ಅಕ್ಕನ ಬಟ್ಟೆ ಕದ್ದು ಪ್ರೇಯಸಿಗೆ ಗಿಫ್ಟ್​ ಮಾಡುತ್ತಿದ್ದ ರಣಬೀರ್​ ಕಪೂರ್​; ಎಲ್ಲರ ಎದುರು ಸತ್ಯ ಬಾಯ್ಬಿಟ್ಟ ರಿಧಿಮಾ

ರಣಬೀರ್​​ ಕಪೂರ್​ ಅಕ್ಕ ರಿಧಿಮಾ ಕಪೂರ್​ ಮತ್ತು ತಾಯಿ ನೀತೂ ಕಪೂರ್​ ಅವರು ‘ದಿ ಕಪಿಲ್​ ಶರ್ಮಾ ಶೋ’ನಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು. ಆ ವೇಳೆ ಹಲವು ಸಂಗತಿಗಳನ್ನು ಹಂಚಿಕೊಂಡರು.

ಅಕ್ಕನ ಬಟ್ಟೆ ಕದ್ದು ಪ್ರೇಯಸಿಗೆ ಗಿಫ್ಟ್​ ಮಾಡುತ್ತಿದ್ದ ರಣಬೀರ್​ ಕಪೂರ್​; ಎಲ್ಲರ ಎದುರು ಸತ್ಯ ಬಾಯ್ಬಿಟ್ಟ ರಿಧಿಮಾ
ರಣಬೀರ್​ ಕಪೂರ್​, ರಿಧಿಮಾ ಕಪೂರ್
Follow us
TV9 Web
| Updated By: ಮದನ್​ ಕುಮಾರ್​

Updated on:Sep 09, 2021 | 9:23 AM

ಬಾಲಿವುಡ್​ನ ಬಹುಬೇಡಿಕೆಯ ನಟ ರಣಬೀರ್ ಕಪೂರ್​ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ವೈಯಕ್ತಿಕ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಅವರ ಬದುಕಿನಲ್ಲಿ ಹಲವು ಪ್ರೇಯಸಿಯರು ಬಂದುಹೋಗಿದ್ದಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್​ ಸೇರಿದಂತೆ ಅನೇಕ ಟಾಪ್ ನಟಿಯರ ಜೊತೆ ರಣಬೀರ್​ ಡೇಟಿಂಗ್​ ಮಾಡಿದ್ದರು. ಆದರೆ ಯಾವ ಸಂಬಂಧವೂ ಮದುವೆ ಮಂಟಪದವರೆಗೆ ಬರಲೇ ಇಲ್ಲ. ಈಗ ಅವರು ಆಲಿಯಾ ಭಟ್​ ಜೊತೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಈ ನಡುವೆ ಅವರ ಒಂದು ಕೆಟ್ಟ ಚಾಳಿಯ ಬಗ್ಗೆ ಸಹೋದರಿ ರಿಧಿಮಾ ಕಪೂರ್​ ಬಾಯಿಬಿಟ್ಟಿದ್ದಾರೆ.

ರಣಬೀರ್​ ಕಪೂರ್​ ಅವರು ಗರ್ಲ್​ಫ್ರೆಂಡ್ಸ್​ ಸಹವಾಸ ಮಾಡುತ್ತಿರುವುದು ಇಂದು-ನಿನ್ನೆಯಲ್ಲ. ಚಿಕ್ಕವಯಸ್ಸಿನಲ್ಲೂ ಅವರು ಹಾಗೆಯೇ ಇದ್ದರು. ಇತ್ತೀಚೆಗೆ ಅವರ ಅಕ್ಕ ರಿಧಿಮಾ ಕಪೂರ್​ ಮತ್ತು ತಾಯಿ ನೀತೂ ಕಪೂರ್​ ಅವರು ‘ದಿ ಕಪಿಲ್​ ಶರ್ಮಾ ಶೋ’ನಲ್ಲಿ ಭಾಗವಹಿಸಿದ್ದರು. ಆ ವೇಳೆ ಹಲವು ಸಂಗತಿಗಳನ್ನು ಹಂಚಿಕೊಂಡರು.

‘ಆಗ ನಾನು ಲಂಡನ್​ನಲ್ಲಿ ಓದುತ್ತಿದ್ದೆ. ರಜೆ ಇದ್ದಾಗ ಭಾರತಕ್ಕೆ ಬಂದಿದ್ದೆ. ಆ ಸಂದರ್ಭದಲ್ಲಿ ರಣಬೀರ್​ನನ್ನು ಭೇಟಿ ಮಾಡಲು ಅವನ ಗರ್ಲ್​ಫ್ರೆಂಡ್​ ನಮ್ಮ ಮನೆಗೆ ಬಂದಳು. ನನ್ನ ಬಳಿಯೇ ಇದ್ದಂತಹ ಒಂದು ಬಟ್ಟೆಯನ್ನು ಆಕೆ ಧರಿಸಿರುವುದು ನೋಡಿ ಅಚ್ಚರಿ ಆಯಿತು. ಅವಳ ಮುಖ ನೋಡುವ ಬದಲು ನಾನು ಬಟ್ಟೆಯನ್ನೇ ನೋಡುತ್ತಿದ್ದೆ. ನನ್ನ ಕಬೋರ್ಡ್​ನಲ್ಲಿ ಕಾಣೆ ಆಗಿದ್ದ ಡ್ರೆಸ್ ಇದೇ ಎಂಬುದು ಗೊತ್ತಾಯಿತು. ರಣಬೀರ್​ ನನ್ನ ವಸ್ತುಗಳನ್ನು ಕದ್ದು ತನ್ನ ಪ್ರೇಯಸಿಯರಿಗೆ ಗಿಫ್ಟ್​ ಮಾಡುತ್ತಿದ್ದ ಅಂತ ಆಗ ನನಗೆ ತಿಳಿಯಿತು’ ಎಂದು ರಿಧಿಮಾ ಹೇಳಿದ್ದಾರೆ.

ಈ ಮಾತಿಗೆ ರಣಬೀರ್​ ತಾಯಿ ನೀತೂ ಕಪೂರ್​ ಧ್ವನಿಗೂಡಿಸಿದ್ದಾರೆ. ‘ಆ ಸಂದರ್ಭದಲ್ಲಿ ಖರ್ಚು ಮಾಡಲು ರಣಬೀರ್​ ಬಳಿ ದುಡ್ಡು ಇರುತ್ತಿರಲಿಲ್ಲ. ನಾವು ಮಕ್ಕಳಿಗೆ ಅಗತ್ಯಕಿಂತ ಹೆಚ್ಚು ಹಣ ನೀಡುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ಸದ್ಯ ಆಲಿಯಾ ಭಟ್​ ಜೊತೆ ರಣಬೀರ್​ ಡೇಟಿಂಗ್​ ನಡೆಸುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇಬ್ಬರೂ ಜೊತೆಯಾಗಿ ಸುತ್ತಾಡುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಅವರು ಹಸೆಮಣೆ ಏರುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

ಸಿನಿಮಾಗಳ ಆಯ್ಕೆಯಲ್ಲಿ ರಣಬೀರ್​ ಸಿಕ್ಕಾಪಟ್ಟೆ ಚ್ಯೂಸಿ ಆಗಿದ್ದಾರೆ. 2018ರಲ್ಲಿ ಸೂಪರ್​ ಹಿಟ್​ ಆಗಿದ್ದ ‘ಸಂಜು’ ಬಳಿಕ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ‘ಶಂಶೇರಾ’ ಮತ್ತು ‘ಬ್ರಹ್ಮಾಸ್ತ್ರ’ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ:

ದಾನಿಶ್​ ಸೇಠ್​ಗೆ ಕರೆ ಮಾಡಿ ಹೊಗಳಿದ ರಣಬೀರ್​ ಕಪೂರ್​; ಈ ವಿಡಿಯೋ ಅಪ್​ಲೋಡ್​ ಮಾಡಿದ್ದಕ್ಕೆ ಬೈದ ಬಾಲಿವುಡ್​ ನಟ

ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ಗೆ ಸಿಕ್ಕ ಮೊದಲ ಸಂಬಳ ಎಷ್ಟು?​ ಖರೀದಿಸಿದ್ದು ಏನು?

Published On - 9:21 am, Thu, 9 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ