ಆ್ಯಂಕರ್​ ಅನುಶ್ರೀಗೆ ಮತ್ತೆ ಸಂಕಷ್ಟ; ಪ್ರಕರಣ ರೀ ಓಪನ್​ ಮಾಡಲು ಅರ್ಜಿ

ಬಿಗ್​ ಬಾಸ್​ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದು, ಸೋಮವಾರ ಪ್ರಕರಣ ರೀ ಓಪನ್​ಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಆ್ಯಂಕರ್​ ಅನುಶ್ರೀಗೆ ಮತ್ತೆ ಸಂಕಷ್ಟ; ಪ್ರಕರಣ ರೀ ಓಪನ್​ ಮಾಡಲು ಅರ್ಜಿ
ಆ್ಯಂಕರ್​ ಅನುಶ್ರೀಗೆ ಮತ್ತೆ ಸಂಕಷ್ಟ; ಪ್ರಕರಣ ರೀ ಓಪನ್​ ಮಾಡಲು ಅರ್ಜಿ

‘ನಿರೂಪಕಿ ಅನುಶ್ರೀ ವಿರುದ್ಧ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಪ್ರಕರಣ ದಾಖಲಿಸಿಲ್ಲ. ಪ್ರಕರಣದ ಸಂಬಂಧ ಮತ್ತೆ ಅನುಶ್ರೀ ವಿಚಾರಣೆಯ ಸಾಧ್ಯತೆ ಕಡಿಮೆ’ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದು, ಸೋಮವಾರ ಪ್ರಕರಣ ರೀ ಓಪನ್​ಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

‘ಮಂಗಳೂರು ಪೊಲೀಸರ ಚಾರ್ಜ್​​ಶೀಟ್​ನಲ್ಲಿ ಲೋಪಗಳು ಇರುವುದು ಕಂಡು ಬಂದಿವೆ. ತರುಣ್ ವಿಚಾರಣೆ ಮಾಡಿದರೂ ಆ ಬಗ್ಗೆ ಹೇಳಿಕೆ ಇಲ್ಲ. ಅನುಶ್ರೀ ಹೇಳಿಕೆ ಕೂಡ ಚಾರ್ಜ್ ಶೀಟ್​​ನಲ್ಲಿ ಇಲ್ಲ. ಮಂಗಳೂರಿನ ಪೊಲೀಸರು ಬೆಂಗಳೂರು ಪೊಲೀಸರ ತರಹ ತನಿಖೆ ಮಾಡಿಲ್ಲ. ಹಾಗಾಗಿ ನಾವು ಪ್ರಕರಣ ಮರು ತನಿಖೆಗೆ ಮನವಿ ಮಾಡುತ್ತೇವೆ. ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಮನವಿ ಮಾಡುತ್ತೇವೆ’ ಎಂದಿದ್ದಾರೆ ಅವರು.

‘ಮಂಗಳೂರು ಪೊಲೀಸರ ತನಿಖೆಯಲ್ಲಿ ಎಲ್ಲೋ ಒಂದು ಕಡೆ ಟೆಕ್ನಿಕಲ್ ಎರರ್ಸ್ ಆಗಿದೆ. ಆರೋಪಿಗಳ ಮೆಡಿಕಲ್ ರಿಪೋರ್ಟ್ ಕೂಡ ಮಾಡಿಲ್ಲ. ತನಿಖಾಧಿಕಾರಿ ಶಿವಪ್ರಕಾಶ್ ನಾಯಕ್ ವರ್ಗಾವಣೆ ಮಾಡಿರುವುದು ಹಲವು ಅನುಮಾನ ಹುಟ್ಟಿಸಿದೆ. ಹೀಗಾಗಿ, ಕೇಸ್ ರೀಓಪನ್ ಮಾಡಬೇಕಿದೆ ಎಂದಿದ್ದಾರೆ ಪ್ರಶಾಂತ್​.

ಆರೋಪಿ ಕಿಶೋರ್ ಏನು ಹೇಳಿದ್ದರು?

‘ನನಗೆ ಡ್ರಗ್ಸ್​​ ಪ್ರಕರಣದ ಬಗ್ಗೆ ಏನೇನೂ ಗೊತ್ತಿಲ್ಲ. ಚಾರ್ಜ್‌ಶೀಟ್‌ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಟಿ ಅನುಶ್ರೀ ಜೊತೆ ಯಾವುದೇ ಪಾರ್ಟಿ ಮಾಡಿಲ್ಲ. ಚಾರ್ಜ್‌ಶೀಟ್‌ನಲ್ಲಿರುವುದು ನನ್ನ ಹೇಳಿಕೆ ಅಲ್ಲ’ ಎಂದು ಡ್ರಗ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಅನುಶ್ರೀ ಈಗ ಎಲ್ಲಿದ್ದಾರೆ?; ಅವರ ಮೇಲಿರೋ ಆರೋಪಗಳೇನು?; ಇಲ್ಲಿದೆ ಸಂಪೂರ್ಣ ಮಾಹಿತಿ

ಆ್ಯಂಕರ್ ಅನುಶ್ರೀ ವಿರುದ್ಧ ಸಾಕ್ಷಾಧಾರ ಕೊರತೆಯಿಂದ ಪ್ರಕರಣ ದಾಖಲಿಸಿಲ್ಲ: ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

 

Read Full Article

Click on your DTH Provider to Add TV9 Kannada