ರಜತ್​ ಬೇಡಿ ಕಾರು ಡಿಕ್ಕಿಯಿಂದ ಗಾಯಗೊಂಡಿದ್ದ ವ್ಯಕ್ತಿ ನಿಧನ; ಬಾಲಿವುಡ್​ ನಟನಿಗೆ ಹೆಚ್ಚಿತು ಸಂಕಷ್ಟ

TV9 Digital Desk

| Edited By: ಮದನ್​ ಕುಮಾರ್​

Updated on: Sep 09, 2021 | 8:15 AM

Rajat Bedi: ಅಪಘಾತವಾದ ಕೂಡಲೇ ಗಾಯಾಳುವನ್ನು ಕೂಪರ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎನ್​ ನಗರ್​ ಪೊಲೀಸ್​ ಠಾಣೆಯಲ್ಲಿ ರಜತ್​ ಬೇಡಿ ವಿರುದ್ಧ ಕೇಸ್​ ದಾಖಲಾಗಿದೆ. ಇದುವರೆಗೂ ಪೊಲೀಸರು ರಜತ್​ ಬೇಡಿಯನ್ನು ಬಂಧಿಸಿಲ್ಲ.

ರಜತ್​ ಬೇಡಿ ಕಾರು ಡಿಕ್ಕಿಯಿಂದ ಗಾಯಗೊಂಡಿದ್ದ ವ್ಯಕ್ತಿ ನಿಧನ; ಬಾಲಿವುಡ್​ ನಟನಿಗೆ ಹೆಚ್ಚಿತು ಸಂಕಷ್ಟ
ರಜತ್ ಬೇಡಿ
Follow us

ಇತ್ತೀಚೆಗಷ್ಟೇ ರಾಜೇಶ್​ ಎಂಬ ಪಾದಚಾರಿಗೆ ನಟ ರಜತ್​ ಬೇಡಿ ಅವರ ಕಾರು ಡಿಕ್ಕಿ ಹೊಡೆದಿತ್ತು. ಪರಿಣಾಮ ಗಾಯಾಳುವಿನ​ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್​ ಮೃತರಾಗಿದ್ದಾರೆ. ಹಾಗಾಗಿ ರಜತ್​ ಬೇಡಿಗೆ ಸಂಕಷ್ಟ ಎದುರಾಗಿದೆ. ನಟನ ಮೇಲೆ ಹೊಸ ಕೇಸ್​ ದಾಖಲಿಸಲಾಗಿದೆ. ಅಪಘಾತವಾದ ಬಳಿಕ ನಟನಿಂದ ತಮಗೆ ಸೂಕ್ತ ನೆರವು ಸಿಕ್ಕಿಲ್ಲ ಎಂದು ರಾಜೇಶ್​ ಕುಟುಂಬದವರು ಆರೋಪಿಸಿದ್ದಾರೆ.

ರಾಜೇಶ್​ಗೆ 40 ವರ್ಷ ವಯಸ್ಸಾಗಿತ್ತು. ಅಪಘಾತವಾದ ಕೂಡಲೇ ಅವರನ್ನು ಕೂಪರ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎನ್​ ನಗರ್​ ಪೊಲೀಸ್​ ಠಾಣೆಯಲ್ಲಿ ರಜತ್​ ಬೇಡಿ ವಿರುದ್ಧ ಕೇಸ್​ ದಾಖಲಾಗಿದೆ. ಇದುವರೆಗೂ ಪೊಲೀಸರು ರಜತ್​ ಬೇಡಿಯನ್ನು ಬಂಧಿಸಿಲ್ಲ. ಮಡದಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ರಾಜೇಶ್​ ಅಗಲಿದ್ದಾರೆ.

ರಾಜೇಶ್​ ಕುಟುಂಬದವರ ಆರೋಪವನ್ನು ರಜತ್​ ಬೇಡಿ ಮ್ಯಾನೇಜರ್​ ತಳ್ಳಿಹಾಕಿದ್ದಾರೆ. ‘ಇದೊಂದು ದುರದೃಷ್ಟದ ಸಂಗತಿ. ರಜತ್​ ನಿಧಾನವಾಗಿಯೇ ಕಾರು ಓಡಿಸುತ್ತಿದ್ದರು. ಅವರ ಕಾರಿಗೆ ರಾಜೇಶ್ ಸಡನ್ ಆಗಿ​ ಅಡ್ಡ ಬಂದರು. ರಾಜೇಶ್ ತುಂಬ ಕುಡಿದಿದ್ದರು. ಅವರನ್ನು ಸ್ವತಃ ರಜತ್​ ಅವರೇ ಕೂಪರ್​ ಆಸ್ಪತ್ರೆಗೆ ಕರೆದುಕೊಂಡು ಹೋದರು. ತಮ್ಮ ಕೈಲಾದ ಸಹಾಯ ಮಾಡಿದರು. ಮಧ್ಯರಾತ್ರಿ ಕೂಡ ರಕ್ತದ ವ್ಯವಸ್ಥೆ ಮಾಡಿಸಿದ್ದರು. ರಾಜೇಶ್​ ಬೇಗ ಚೇತರಿಸಿಕೊಳ್ಳಲಿ ಅಂತ ಪ್ರಾರ್ಥಿಸಿದ್ದರು. ಆದರೆ ಅವರ ನಿಧನದಿಂದ ರಜತ್​ಗೆ ತೀವ್ರ ನೋವಾಗಿದೆ’ ಎಂದು ಮ್ಯಾನೇಜರ್​ ಹೇಳಿಕೆ ನೀಡಿದ್ದಾರೆ.

‘ಸ್ವಲ್ಪ ಹೊತ್ತಿನಲ್ಲಿ ವಾಪಸ್​ ಬರುತ್ತೇನೆ ಅಂತ ಹೇಳಿಹೋದ ರಜತ್​ ಬೇಡಿ ಅವರು ನಂತರ ಮರಳಿ ಬಂದಿಲ್ಲ. ಡಿಎನ್​ ನಗರ್​ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನನ್ನ ಗಂಡನಿಗೆ ಏನಾದರೂ ಆದರೆ ಅದಕ್ಕೆ ರಜತ್​ ಬೇಡಿಯೇ ಕಾರಣ’ ಎಂದು ರಾಜೇಶ್​ ಪತ್ನಿ ಅಳಲು ತೋಡಿಕೊಂಡಿದ್ದರು. ‘ಕೊಯಿ ಮಿಲ್​ ಗಯಾ’, ‘ಖಾಮೋಶ್​’, ‘ದಿ ಟ್ರೇನ್​’, ‘ಪಾರ್ಟ್ನರ್​’, ‘ಅಕ್ಸರ್​’ ಸೇರಿದಂತೆ 40ಕ್ಕೂ ಅಧಿಕ ಸಿನಿಮಾಗಳಲ್ಲಿ ರಜತ್​ ಬೇಡಿ ನಟಿಸಿದ್ದಾರೆ. ಕನ್ನಡದ ‘ಜಗ್ಗುದಾದ’ ಸಿನಿಮಾದಲ್ಲೂ ಅವರೊಂದು ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಬೇರೆ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಸ್ನೇಹಿತರು

Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​

ತಾಜಾ ಸುದ್ದಿ

Related Stories

Click on your DTH Provider to Add TV9 Kannada