ನಾನು ವಿರಾಟ್ ಕೊಹ್ಲಿಯನ್ನು ಪ್ರೀತಿಸುತ್ತಿದ್ದೆ’; ರಹಸ್ಯ ಬಿಚ್ಚಿಟ್ಟ ಬಾಲಿವುಡ್​ ನಟಿ

. ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ವಿರಾಟ್​ ಕೊಹ್ಲಿ ಮೇಲಿದ್ದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.  

ನಾನು ವಿರಾಟ್ ಕೊಹ್ಲಿಯನ್ನು ಪ್ರೀತಿಸುತ್ತಿದ್ದೆ’; ರಹಸ್ಯ ಬಿಚ್ಚಿಟ್ಟ ಬಾಲಿವುಡ್​ ನಟಿ
‘ವಿರಾಟ್​ ಮೇಲೆ ನನಗೆ ಹುಚ್ಚು ಪ್ರೀತಿಯಿತ್ತು’; ರಹಸ್ಯ ಬಿಚ್ಚಿಟ್ಟ ಬಾಲಿವುಡ್​ ನಟಿ

ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಕೋಟ್ಯಂತರ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ವಿರಾಟ್​ ಫಿಟ್​ನೆಸ್​ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಇನ್ನು ಅವರ ಫ್ಯಾಷನ್​ ಕೂಡ ಅನೇಕರಿಗೆ ಇಷ್ಟವಾಗುತ್ತದೆ. ವಿರಾಟ್​ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆ ಆದ ನಂತರದಲ್ಲಿ ಬೇಸರ ಮಾಡಿಕೊಂಡವರೆಷ್ಟೋ. ಈಗ ಬಾಲಿವುಡ್​ ನಟಿಯೊಬ್ಬರು ವಿರಾಟ್​ ಅವರ ಮೇಲಿದ್ದ ಹುಚ್ಚು ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ.

ಮರಾಠಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಮೃಣಾಲ್​ ಠಾಕೂರ್​ ಹೀಗೊಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ವಿರಾಟ್​ ಕೊಹ್ಲಿ ಮೇಲಿದ್ದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

‘ಸೂಪರ್​ 30’, ‘ಬಾಟ್ಲಾ ಹೌಸ್​’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ಮೃಣಾಲ್. ಅವರಿಗೆ ಕ್ರಿಕೆಟ್​ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕೊಹ್ಲಿ ಕಂಡರೆ ಅವರಿಗೆ ಅಚ್ಚುಮೆಚ್ಚು. ‘ನನಗೆ ವಿರಾಟ್ ಮೇಲೆ ಹುಚ್ಚು ಪ್ರೀತಿ ಇತ್ತು. ನನ್ನ ಸಹೋದರನ ಜತೆ ಕ್ರಿಕೆಟ್​ ನೋಡೋಕೆ ಸ್ಟೇಡಿಯಮ್​ಗೆ ಹೋಗುತ್ತಿದ್ದೆ’ ಎಂದಿದ್ದಾರೆ.

ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿದೆ. ಶಾಹಿದ್​ ಕಪೂರ್​ ಸಿನಿಮಾದ ಹೀರೋ. ಈ ಚಿತ್ರಕ್ಕೆ ಮೃಣಾಲ್​ ನಾಯಕಿ. ಈ ಬಗ್ಗೆಯೂ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ಸ್ಟೇಡಿಯಮ್​ನಲ್ಲಿ ನಿಂತು ಕ್ರಿಕೆಟ್​ ನೋಡೋದು ಖುಷಿಯ ವಿಚಾರವಾಗಿತ್ತು. ಕ್ರಿಕೆಟ್​ ಎಂದರೆ ಎಲ್ಲಿಲ್ಲದ ಪ್ರೀತಿ ಆಗಿತ್ತು. ಈಗ ಕ್ರಿಕೆಟ್​ನ ಕಥೆ ಹೊಂದಿರುವ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ’ ಎಂದಿದ್ದಾರೆ ಮೃಣಾಲ್.

ಗೌತಮ್​ ಅವರು ‘ಜೆರ್ಸಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದೀಪಾವಳಿ ಪ್ರಯುಕ್ತ ನವೆಂಬರ್​ 5ರಂದು ಸಿನಿಮಾ ತೆರೆಗೆ ಬರುವ ನಿರಿಕ್ಷೆ ಇದೆ. ಇದಲ್ಲದೆ, ತಮಿಳು ಸಿನಿಮಾ ‘ತಾಡಮ್​’ ಹಿಂದಿ ರಿಮೇಕ್​ನಲ್ಲೂ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:  IND vs ENG: ಓಲ್ಡ್ ಟ್ರಾಫರ್ಡ್ ಮೈದಾನವೆಂದರೆ ಕೊಹ್ಲಿ ಬಳಗ ಹೆದರುವುದ್ಯಾಕೆ? ಇಲ್ಲಿ ಗೆಲ್ಲುವುದು ಸುಲಭದ ಮಾತಲ್ಲ!

 ತೆರೆಮೇಲೆ ದಾದಾಗಿರಿ: ಯಾರಾಗಲಿದ್ದಾರೆ ಸೌರವ್ ಗಂಗೂಲಿ ಚಿತ್ರದ ನಾಯಕ?

Click on your DTH Provider to Add TV9 Kannada