Sourav Ganguly’s biopic: ತೆರೆಮೇಲೆ ‘ದಾದಾಗಿರಿ’: ಯಾರಾಗಲಿದ್ದಾರೆ ಸೌರವ್ ಗಂಗೂಲಿ ಚಿತ್ರದ ನಾಯಕ?

Sourav Ganguly: ದಾದಾ ಅವರ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ಇದೀಗ ಕುತೂಹಲಕಾರಿ. ಏಕೆಂದರೆ ಕ್ರಿಕೆಟ್ ಅಂಗಳದ ಆಕ್ರಮಣಕಾರಿ ನಾಯಕ ಎಂದೇ ಬಿಂಬಿತರಾಗಿದ್ದ ಸೌರವ್ ಗಂಗೂಲಿ ಅವರ ಪಾತ್ರಕ್ಕೆ ನ್ಯಾಯ ಒದಗಿಸುವುದು ಕೂಡ ಅಂದುಕೊಂಡಷ್ಟು ಸುಲಭವಲ್ಲ.

Sourav Ganguly's biopic: ತೆರೆಮೇಲೆ 'ದಾದಾಗಿರಿ': ಯಾರಾಗಲಿದ್ದಾರೆ ಸೌರವ್ ಗಂಗೂಲಿ ಚಿತ್ರದ ನಾಯಕ?
Sourav Ganguly
Follow us
| Updated By: ಝಾಹಿರ್ ಯೂಸುಫ್

Updated on:Sep 09, 2021 | 3:19 PM

ಬಾಲಿವುಡ್​ಗೂ (Bollywood) ಕ್ರಿಕೆಟ್​ಗೂ (Cricket) ಅವಿನಾಭಾವ ಸಂಬಂಧ ಇರೋದು ಗೊತ್ತೇ ಇದೆ. ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ಅನೇಕ ಕ್ರಿಕೆಟ್ ಆಧಾರಿತ ಚಿತ್ರಗಳು ತೆರೆ ಕಂಡಿವೆ. ಅದರಲ್ಲೂ ಸೂಪರ್ ಡೂಪರ್ ಎನಿಸಿಕೊಂಡಿದ್ದು ಟೀಮ್ ಇಂಡಿಯಾ (Team India) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಜೀವನಾಧಾರಿತ ಚಿತ್ರ. 2016 ರಲ್ಲಿ ‘ಎಂಎಸ್ ಧೋನಿ-ಅನ್​ಟೋಲ್ಡ್ ಸ್ಟೋರಿ’ ಹೆಸರಿನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕನ ತೆರೆಮರೆಯ ಕಹಾನಿ ತಿಳಿಸಿದ್ದ ಚಿತ್ರವು ಬಾಕ್ಸಾಫೀಸ್​ನಲ್ಲಿ ಧೂಳೆಬ್ಭಿಸಿತ್ತು. ಇದರ ಬೆನ್ನಲ್ಲೇ ಮತ್ತೋರ್ವ ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಫಿಕ್ಸಿಂಗ್ ಕಹಾನಿ ತಿಳಿಸುವ ‘ಅಜರ್’ (Azhar) ಸಿನಿಮಾ ತೆರೆಕಂಡರೂ ಗಲ್ಲಾಪೆಟ್ಟಿಯನ್ನು ಅಲುಗಾಡಿಸುವಲ್ಲಿ ವಿಫಲವಾಗಿತ್ತು. ಆ ಬಳಿಕ ಭಜರಂಗಿ ಭಾಯಿಜಾನ್ ನಿರ್ದೇಶಕ ಕಬೀರ್ ಖಾನ್ ಕೈಗೆತ್ತಿಕೊಂಡ ’83’ ಸಿನಿಮಾ ಇನ್ನೇನು ತೆರೆ ಕಾಣಲು ಸಿದ್ಧವಾಗಿದೆ. ಈ ಚಿತ್ರವು 1983ರ ವಿಶ್ವಕಪ್ ಗೆಲುವು ಹಾಗೂ ಕಪಿಲ್ ದೇವ್ ಅವರ ತೆರೆ ಹಿಂದಿನ ಚರಿತ್ರೆಯನ್ನು ತಿಳಿಸಲಿದೆ. ಇದಾದ ಬಳಿಕ ಬಾಲಿವುಡ್​ನಲ್ಲಿ ಮತ್ಯಾವ ಕ್ರಿಕೆಟಿಗನ ಬಯೋಪಿಕ್ ಅನೌನ್ಸ್ ಆಗಿರಲಿಲ್ಲ. ಇದೀಗ ಬಾಲಿವುಡ್ ಕ್ರಿಕೆಟ್ ಕಹಾನಿಗಳ ಪಟ್ಟಿಗೆ ಹೊಸ ಸೇರ್ಪಡೆ ಸೌರವ್ ಗಂಗೂಲಿ (Sourav Ganguly).

ಹೌದು, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜೀವನಾಧಾರಿತ ಚಿತ್ರದ ಕುರಿತು ಬಿಗ್ ಅಪ್​ಡೇಟ್ ಹೊರಬಿದ್ದಿದೆ. ಬಾಲಿವುಡ್​ನ ಜನಪ್ರಿಯ ಪ್ರೊಡಕ್ಷನ್ ಹೌಸ್ ಲವ್ ಫಿಲಂಸ್ ಗಂಗೂಲಿ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದಾಗಿ ಘೋಷಿಸಿದೆ. ಈ ಹಿಂದೆ ಮಲಾಂಗ್, ದೇ ದೇ ಪ್ಯಾರ್ ದೇ ಸೇರಿದಂತೆ ಐದಾರು ಸಿನಿಮಾಗಳನ್ನು ನಿರ್ಮಿಸಿರುವ ಲವ್ ಫಿಲಂಸ್, ಈ ಬಾರಿ ಬಯೋಪಿಕ್ ಕೈಗೊತ್ತಿಕೊಂಡಿರುವುದು ವಿಶೇಷ.

ಈ ಬಗ್ಗೆ ಟ್ವೀಟ್ ಮಾಡಿರುವ ಲವ್ ಫಿಲಂಸ್, ದಾದಾ ಸೌರವ್ ಗಂಗೂಲಿ ಅವರ ಬಯೋಪಿಕ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದೇವೆ ಎಂದು ತಿಳಿಸಲು ಥ್ರಿಲ್ ಆಗಿದ್ದೇವೆ. ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಕ್ಕೆ ನಮಗೆ ಗೌರವವಿದೆ. ಉತ್ತಮ ಇನ್ನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದರ ಹೊರತಾಗಿ ನಿರ್ಮಾಣ ಸಂಸ್ಥೆ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ.

ತಮ್ಮ ಬಯೋಪಿಕ್ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ಕ್ರಿಕೆಟ್ ನನ್ನ ಜೀವನ. ಈ ಕ್ರೀಡೆಯು ನನಗೆ ಆತ್ಮವಿಶ್ವಾಸ ನೀಡಿದೆ. ಎಲ್ಲರ ಮುಂದೆ ತಲೆಯೆತ್ತಿ ನಡೆಯುವಂತೆ ಮಾಡಿದೆ. ಇದೀಗ ಅದೇ ಕಥೆಯನ್ನು ಲವ್ ಫಿಲಂಸ್ ಚಿತ್ರವಾಗಿಸುತ್ತಿದೆ. ನನ್ನ ಜೀವನವನ್ನು ದೊಡ್ಡ ಪರದೆಯಲ್ಲಿ ತೋರಿಸುತ್ತಿರುವ ಬಗ್ಗೆ ನಾನು ಕೂಡ ಥ್ರಿಲ್ ಆಗಿದ್ದೇನೆ ಎಂಬಾರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಇದಾಗ್ಯೂ ದಾದಾ ಅವರ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ಇದೀಗ ಕುತೂಹಲಕಾರಿ. ಏಕೆಂದರೆ ಕ್ರಿಕೆಟ್ ಅಂಗಳದ ಆಕ್ರಮಣಕಾರಿ ನಾಯಕ ಎಂದೇ ಬಿಂಬಿತರಾಗಿದ್ದ ಸೌರವ್ ಗಂಗೂಲಿ ಅವರ ಪಾತ್ರಕ್ಕೆ ನ್ಯಾಯ ಒದಗಿಸುವುದು ಕೂಡ ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ಪ್ರತಿಭಾವಂತ ಹಾಗೂ ಜನಪ್ರಿಯ ನಟನನ್ನೇ ಆಯ್ಕೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣ ಸಂಸ್ಥೆ ಮುಂದಿದೆ.

ಕೆಲ ಮೂಲಗಳ ಮಾಹಿತಿ ಪ್ರಕಾರ, ಸೌರವ್ ಗಂಗೂಲಿ ಜೀವನ ಚರಿತ್ರೆಯ ಕಥೆಯನ್ನು ಖ್ಯಾತ ಬಾಲಿವುಡ್ ನಟ ರಣ್​ಬೀರ್ ಕಪೂರ್ ಮುಂದಿಡಲಾಗಿದೆ. ಅಷ್ಟೇ ಅಲ್ಲದೆ ಒಂದು ಸುತ್ತಿನ ಮಾತುಕತೆಯನ್ನು ಕೂಡ ಮುಗಿಸಿದೆ ಎನ್ನಲಾಗಿದೆ. ಅತ್ತ ಈಗಾಗಲೇ ಸಂಜಯ್ ದತ್ ಅವರ ಜೀವನಾಧಾರಿತ ‘ಸಂಜು’ ಚಿತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿರುವ ರಣ್​ಬೀರ್, ದಾದಾ ಪಾತ್ರಕ್ಕೆ ಸೂಕ್ತ ಆಯ್ಕೆ ಎಂಬ ಮಾತುಗಳು ಕೂಡ ಬಾಲಿವುಡ್​ ಅಂಗಳದಲ್ಲಿದೆ. ಹೀಗಾಗಿ ತೆರೆಮೇಲೆ ರಣ್​ಬೀರ್ ಕಪೂರ್ ದಾದಾಗಿರಿ ತೋರಿಸಿದ್ರೆ ಆಶ್ಚರ್ಯಪಡಬೇಕಿಲ್ಲ.

ಇದನ್ನೂ ಓದಿ:  MS Dhoni: 3 ವಿಶ್ವಕಪ್​ ಮೇಲೆ ಬಿಸಿಸಿಐ ಕಣ್ಣು: ಟೀಮ್ ಇಂಡಿಯಾದ ಮುಂದಿನ ಕೋಚ್ ಧೋನಿ?

ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ

ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್

ಇದನ್ನೂ ಓದಿ: IPL 2022: ಐಪಿಎಲ್​ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ

(Sourav Ganguly’s biopic movie to be produced by Luv films)

Published On - 3:13 pm, Thu, 9 September 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ