಡುವವರಿಗೆ ಕಿರಿಕಿರಿಯಾದೀತು, ಭಯವೂ ಆದೀತು! ಅದರಲ್ಲಿ ಭಯವಾಗುವಂಥದ್ದು ಏನಿದೆ? ಎಂಬ ಅನುಮಾನ ನಿಮಗಿದ್ದರೆ ಈ ಸುದ್ದಿಯನ್ನು ಓದಿ. ಫ್ಯಾಷನ್​ ಹುಚ್ಚಿನಿಂದ ಹಾವನ್ನೇ ತಲೆಗೆ ಹೇರ್​ಬ್ಯಾಂಡ್​ನಂತೆ ಸುತ್ತಿಕೊಂಡು ಬಂದ ಯುವತಿಯನ್ನು ನೋಡಿ ಶಾಪಿಂಗ್ ಮಾಲ್​ನಲ್ಲಿದ್ದವರು ಕಂಗಾಲಾಗಿ ಓಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಚಾರಕ್ಕಾಗಿ ಏನೇನೋ ಹುಚ್ಚಾಟಗಳನ್ನು ಆಡುವುದನ್ನು ನೋಡಿದ್ದೇವೆ. ಅದೇ ರೀತಿ ಶಾಪಿಂಗ್​ ಮಾಲ್​ಗೆ ಬಂದ ಯುವತಿಯೊಬ್ಬಳು ಆರಾಮಾಗಿ ತನ್ನ ಪಾಡಿಗೆ ತಾನು ಶಾಪಿಂಗ್ ಮಾಡುತ್ತಿದ್ದಳು. ಆದರೆ, ಆಕೆಯ ಹಿಂದಿನಿಂದ ಬಂದ ಕೆಲವರು ಆಕೆಯ ತಲೆಯನ್ನು ನೋಡಿ ವಾಪಾಸ್ ಓಡಿಹೋಗಿದ್ದಾರೆ. ಆಕೆಯನ್ನು ನೋಡಿ ಓಡುವಂಥದ್ದು ಏನಾಯಿತು? ಎಂಬ ಕುತೂಹಲದಿಂದ ಹತ್ತಿರ ಬಂದು ನೋಡಿದ ಉಳಿದವರು ಕೂಡ ಕಂಗಾಲಾಗಿದ್ದಾರೆ. ಆಕೆ ಹೇರ್ ಬ್ಯಾಂಡ್ ಬದಲು ಹಾವನ್ನೇ ತಲೆಗೆ ಕಟ್ಟಿಕೊಂಡು ಬಂದಿದ್ದಳು!

View this post on Instagram

A post shared by Snakes Mania (@snakes.mania)

ಮೊದಲು ಕೆಲವರು ಇದನ್ನು ಹಾವಿನಂತೆ ಕಾಣುವ ಹೇರ್​ಬ್ಯಾಂಡ್ ಎಂದುಕೊಂಡರು. ಆದರೆ, ಅದು ಆಚೀಚೆ ಅಲುಗಾಡುತ್ತಾ ಬುಸುಗುಡುವ ಸೌಂಡ್ ಮಾಡುತ್ತಿದ್ದಂತೆ ಆ ಹಾವನ್ನು ಅನ್ನು ತುರುಬಿಗೆ ಸುತ್ತಿಕೊಂಡು ಬಂದಿದ್ದ ಆಕೆಯನ್ನು ನೋಡಿ ಶಾಪಿಂಗ್ ಮಾಲ್​ನಲ್ಲಿದ್ದ ಕೆಲವರು ಓಡಿ ಹೋಗಿದ್ದಾರೆ. ಇನ್ನು ಕೆಲವರು ಅದನ್ನು ನೋಡಿ ಖುಷಿಯಿಂದ ಫೋಟೋ, ವಿಡಿಯೋ ತೆಗೆದುಕೊಂಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. ಈ ಸ್ನೇಕ್ ಹೇರ್ ಬ್ಯಾಂಡ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: Viral Video: ಮೊಬೈಲ್ ಕಿತ್ತುಕೊಂಡು ಹಾರಿಹೋಯ್ತು ಗಿಳಿ; ಆಮೇಲಾಗಿದ್ದು ಊಹೆಗೂ ನಿಲುಕದ್ದು!

Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

(woman came to the shopping Mall with a snake Band around her head People Ran Away Shocking Video is here)

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ