ಎಸ್​ಪಿಬಿ ಮಗ ಚರಣ್​ಗೆ ನನ್ನ ಕಂಡರೆ ಅಸೂಯೆ; ರಾಜೇಶ್​ ಕೃಷ್ಣನ್​

ಎಸ್​ಪಿಬಿ ಮಗ ಚರಣ್​ಗೆ ನನ್ನ ಕಂಡರೆ ಅಸೂಯೆ; ರಾಜೇಶ್​ ಕೃಷ್ಣನ್​

TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 08, 2021 | 3:35 PM

ಎಸ್​.ಪಿ ಬಾಲ ಸುಬ್ರಹ್ಮಣ್ಯಂ ಅವರ ಮಗ ಚರಣ್​ ಹಾಗೂ ಗಾಯಕ ರಾಜೇಶ್​ ಕೃಷ್ಣನ್​ ಅವರು ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕೆ ಜಡ್ಜ್​ ಆಗಿ ಆಗಮಿಸಿದ್ದಾರೆ. ಇಬ್ಬರಿಗೂ ಅಭಿಮಾನಿ ಬಳಗ ದೊಡ್ಡದೇ ಇದೆ.

ಎಸ್​.ಪಿ ಬಾಲ ಸುಬ್ರಹ್ಮಣ್ಯಂ ಅವರ ಮಗ ಚರಣ್​ ಹಾಗೂ ಗಾಯಕ ರಾಜೇಶ್​ ಕೃಷ್ಣನ್​ ಅವರು ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕೆ ಜಡ್ಜ್​ ಆಗಿ ಆಗಮಿಸಿದ್ದಾರೆ. ಇಬ್ಬರಿಗೂ ಅಭಿಮಾನಿ ಬಳಗ ದೊಡ್ಡದೇ ಇದೆ. ಇಬ್ಬರ ಗಾಯನವೂ ಅದ್ಭುತವೇ. ಆದರೆ, ರಾಜೇಶ್​ ಕೃಷ್ಣನ್​ ಅವರನ್ನು ಕಂಡರೆ ಚರಣ್​ಗೆ ಅಸೂಯೆ. ಇದನ್ನು ಸ್ವತಃ ರಾಜೇಶ್​ ಕೃಷ್ಣನ್​ ಅವರೇ ಹೇಳಿಕೊಂಡಿದ್ದಾರೆ.

ರಾಜೇಶ್​ ಕೃಷ್ಣನ್​ ಒಮ್ಮೆ ಚರಣ್​ ಜೊತೆ ಮಾತನಾಡುತ್ತಿದ್ದರು. ಈ ವೇಳೆ ರಾಜೇಶ್​ ‘ನಿಮ್ಮನ್ನು ನೋಡಿದರೆ ನನಗೆ ಅಸೂಯೆ ಆಗುತ್ತದೆ. ನೀವು ನಿತ್ಯ ಎಸ್​ಪಿಬಿ ನೋಡಬಹುದು’ ಎಂದು ಚರಣ್​ಗೆ ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಚರಣ್​ ‘ನನಗೆ ನಿಮ್ಮನ್ನು ನೋಡಿದರೆ ಅಸೂಯೆ ಆಗುತ್ತದೆ. ಏಕೆಂದರೆ ಬೆಳಗ್ಗೆ ತಿಂಡಿಗೆ ಕೂತಾಗೆಲ್ಲ ನಮ್ಮ ತಂದೆ ನಿಮ್ಮ ಬಗ್ಗೆ ಹೇಳುತ್ತಿದ್ದರು’ ಎಂದು ರಾಜೇಶ್​ಗೆ ಹೇಳಿದ್ದಾರೆ. ಈ ಕುರಿತು ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.

ಇದನ್ನೂ ಓದಿ: ಎಸ್​.ಪಿ. ಬಾಲಸುಬ್ರಹ್ಮಣ್ಯಂ ನೆನೆದು ಹಾಡುವಾಗಲೇ ಕಣ್ಣೀರಿಟ್ಟ ರಾಜೇಶ್​ ಕೃಷ್ಣನ್​

Published on: Sep 08, 2021 03:34 PM