ತಾಯಿ ಸತ್ತ ಮರುದಿನವೇ ಅಕ್ಷಯ್​ ಕುಮಾರ್​ ಹುಟ್ಟುಹಬ್ಬ; ಅಮ್ಮನ ಬಗ್ಗೆ ನಟನ ಭಾವುಕ ಮಾತು​

ಬುಧವಾರವಷ್ಟೇ (ಸೆ.8) ತಾಯಿಯನ್ನು ಕಳೆದುಕೊಂಡ ಅಕ್ಷಯ್​ ಕುಮಾರ್​ ಅವರಿಗೆ ಇಂದು (ಸೆ.9) ಹುಟ್ಟುಹಬ್ಬ. ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ತಾಯಿಯನ್ನು ನೆನೆದು ಅಕ್ಷಯ್​ ಕುಮಾರ್​ ಭಾವುಕರಾಗಿದ್ದಾರೆ.

ತಾಯಿ ಸತ್ತ ಮರುದಿನವೇ ಅಕ್ಷಯ್​ ಕುಮಾರ್​ ಹುಟ್ಟುಹಬ್ಬ; ಅಮ್ಮನ ಬಗ್ಗೆ ನಟನ ಭಾವುಕ ಮಾತು​
ತಾಯಿ ಅರುಣಾ ಭಾಟಿಯಾ ಜೊತೆ ಅಕ್ಷಯ್​ ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 09, 2021 | 11:47 AM

ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ನಟ ಅಕ್ಷಯ್​ ಕುಮಾರ್​ ಅವರು ಇಂದು (ಸೆ.9) ಅದ್ದೂರಿಯಾಗಿ ಬರ್ತ್​ಡೇ ಆಚರಣೆ ಮಾಡಿಕೊಳ್ಳಬೇಕಿತ್ತು. ಆದರೆ ಈಗ ಅವರ ಕುಟುಂಬದಲ್ಲಿ ಹುಟ್ಟುಹಬ್ಬದ ಸಂಭ್ರಮವಿಲ್ಲ. ಜನ್ಮದಿನಕ್ಕೂ ಒಂದು ದಿನ ಮುನ್ನ ಅಂದರೆ ಸೆ.8ರಂದು ಮುಂಜಾನೆ ಅಕ್ಷಯ್​ ಕುಮಾರ್​ ತಾಯಿ ಅರುಣಾ ಭಾಟಿಯಾ ನಿಧನರಾದರು. ಹಾಗಾಗಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಸಂದಿಗ್ಧ ಸಂದರ್ಭದಲ್ಲಿ ತಾಯಿಯನ್ನು ನೆನೆದು ಅಕ್ಷಯ್​ ಕುಮಾರ್​ ಭಾವುಕವಾಗಿ ಪೋಸ್ಟ್​ ಮಾಡಿದ್ದಾರೆ. ಅವರ ಮನೆಯಲ್ಲೀಗ ಶೋಕದ ವಾತಾವರಣ ನಿರ್ಮಾಣ ಆಗಿದೆ. ತಾಯಿಯನ್ನು ಕಳೆದುಕೊಂಡ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಸಾಂತ್ವನ ಹೇಳುತ್ತಿದ್ದಾರೆ.

ಅಕ್ಷಯ್​ ಕುಮಾರ್​ ಕೆನ್ನೆಗೆ ಅರುಣಾ ಭಾಟಿಯಾ ಅವರು ತನ್ಮಯತೆಯಿಂದ ಮುತ್ತಿಡುತ್ತಿರುವ ಕ್ಷಣ ಈ ಫೋಟೋದಲ್ಲಿ ಸೆರೆಯಾಗಿದೆ. ಅದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡಿಕೊಂಡಿರುವ ಅಕ್ಕಿ, ಅಮ್ಮನನ್ನು ಭಾವುಕವಾಗಿ ಸ್ಮರಿಸಿದ್ದಾರೆ. ‘ಅಮ್ಮ ನನಗಾಗಿ ಮೇಲಿಂದಲೇ ಹ್ಯಾಪಿ ಬರ್ತ್​ಡೇ ಅಂತ ಹಾಡುತ್ತಿದ್ದಾರೆ ಎಂಬ ನಂಬಿಕೆ ನನಗಿದೆ. ಸಾಂತ್ವನ ಹೇಳಿದ ಮತ್ತು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಜೀವನ ಮುಂದೆ ಸಾಗಲೇಬೇಕು’ ಎಂದು ಅಕ್ಷಯ್​ ಕುಮಾರ್​ ಬರೆದುಕೊಂಡಿದ್ದಾರೆ.

ತಾಯಿ ನಿಧನರಾದ ಸುದ್ದಿಯನ್ನು ಸೆ.8ರಂದು ಬೆಳಗ್ಗೆ ಅಕ್ಷಯ್ ಕುಮಾರ್​ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ತಿಳಿಸಿದ್ದರು. ‘ನನ್ನ ತಾಯಿಯೇ ನನ್ನ ಸರ್ವಸ್ವ. ಇಂದು ಅವರನ್ನು ಕಳೆದುಕೊಂಡು ನಾನು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದರು. ಬೇರೆ ಜಗತ್ತಿನಲ್ಲಿರುವ ನನ್ನ ತಂದೆಯೊಂದಿಗೆ ಅವರು ಸೇರಿಕೊಂಡರು. ನನ್ನ ತಾಯಿ ಗುಣಮುಖರಾಗಲೆಂದು ಬಯಸಿದ ನಿಮ್ಮ ಪ್ರಾರ್ಥನೆಯನ್ನು ನಾನು ಮತ್ತು ನನ್ನ ಕುಟುಂಬದವರು ಹೃದಯಪೂರ್ವಕವಾಗಿ ಗೌರವಿಸುತ್ತೇವೆ. ಓಂ ಶಾಂತಿ’ ಎಂದು ಅವರು ಬರೆದುಕೊಂಡಿದ್ದರು.

ಅಕ್ಷಯ್​ ಕುಮಾರ್​ ಅವರ ಗೆಳೆಯ, ನಿರ್ದೇಶಕ ಆನಂದ್​ ಎಲ್​. ರಾಯ್​ ಅವರ ತಾಯಿ ಕೂಡ ಸೆ.8ರಂದು ನಿಧನರಾದರು. ತಮ್ಮ ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ ಬಳಿಕ ಗೆಳೆಯನ ತಾಯಿಯ ಅಂತ್ಯಕ್ರಿಯೆಯಲ್ಲೂ ಅಕ್ಷಯ್​ ಕುಮಾರ್​ ಪಾಲ್ಗೊಂಡಿದ್ದರು. ಅವರ ಈ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೋಟೋಗಳು ವೈರಲ್​ ಆಗಿವೆ.

ಇದನ್ನೂ ಓದಿ:

Akshay Kumar: ಅಕ್ಷಯ್​ ಕುಮಾರ್​ಗೆ ಮಾತೃ ವಿಯೋಗ; ಅಗಲಿದ ಅಮ್ಮನಿಗೆ ಅಕ್ಷರ ನಮನ ಸಲ್ಲಿಸಿದ ನಟ

ತಾಯಿಯ ನಿಧನದ ಬಳಿಕ ಬೇರೊಬ್ಬರ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡ ಅಕ್ಷಯ್​ ಕುಮಾರ್; ಭಾವುಕರಾದ ಫ್ಯಾನ್ಸ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ