ಸಲ್ಮಾನ್ ಖಾನ್ ‘ಹಿಟ್​ ಆಂಡ್ ರನ್’ ಪ್ರಕರಣವನ್ನು ಹೋಲುವ ‘ಸೆಲ್ಮೋನ್ ಭಾಯಿ’ ಗೇಮ್​ಗೆ ಕೋರ್ಟ್ ತಡೆ; ಏನಿದು ಪ್ರಕರಣ?

Salman Khan: ಬಾಲಿವುಡ್​ನ ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನೇ ಹೋಲುವ ‘ಸೆಲ್ಮೋನ್ ಭಾಯಿ’ ಆಟಕ್ಕೆ ಮುಂಬೈನ ನ್ಯಾಯಾಲಯವೊಂದು ತಡೆಯನ್ನು ನೀಡಿದೆ. ಇದರಿಂದಾಗಿ ಸಲ್ಮಾನ್ ಅವರ ಖಾಸಗಿತನದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಸಲ್ಮಾನ್ ಖಾನ್ ‘ಹಿಟ್​ ಆಂಡ್ ರನ್’ ಪ್ರಕರಣವನ್ನು ಹೋಲುವ ‘ಸೆಲ್ಮೋನ್ ಭಾಯಿ’ ಗೇಮ್​ಗೆ ಕೋರ್ಟ್ ತಡೆ; ಏನಿದು ಪ್ರಕರಣ?
ಸಲ್ಮಾನ್ ಖಾನ್ (ಸಾಂದರ್ಭಿಕ ಚಿತ್ರ)

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹಿಟ್ ಆಂಡ್ ರನ್ ಕೇಸನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿದ್ದ, ‘ಸೆಲ್ಮೋನ್ ಭಾಯಿ’ ವಿಡಿಯೊ ಗೇಮ್​ಗೆ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಕಳೆದ ತಿಂಗಳು ಆನ್‌ಲೈನ್ ವಿಡಿಯೋ ಗೇಮ್ ‘ಸೆಲ್ಮೋನ್ ಭಾಯಿ’ ಡೆವಲಪರ್‌ಗಳ ವಿರುದ್ಧ ಮುಂಬೈ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ವರದಿಗಳ ಪ್ರಕಾರ,  ಆಟದಲ್ಲಿ ಪ್ರದರ್ಶಿಸಲಾದ ಹೆಸರು ಮತ್ತು ಚಿತ್ರಗಳು ತನ್ನ ಆನಿಮೇಟೆಡ್ ಆವೃತ್ತಿಯಂತೆ ಗೋಚರಿಸಿದೆ ಎಂದು ಸಲ್ಮಾನ್ ಆರೋಪಿಸಿದ್ದರು. ಮತ್ತು ಆಟದ ಹೆಸರು ಅಭಿಮಾನಿಗಳು ಕರೆಯುವ ‘ಸಲ್ಮಾನ್ ಭಾಯ್’ ಹೆಸರನ್ನೇ  ಹೋಲುತ್ತದೆ ಎಂದು ನಟ ಸಲ್ಮಾನ್ ಖಾನ್ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದರು.

ಪಿಟಿಐ ವರದಿಯ ಪ್ರಕಾರ, ಮುಂಬೈ ಸಿವಿಲ್ ನ್ಯಾಯಾಲಯವು ಬಾಲಿವುಡ್ ನಟ ಸಲ್ಮಾನ್ ಖಾನ್ ಒಳಗೊಂಡ ಹಿಟ್ ಅಂಡ್ ರನ್ ಪ್ರಕರಣವನ್ನು ಆಧರಿಸಿದೆ ಎನ್ನಲಾದ ಆನ್‌ಲೈನ್ ಆಟ ‘ಸೆಲ್ಮೋನ್ ಭಾಯಿ’ಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಆದೇಶಿಸಿದೆ. ಮುಂಬೈ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ.ಜೈಸ್ವಾಲ್ ಅವರು ಸೋಮವಾರ ಈ ಆದೇಶವನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ನ್ಯಾಯಾಲಯವು ಆಟವನ್ನು ಮತ್ತು ಅದರ ಚಿತ್ರಗಳನ್ನು ವೀಕ್ಷಿಸಿದ ನಂತರ, ಸಲ್ಮಾನ್ ಖಾನ್ ಮತ್ತು ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಟವಿದೆ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತು ಅದು ಆದೇಶವನ್ನು ನೀಡಿದ್ದು ಅದರಂತೆ, ‘ಆಟದ ನಿರ್ಮಾಪಕರಾದ ಪರೋಡಿ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರು- ಆಟವನ್ನು ಪ್ರಸಾರ ಮಾಡುವುದು, ಪ್ರಾರಂಭಿಸುವುದು, ಮರು ಆರಂಭಿಸುವುದು ಮತ್ತು ಮರುಸೃಷ್ಟಿಸುವುದು ಅಥವಾ ನಟನಿಗೆ ಸಂಬಂಧಿಸಿದ ಇತರ ಯಾವುದೇ ಕಂಟೆಂಟನ್ನು ಸೃಷ್ಟಿಸುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಇತರ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಆಟವನ್ನು ತಕ್ಷಣವೇ ತೆಗೆಯಲು/ ನಿರ್ಬಂಧಿಸಲು/ ನಿಷ್ಕ್ರಿಯಗೊಳಿಸಲು ನ್ಯಾಯಾಲಯವು ಸಂಸ್ಥೆಗೆ ಸೂಚಿಸಿದೆ.

ಸಲ್ಮಾನ್ ಖಾನ್ ಒಪ್ಪಿಗೆಯನ್ನು ಪಡೆಯದೇ ಅವರ ಕುರಿತು ಆಟವನ್ನು ಮರುಸೃಷ್ಟಿ ಮಾಡಲಾಗಿದ್ದು, ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಲ್ಮಾನ್ ಖಾನ್ ಒಪ್ಪಿಗೆ ನೀಡದಿದ್ದರೂ, ಅಂತಹ ಆಟವನ್ನು ಸೃಷ್ಟಿಸಿ, ಅವರ ಪ್ರತಿಷ್ಠೆಯನ್ನು ಹಾಳು ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯ ತಿಳಿಸಿದೆ.

ಪ್ರಕರಣದ ಕುರಿತಂತೆ ಸಲ್ಮಾನ್ ನೀಡಿದ್ದ ದೂರಿನಲ್ಲಿ, ಒಪ್ಪಿಗೆಯನ್ನು ಪಡೆಯದೇ ಆಪ್ ಅಭಿವೃದ್ಧಿ ಸಂಸ್ಥೆ, ಸಲ್ಮಾನ್ ಚಿತ್ರ ಬಳಸಿ ವಾಣಿಜ್ಯಾತ್ಮಕ ಲಾಭ ಗಳಿಸಿತ್ತು ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ‘ಸೆಲ್ಮೋನ್ ಭಾಯಿ’ ಗೇಮ್ ಡೆವಲಪರ್​ಗಳಿಗೆ ತಮ್ಮ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದ್ದು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿದೆ.

ಇದನ್ನೂ ಓದಿ:

ಆ್ಯಂಕರ್​ ಅನುಶ್ರೀಗೆ ಮತ್ತೆ ಸಂಕಷ್ಟ; ಪ್ರಕರಣ ರೀ ಓಪನ್​ ಮಾಡಲು ಅರ್ಜಿ

Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ

(According to Salman Khan complaint court bans Selmon Bhai game)

Read Full Article

Click on your DTH Provider to Add TV9 Kannada