RC 15: ರಾಮ್​ಚರಣ್- ಶಂಕರ್ ಕಾಂಬಿನೇಷೇನ್​ನಲ್ಲಿ ಹೊಸ ಚಿತ್ರ; ಸಮಾರಂಭಕ್ಕೆ ಉಪ್ಪಿ ಸ್ಟೈಲ್​ನಲ್ಲಿ ಬಂದ ರಣವೀರ್ ಸಿಂಗ್

ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್​ನ ಹಿಟ್ ಜೋಡಿ ‘ಆರ್​ಸಿ15’ ಚಿತ್ರಕ್ಕೆ ಒಂದಾಗಿದೆ. ಚಿತ್ರದ ಕಾರ್ಯಕ್ರಮಕ್ಕೆ ಎಸ್.ಎಸ್.ರಾಜಮೌಳಿ, ರಣವೀರ್ ಸಿಂಗ್, ಚಿರಂಜೀವಿ ಮೊದಲಾದವರು ಭಾಗಿಯಾಗಿ ಹಾರೈಸಿದ್ದಾರೆ.

RC 15: ರಾಮ್​ಚರಣ್- ಶಂಕರ್ ಕಾಂಬಿನೇಷೇನ್​ನಲ್ಲಿ ಹೊಸ ಚಿತ್ರ; ಸಮಾರಂಭಕ್ಕೆ ಉಪ್ಪಿ ಸ್ಟೈಲ್​ನಲ್ಲಿ ಬಂದ ರಣವೀರ್ ಸಿಂಗ್
ರಾಮ್​ಚರಣ್, ರಣವೀರ್ ಸಿಂಗ್


ಟಾಲಿವುಡ್​, ಕಾಲಿವುಡ್ ಮತ್ತು ಬಾಲಿವುಡ್​ನ ಹಿಟ್ ಜೋಡಿ ನೂತನ ಚಿತ್ರವೊಂದಕ್ಕೆ ಜೊತೆಯಾಗುತ್ತಿದೆ. ಹೌದು, ಆರ್​ಆರ್​ಆರ್​ ಚಿತ್ರವನ್ನು ಮುಗಿಸಿರುವ ರಾಮ್​ ಚರಣ್ ತಮ್ಮ ನೂತನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಅವರಿಗೆ ಆಕ್ಷನ್ ಕಟ್ ಹೇಳಲಿರುವವರು ಭಾರತದಲ್ಲಿಯೇ ಹೆಸರು ಮಾಡಿರುವ ಕಾಲಿವುಡ್​ನ ಖ್ಯಾತ ನಿರ್ದೇಶಕ ಎಸ್.ಶಂಕರ್. ರಾಮ್​ ಚರಣ್​ಗೆ ನಾಯಕಿಯಾಗಿ ಬಣ್ಣ ಹಚ್ಚಲಿರುವವರು ಪ್ರಸ್ತುತ ಬಾಲಿವುಡ್​ನಲ್ಲಿ ಮುಂಚೂಣಿಯಲ್ಲಿರುವ ನಾಯಕಿ ಕಿಯಾರಾ ಅಡ್ವಾಣಿ. ಈ ಮೂಲಕ ಮೂರು ಭಾಷೆಗಳ ಸಮ್ಮಿಲನವಾಗುತ್ತಿದೆ. ಈ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆಯನ್ನು ಮೂಡಿಸಿದ್ದು, ಶಂಕರ್ ಅವರ 50ನೇ ಚಿತ್ರವಾಗಿದೆ. ಜೊತೆಗೆ ಇದು ರಾಮ್​ ಚರಣ್ ಅವರ 15ನೇ ಚಿತ್ರವಾಗಿದ್ದು, ಸದ್ಯ ಚಿತ್ರಕ್ಕೆ ‘ಆರ್​ಸಿ 15’ ಎಂದು ಹೆಸರಿಡಲಾಗಿದೆ.

RC15 Ram Charan Kiara and Ranveer Singh

ರಣವೀರ್ ಸಿಂಗ್, ಕಿಯಾರಾ ಅಡ್ವಾಣಿ, ರಾಮ್​ಚರಣ್

ಚಿತ್ರದ ಮೊದಲ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ರಾಮ್ ಚರಣ್, ಕಿಯಾರಾ ಮೊದಲಾದವರು ತಮ್ಮ ಕ್ಲಾಸ್ ಲುಕ್​ನಿಂದ ಗಮನ ಸೆಳೆದಿದ್ದಾರೆ. ಸಂಪೂರ್ಣ ಸೂಟು ಬೂಟಿನ ಸ್ಟೈಲ್​ನಲ್ಲಿ ಮಿಂಚುತ್ತಿರುವ ಅವರು, ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಶಂಕರ್ ನಿರ್ದೇಶನದ ಚಿತ್ರವೆಂದರೆ ಅಲ್ಲಿ ತಂತ್ರಜ್ಞರೂ ಕೂಡ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡಿದವರೇ ಆಗಿರುತ್ತಾರೆ.  ಈ ಚಿತ್ರದಲ್ಲಿಯೂ ಅದು ಮುಂದುವರೆದಿದ್ದು, ಖ್ಯಾತ ಸಂಗೀತ ನಿರ್ದೇಶಕ ತಮನ್.ಎಸ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ‘ಜನತಾ ಗ್ಯಾರೇಜ್’, ‘ಭರತ್ ಆನೆ ನೇನು’ ಮೊದಲಾದ  ಹಿಟ್ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಎಸ್.ತಿರುನವುಕರಸು ಈ ಚಿತ್ರಕ್ಕೂ ಕ್ಯಾಮೆರಾ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಮುಹೂರ್ತದ ಕಾರ್ಯಕ್ರಮದಲ್ಲಿ ಎಸ್.ಎಸ್.ರಾಜಮೌಳಿ, ಚಿರಂಜೀವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

RC15

‘ಆರ್​ಸಿ15’ ಮುಹೂರ್ತದಲ್ಲಿ ಭಾಗವಹಿಸಿದ ಚಿತ್ರತಂಡ ಮತ್ತು ರಾಜಮೌಳಿ, ರಣವೀರ್ ಸಿಂಗ್

‘ಆರ್​ಸಿ 15’ ಚಿತ್ರದ ಮೊದಲ ಪೋಸ್ಟರ್ ಇಲ್ಲಿದೆ:

ಕಾರ್ಯಕ್ರಮಕ್ಕೆ ಉಪ್ಪಿ ಸ್ಟೈಲ್​ನಲ್ಲಿ ಬಂದ ರಣವೀರ್ ಸಿಂಗ್:

ಮುಹೂರ್ತದ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ರಣವೀರ್ ಸಿಂಗ್ ವಿಭಿನ್ನ ಹೇರ್ ಸ್ಟೈಲ್​ನಿಂದ ಗಮನ ಸೆಳೆದರು. ಪ್ರತಿ ಬಾರಿಯು ವಿಶಿಷ್ಟ ಶೈಲಿಯಲ್ಲಿ ಉಡುಗೆ ತೊಟ್ಟು ಮಿಂಚುವ ಅವರು, ಈ ಬಾರಿ ಅಂಗಿಯನ್ನು ಹಾಕದೇ ಕೋಟನ್ನು ಹಾಕಿಕೊಂಡು ಬಂದು ಗಮನ ಸೆಳೆದರು. ಅಂತೆಯೇ ಅವರ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯಿತು. ಉಪೇಂದ್ರ ಅವರು ತಮ್ಮ ಉಪ್ಪಿ 2 ಮೊದಲಾದ ಚಿತ್ರಗಳಲ್ಲಿ ಮಾಡಿದ್ದ ಹೇರ್ ಸ್ಟೈಲ್​ನಂತೆಯೇ ರಣವೀರ್ ಕೂಡಾ ಸ್ಟೈಲ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಸದ್ಯ ಈ ಸ್ಟೈಲ್ ವೈರಲ್ ಆಗಿದೆ.

ರಣವೀರ್ ಹೇರ್ ಸ್ಟೈಲ್ ಕುರಿತು ವಿಡಿಯೊ ವರದಿ:

ಬಾಲಿವುಡ್ ನಟ ರಣವೀರ್ ಸಿಂಗ್ ತಮಿಳಿನ ‘ಅನಿಯನ್’ ಚಿತ್ರದ ಹಿಂದಿ ರಿಮೇಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಏಪ್ರಿಲ್​ನಲ್ಲಿ ಅನೌನ್ಸ್ ಮಾಡಲಾಗಿತ್ತು. ಈ ಚಿತ್ರವನ್ನು ತಮಿಳಿನಲ್ಲಿ ನಿರ್ದೇಶನ ಮಾಡಿದ್ದ ಶಂಕರ್ ಅವರೇ ನಿರ್ದೇಶಿಸಲಿದ್ದಾರೆ.

ಇದನ್ನೂ ಓದಿ:

ಹೇಗಿದೆ ಸತೀಶ್​ ನೀನಾಸಂ ತಮಿಳು ಸಿನಿಮಾ ಲುಕ್​?; ರಮ್ಯಾ ರಿಲೀಸ್​ ಮಾಡಿದ್ರು ಪೋಸ್ಟರ್​

ಸಲ್ಮಾನ್ ಖಾನ್ ‘ಹಿಟ್​ ಆಂಡ್ ರನ್’ ಪ್ರಕರಣವನ್ನು ಹೋಲುವ ‘ಸೆಲ್ಮೋನ್ ಭಾಯಿ’ ಗೇಮ್​ಗೆ ಕೋರ್ಟ್ ತಡೆ; ಏನಿದು ಪ್ರಕರಣ?

(Ram charan and Shankar combination’s new film RC15 is launched and Ranveer Singh attracts with his Uppi hair style)

Read Full Article

Click on your DTH Provider to Add TV9 Kannada