ಪತಿಯ ಅಗಲುವಿಕೆಯಿಂದ ಚೇತರಿಸಿಕೊಂಡು ಮತ್ತೆ ಜಿಮ್ ಕಡೆ ಮುಖಮಾಡಿದ ಖ್ಯಾತ ನಟಿ; ಸ್ವಾಗತಿಸಿದ ಅಭಿಮಾನಿಗಳು

ಬಾಲಿವುಡ್ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ನಟಿ ಪತಿಯ ಅಗಲುವಿಕೆಯಿಂದ ಆದ ಆಘಾತದಿಂದ ಚೇತರಿಸಿಕೊಂಡು ಮತ್ತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪತಿಯ ಅಗಲುವಿಕೆಯಿಂದ ಚೇತರಿಸಿಕೊಂಡು ಮತ್ತೆ ಜಿಮ್ ಕಡೆ ಮುಖಮಾಡಿದ ಖ್ಯಾತ ನಟಿ; ಸ್ವಾಗತಿಸಿದ ಅಭಿಮಾನಿಗಳು
ಮಂದಿರಾ ಬೇಡಿ
Follow us
TV9 Web
| Updated By: shivaprasad.hs

Updated on: Sep 07, 2021 | 6:08 PM

ಬಾಲಿವುಡ್​ನ ಈ ಖ್ಯಾತ ನಟಿ ತಮ್ಮ ಫಿಟ್​ನೆಸ್ ಕುರಿತ ಕಾಳಜಿಯಿಂದ ಪ್ರಸಿದ್ಧರು. ಸದಾ ಚಟುವಟಿಕೆಯಿಂದಿರುತ್ತಿದ್ದ ಅವರ ಬದುಕಿಗೆ ವಿಧಿ ನೀಡಿದ ಆಘಾತದಿಂದ ಹಿನ್ನೆಡೆಯಾಗಿತ್ತು. ಆದರೆ, ಈಗ ಮತ್ತೆ ಚೇತರಿಸಕೊಂಡಿರುವ ಅವರು, ಮರಳಿ ತಮ್ಮ ಹವ್ಯಾಸಗಳತ್ತ ಮರಳಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಸಂತಸವಾಗಿದೆ. ಹೌದು. ಬಾಲಿವುಡ್​ನ ಖ್ಯಾತ ನಟಿಯಾದ ಮಂದಿರಾ ಬೇಡಿ ಬಹಳ ಕಾಲದ ನಂತರ ಜಿಮ್ ಪ್ರವೇಶ ಮಾಡಿದ್ದಾರೆ. ಅವರ ಒಲುಮೆಯ ದಾಂಪತ್ಯಕ್ಕೆ ಪತಿಯ ಸಾವು ಬರಸಿಡಿಲಿನಂತೆ ಅಪ್ಪಳಿಸಿತ್ತು. ಜೂನ್ 30ರಂದು 49 ವರ್ಷದ ಅವರ ಪತಿ ರಾಜ್ ಕೌಶಲ್ ಹೃದಯಾಘಾತದಿಂದ ನಿಧನರಾಗಿದ್ದರು. ಈಗ ಮಂದಿರಾ ಆ ಆಘಾತದಿಂದ ಚೇತರಿಸಿಕೊಂಡಿದ್ದು, ನಿಧಾನಕ್ಕೆ ತಮ್ಮ ಚಟುವಟಿಕೆಗಳಲ್ಲಿ ತಲ್ಲೀನರಾಗುತ್ತಿದ್ದಾರೆ.

ಮಂದಿರಾ ಬೇಡಿ ಇದಕ್ಕೂ ಮೊದಲು ಫಿಟ್​ನೆಸ್ ಕುರಿತ ಬಹಳಷ್ಟು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಪತಿಯ ನಿಧನಾನಂತರ ಹೆಚ್ಚಾಗಿ ಪತಿಯ ಕುರಿತು, ಮಕ್ಕಳ ಕುರಿತು ಅಥವಾ ಸ್ಫೂರ್ತಿದಾಯಕ ಮಾತುಗಳ ಕುರಿತು ಇನ್ಸ್ಟಾಗ್ರಾಂನಲ್ಲಿ ಸ್ಟೋರಿ, ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಈಗ ಅವರು ಮರಳಿ ತಮ್ಮ ನೆಚ್ಚಿನ ಹವ್ಯಾಸವಾದ ಫಿಟ್​ನೆಸ್​ ಕಡೆಗೆ ಮುಖಮಾಡಿದ್ದು, ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮಂದಿರಾ ಬೇಡಿ ಹಂಚಿಕೊಂಡ ಪೋಸ್ಟ್:

Mandira Bedi

ಈ ಹಿಂದೆ ಮಂದಿರಾ ಹಂಚಿಕೊಂಡಿದ್ದ ಚಿತ್ರ (ಎಡ), ಮಂದಿರಾ ಮತ್ತೆ ಜಿಮ್​ಗೆ ತೆರಳಲು ಪ್ರಾರಂಭಿಸಿದಾಗ (ಬಲ)

ಮಂದಿರಾ ಬೇಡಿ ಹಾಗೂ ರಾಜ್ ಕೌಶಲ್ 1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2011ರಲ್ಲಿ ಅವರಿಗೆ ಪುತ್ರ ವೀರ್ ಜನಿಸಿದ್ದನು. ಕಳೆದ ವರ್ಷದ ಜುಲೈ 28ರಂದು ತಾರಾ ಎಂಬ ಬಾಲಕಿಯನ್ನು ದಂಪತಿ ದತ್ತು ತೆಗೆದುಕೊಂಡಿದ್ದರು. ಮಕ್ಕಳ ಸುಂದರ ಚಿತ್ರಗಳನ್ನು ಮಂದಿರಾ ಆಗಾಗ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ರಕ್ಷಾ ಬಂಧನದಂದು ಮಕ್ಕಳ ಚಿತ್ರವನ್ನು ಮಂದಿರಾ ಹಂಚಿಕೊಂಡಿದ್ದರು.

ರಕ್ಷಾ ಬಂಧನದಂದು ಮಂದಿರಾ ಹಂಚಿಕೊಂಡ ಪೋಸ್ಟ್:

View this post on Instagram

A post shared by Mandira Bedi (@mandirabedi)

ಪತಿಯ ಜೊತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದ ಮಂದಿರಾ:

View this post on Instagram

A post shared by Mandira Bedi (@mandirabedi)

ಮಂದಿರಾ ಬೇಡಿ ಕಿರುತೆರೆಯಲ್ಲಿ ಪ್ರಸಾರವಾಗಿದ್ದು, ಸಿಐಡಿ, 24  ಮೊದಲಾದ ಧಾರವಾಹಿಗಳಿಂದ ಹಾಗೂ ಡಿಡಿಎಲ್​ಜೆ, ಮೀರಾಬಾಯಿ ನಾಟ್​ಔಟ್, ಸಾಹೋ ಮೊದಲಾದ ಚಿತ್ರಗಳಿಂದ ಜನಮನ್ನಣೆ ಗಳಿಸಿದ್ದಾರೆ.

ಇದನ್ನೂ ಓದಿ:

Virushka: ಓವಲ್ ಟೆಸ್ಟ್​ನಲ್ಲಿ ಭಾರತದ ಭರ್ಜರಿ ಗೆಲುವಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ ಅನುಷ್ಕಾ ಶರ್ಮ

ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?

(Mandira Bedi comes back to gym and shares new story in Instagram)

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ