ತಾಯಿಯ ನಿಧನದ ಬಳಿಕ ಬೇರೊಬ್ಬರ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡ ಅಕ್ಷಯ್​ ಕುಮಾರ್; ಭಾವುಕರಾದ ಫ್ಯಾನ್ಸ್​​

ನಿರ್ದೇಶಕ ಆನಂದ್​ ಎಲ್​. ರಾಯ್​ ಬಾಲಿವುಡ್​ನಲ್ಲಿ ತುಂಬಾನೇ ಫೇಮಸ್​. ಅವರು ‘ತನು ವೆಡ್ಸ್​ ಮನು’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವರ ತಾಯಿ ಕೂಡ ಇಂದು (ಸೆಪ್ಟೆಂಬರ್​ 9) ಮೃತಪಟ್ಟಿದ್ದಾರೆ.

ತಾಯಿಯ ನಿಧನದ ಬಳಿಕ ಬೇರೊಬ್ಬರ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡ ಅಕ್ಷಯ್​ ಕುಮಾರ್; ಭಾವುಕರಾದ ಫ್ಯಾನ್ಸ್​​
ತಾಯಿಯ ನಿಧನದ ಬಳಿಕ ಬೇರೊಬ್ಬರ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡ ಅಕ್ಷಯ್​ ಕುಮಾರ್; ಭಾವುಕರಾದ ಫ್ಯಾನ್ಸ್​​

ಬಾಲಿವುಡ್​​ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಇಂದು (ಸೆಪ್ಟೆಂಬರ್​ 9) ನಿಧನ ಹೊಂದಿದ್ದಾರೆ. ಅನಾರೋಗ್ಯ ಕಾರಣದಿಂದ ಸೆಪ್ಟೆಂಬರ್ 3ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯನ್ನು ಅಕ್ಷಯ್​ ಕುಮಾರ್​ ನೆರವೇರಿಸಿದ್ದಾರೆ. ಈ ನೋವಿನಲ್ಲೂ ಅವರು ಮತ್ತೊಂದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದು ಈಗ ಸಾಕಷ್ಟು ಸುದ್ದಿಯಾಗುತ್ತಿದೆ.

ನಿರ್ದೇಶಕ ಆನಂದ್​ ಎಲ್​. ರಾಯ್​ ಬಾಲಿವುಡ್​ನಲ್ಲಿ ತುಂಬಾನೇ ಫೇಮಸ್​. ಅವರು ‘ತನು ವೆಡ್ಸ್​ ಮನು’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವರ ತಾಯಿ ಕೂಡ ಇಂದು (ಸೆಪ್ಟೆಂಬರ್​ 9) ಮೃತಪಟ್ಟಿದ್ದಾರೆ. ಆನಂದ್​ ಹಾಗೂ ಅಕ್ಷಯ್​ ಉತ್ತಮ ಗೆಳೆಯರು. ಈ ಕಾರಣಕ್ಕೆ ಆನಂದ್​ ತಾಯಿಗೆ ಕೊನೆಯ ನಮನ ಸಲ್ಲಿಸಲು ಅಕ್ಷಯ್​ ತೆರಳಿದ್ದರು. ಈ ಫೋಟೋ ವೈರಲ್​ ಆಗುತ್ತಿದ್ದು, ಅಕ್ಷಯ್​ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಧ್ಯಾಹ್ನ ಅಕ್ಷಯ್​ ಕುಮಾರ್​ ತಮ್ಮ ತಾಯಿಯ ಅಂತ್ಯಕ್ರಿಯೆ ನಡೆಸಿದ್ದಾರೆ. ಸಂಜೆ ವೇಳೆಗೆ ಅವರು ಆನಂದ್​ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ತಮ್ಮ ನೋವಿನ ನಡುವೆಯೂ ಅವರು ಆನಂದ್​ ಅವರನ್ನು ಭೇಟಿ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ತಮ್ಮ ತಾಯಿ ನಿಧನವಾಗಿರುವ ಸುದ್ದಿಯನ್ನು ಅಕ್ಷಯ್ ಕುಮಾರ್ ಅವರೇ ಖಚಿತಪಡಿಸಿದ್ದರು. ಈ ಬಗ್ಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದ ಅವರು, ‘ನನ್ನ ತಾಯಿಯೇ ನನ್ನ ಸರ್ವಸ್ವ. ಇಂದು ಅವರನ್ನು ಕಳೆದುಕೊಂಡು ನಾನು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದರು. ಬೇರೆ ಜಗತ್ತಿನಲ್ಲಿರುವ ನನ್ನ ತಂದೆಯೊಂದಿಗೆ ಅವರು ಸೇರಿಕೊಂಡರು. ನನ್ನ ತಾಯಿ ಗುಣಮುಖರಾಗಲೆಂದು ಬಯಸಿದ ನಿಮ್ಮ ಪ್ರಾರ್ಥನೆಯನ್ನು ನಾನು ಮತ್ತು ನನ್ನ ಕುಟುಂಬದವರು ಹೃದಯಪೂರ್ವಕವಾಗಿ ಗೌರವಿಸುತ್ತೇವೆ. ಓಂ ಶಾಂತಿ’ ಎಂದಿದ್ದರು.

ಇದನ್ನೂ ಓದಿ: Akshay Kumar: ಅಕ್ಷಯ್​ ಕುಮಾರ್​ಗೆ ಮಾತೃ ವಿಯೋಗ; ಅಗಲಿದ ಅಮ್ಮನಿಗೆ ಅಕ್ಷರ ನಮನ ಸಲ್ಲಿಸಿದ ನಟ

Read Full Article

Click on your DTH Provider to Add TV9 Kannada