AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Met Gala 2021: ಸದಾ ಮೈಮಾಟದಿಂದ ಸೆಳೆಯುತ್ತಿದ್ದ ಸುಂದರಿ ಕಿಮ್​ ಇಂದು ಹೀಗೇಕೆ ಆದ್ರು? ಇದು ಸಿನಿಮಾ ಅಲ್ಲ ರಿಯಲ್​

Kim Kardashian: ‘ಮೆಟ್​ ಗಾಲಾ 2021’ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಸೆಲೆಬ್ರಿಟಿಗಳು ಧರಿಸುವ ಕಾಸ್ಟ್ಯೂಮ್​ಗಳು ಸಖತ್​ ಗಮನ ಸೆಳೆಯುತ್ತವೆ. ಆದರೆ ಕಿಮ್​ ಕರ್ದಾಶಿಯನ್​ ರೀತಿ ಇಂಥ ವಿಚಿತ್ರ ಬಟ್ಟೆ ಧರಿಸಿ ಬರುವವರು ವಿರಳ.

Met Gala 2021: ಸದಾ ಮೈಮಾಟದಿಂದ ಸೆಳೆಯುತ್ತಿದ್ದ ಸುಂದರಿ ಕಿಮ್​ ಇಂದು ಹೀಗೇಕೆ ಆದ್ರು? ಇದು ಸಿನಿಮಾ ಅಲ್ಲ ರಿಯಲ್​
'ಮೆಟ್​ ಗಾಲಾ 2021' ಕಾರ್ಯಕ್ರಮದಲ್ಲಿ ಕಿಮ್​ ಕರ್ದಾಶಿಯನ್
TV9 Web
| Edited By: |

Updated on: Sep 14, 2021 | 11:36 AM

Share

ಖ್ಯಾತ ಮಾಡೆಲ್​ ಕಿಮ್​ ಕರ್ದಾಶಿಯನ್​ ಹಲವು ಕಾರಣಗಳಿಂದಾಗಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅಮೆರಿಕದ ಈ ಸುಂದರಿ ಸದಾ ಕಾಲ ಹಾಟ್​ ಅವತಾರದಲ್ಲೇ ಅಭಿಮಾನಿಗಳನ್ನು ಎದುರುಕೊಳ್ಳುತ್ತಾರೆ. ಮೈ ಮಾಟ ಪ್ರದರ್ಶಿಸುವಂತಹ ಉಡುಗೆಗಳನ್ನೇ ಧರಿಸಿ ಅವರು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಾರೆ. ಆದರೆ ಈಗ ಅವರು​ ‘ಮೆಟ್​ ಗಾಲಾ 2021’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರೀತಿಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಂಗಾಲಿನಿಂದ ನೆತ್ತಿಯವರೆಗೆ ಕಪ್ಪು ಬಣ್ಣದ ದಿರಿಸಿನಲ್ಲಿ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಕಿಮ್​ ಕರ್ದಾಶಿಯನ್​ ಎಂಟ್ರಿ ನೀಡಿದ್ದಾರೆ. ಈ ವಿಚಿತ್ರ ವೇಷದ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಈ ಬಾರಿ ಕೂಡ ಅದ್ದೂರಿಯಾಗಿಯೇ ಮೆಟ್​ ಗಾಲಾ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಸೆಲೆಬ್ರಿಟಿಗಳು ಧರಿಸುವ ಕಾಸ್ಟ್ಯೂಮ್​ಗಳು ಸಖತ್​ ಗಮನ ಸೆಳೆಯುತ್ತವೆ. ಆದರೆ ಇಂಥ ವಿಚಿತ್ರ ಬಟ್ಟೆ ಧರಿಸಿ ಬರುವವರು ವಿರಳ. ಫ್ಯಾಷನ್ ವಿಚಾರದಲ್ಲಿ ಯಾವುದೇ ಬೌಂಡರಿಗಳನ್ನು ಹಾಕಿಕೊಳ್ಳದ ಕಿಮ್​ ಕರ್ದಾಶಿಯನ್​ ಅವರು ಸಂಪೂರ್ಣ ದೇಹವನ್ನು ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡು ಬಂದಿದ್ದಾರೆ.

ಕಿಮ್​ ಜೊತೆ ಮತ್ತೋರ್ವ ವ್ಯಕ್ತಿ ಕೂಡ ಅದೇ ರೀತಿ ಕಾಣಿಸಿಕೊಂಡಿದ್ದಾರೆ. ಅದು ಅವರಿಂದ ದೂರವಾಗಿರುವ ಪತಿ ಕಾನಿ ವೆಸ್ಟ್​ ಎಂದು ಕೆಲವರು ಊಹಿಸಿದ್ದಾರೆ. ಆದರೆ ಕಾನಿ ವೆಸ್ಟ್​ ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎಂದು ಮೂಲಗಳಿಂದ ಗೊತ್ತಾಗಿದೆ. ಹಾಗಾಗಿ ಅದು ಅವರ ಫ್ಯಾಷನ್​ ಡಿಸೈನರ್​ ಇರಬಹುದು ಎಂಬುದಾಗಿಯೂ ಕೆಲವರ ಊಹಿಸಿದ್ದಾರೆ. ಸದ್ಯಕ್ಕೆ ಅದಕ್ಕೆ ಉತ್ತರ ಸಿಕ್ಕಿಲ್ಲ. ಎಲ್ಲೆಲ್ಲೂ ಕಿಮ್ ಅವರ ಈ ಕಪ್ಪು ಕಾಸ್ಟ್ಯೂಮ್​ ಬಗ್ಗೆಯೇ ಚರ್ಚೆ ಆಗುತ್ತಿದೆ.

ಅಂದಹಾಗೆ, ಕಿಮ್​ ಅವರು ಈ ರೀತಿ ಅಚ್ಚರಿ ಮೂಡಿಸಿದ್ದು ಇದೇ ಮೊದಲೇನಲ್ಲ. ಕಳೆದ ತಿಂಗಳು ಕೂಡ ಒಂದು ಕಾರ್ಯಕ್ರಮಕ್ಕೆ ಅವರು ಇದೇ ಮಾದರಿಯ ಬಟ್ಟೆ ಧರಿಸಿ ಬಂದಿದ್ದರು. ಸದ್ಯ ಕಿಮ್ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೆ. ಪತಿ ಕಾನಿ ವೆಸ್ಟ್​ ಜೊತೆ ಅವರಿಗೆ ಮನಸ್ತಾಪ ಉಂಟಾಗಿದೆ. ವಿಚ್ಛೇದನಕ್ಕಾಗಿ ಈ ಜೋಡಿ ಅರ್ಜಿ ಸಲ್ಲಿಸಿದೆ. ಈ ದಂಪತಿಗೆ ನಾಲ್ವರು ಮಕ್ಕಳು ಇದ್ದಾರೆ. ಮದುವೆಗೂ ಮುನ್ನ ಅವರಿಗೆ ಮೊದಲ ಮಗು ಜನಿಸಿತ್ತು. ಏಳು ವರ್ಷಗಳ ಅವರ ದಾಂಪತ್ಯ ಜೀವನ ಶೀಘ್ರದಲ್ಲೇ ಅಂತ್ಯವಾಗಲಿದೆ.

ಇದನ್ನೂ ಓದಿ:

ಕಸದ ಚೀಲವನ್ನೇ ಕಾಸ್ಟ್ಯೂಮ್​ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್​ ಬಾಸ್​ನಿಂದ ಔಟ್​; ನಿಲ್ಲದ ಕಣ್ಣೀರು

ಅಕ್ಕನ ಬಟ್ಟೆ ಕದ್ದು ಪ್ರೇಯಸಿಗೆ ಗಿಫ್ಟ್​ ಮಾಡುತ್ತಿದ್ದ ರಣಬೀರ್​ ಕಪೂರ್​; ಎಲ್ಲರ ಎದುರು ಸತ್ಯ ಬಾಯ್ಬಿಟ್ಟ ರಿಧಿಮಾ

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?