Virushka: ಓವಲ್ ಟೆಸ್ಟ್‌ನಲ್ಲಿ ಭಾರತದ ಭರ್ಜರಿ ಗೆಲುವಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ ಅನುಷ್ಕಾ ಶರ್ಮ
Anushka Sharma and Virat Kohli: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಗೆಲುವು ದಾಖಲಿಸಿರುವಂತೆಯೇ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿಶೇಷ ಸ್ಟೋರಿಯೊಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ಲಂಡನ್ ನಲ್ಲಿದ್ದಾರೆ. ಪತಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, ಅವರೊಂದಿಗೆ ಅನುಷ್ಕಾ ಕೂಡ ತೆರಳಿದ್ದಾರೆ. ಲಾರ್ಡ್ಸ್ ಟೆಸ್ಟ್ ಜಯದ ಬೆನ್ನಲ್ಲೇ ಅನುಷ್ಕಾ ಹಂಚಿಕೊಂಡ ಪೋಸ್ಟ್ ವೈರಲ್ ಆಗಿತ್ತು. ನಿನ್ನೆ (ಸೆಪ್ಟೆಂಬರ್ 6) ಮುಕ್ತಾಯವಾದ ಓವಲ್ ಟೆಸ್ಟ್ ನಲ್ಲಿ ಭಾರತ 157 ರನ್ಗಳ ಅಂತರದಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಅನುಷ್ಕಾ ಶರ್ಮಾ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪೋಸ್ಟ್ ಹಂಚಿಕೊಂಡಿದ್ದು ವೈರಲ್ ಆಗಿದೆ.
ಓವಲ್ ಟೆಸ್ಟ್ ಅನ್ನು ಅನುಷ್ಕಾ ಮೈದಾನದಲ್ಲೇ ವೀಕ್ಷಿಸಿದ್ದಾರೆ. ಪಂದ್ಯದ ಮೊದಲ ದಿನ ಭಾರತ ತಂಡದ ಇತರ ಆಟಗಾರರ ಪತ್ನಿಯರೊಂದಿಗೆ ಅನುಷ್ಕಾ ಫೊಟೊಗೆ ಪೋಸ್ ನೀಡಿದ್ದು ಸಖತ್ ಸುದ್ದಿಯಾಗಿತ್ತು. ಇದೀಗ ಓವಲ್ ಟೆಸ್ಟ್ ಮುಕ್ತಾಯವಾಗಿದ್ದು, ಭಾರತ ತಂಡ ಭರ್ಜರಿ ಜಯ ದಾಖಲಿಸಿ ಸರಣಿಯಲ್ಲಿ 2-1 ಮುನ್ನಡೆ ದಾಖಲಿಸಿದೆ. ತಂಡದ ಪರಿಶ್ರಮಕ್ಕೆ ಇನ್ಸ್ಟಾಗ್ರಾಂ ಮುಖಾಂತರ ಅನುಷ್ಕಾ ಅಭಿನಂದನೆ ಸಲ್ಲಿಸಿದ್ದಾರೆ.
ವಿರಾಟ್ ಹಂಚಿಕೊಂಡಿದ್ದ ಪೋಸ್ಟ್:
View this post on Instagram
ಭಾರತ ತಂಡ ಗೆದ್ದ ಬೆನ್ನಲ್ಲೇ ತಂಡದ ಕಪ್ತಾನ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ತಂಡದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ‘ಕಷ್ಟದ ಸಂದರ್ಭಗಳು ಶಕ್ತಿಯುತ ವ್ಯಕ್ತಿಗಳನ್ನು ರೂಪಿಸುತ್ತದೆ’ ಎಂದು ಬರೆದುಕೊಂಡಿದ್ದರು. ಅದೇ ಪೋಸ್ಟ್ ಅನ್ನು ಅನುಷ್ಕಾ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ‘ಈ ತಂಡ’ ಎಂದು ಬರೆದು ಭಾರತೀಯ ತಂಡವನ್ನು ಪ್ರತಿಬಿಂಬಿಸುವಂತೆ ನೀಲಿ ಚಿತ್ರದ ಹೃದಯದ ಇಮೋಜಿಯನ್ನು ಹಾಕಿದ್ದು, ಸಂತಸ ಹಂಚಿಕೊಂಡಿದ್ದಾರೆ. ಈ ಮೂಲಕ ಗೆದ್ದ ಇಡೀ ತಂಡಕ್ಕೆ ಮನಃಪೂರ್ವಕವಾಗಿ ಅನುಷ್ಕಾ ಅಭಿನಂದನೆ ಸಲ್ಲಿಸಿದ್ದಾರೆ. ಈ ಚಿತ್ರ ಸದ್ಯ ವೈರಲ್ ಆಗಿದೆ.
ಅನುಷ್ಕಾ ಹಂಚಿಕೊಂಡ ಸ್ಟೋರಿ ಇಲ್ಲಿದೆ:
ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಅನುಷ್ಕಾ ಸಂತಸ ಹಂಚಿಕೊಂಡಿದ್ದರು. ಹಾಗೆಯೇ ವಿರಾಟ್ ಜೊತೆಯಲ್ಲಿ ಅವರು ಸಂತಸದ ಔತಣ ಕೂಟದಲ್ಲಿ ಭಾಗಿಯಾಗಿದ್ದೂ ಕೂಡ ಸಾಕಷ್ಟು ಸುದ್ದಿಯಾಗಿತ್ತು. ಪ್ರಸ್ತುತ ಅನುಷ್ಕಾ ಮಗಳು ವಮಿಕಾಳೊಂದಿಗೆ ಲಂಡನ್ ನಲ್ಲಿದ್ದಾರೆ.
ಚಿತ್ರಗಳ ವಿಷಯಕ್ಕೆ ಬಂದರೆ ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ನಟನೆಯ ‘ಜೀರೋ’ ಚಿತ್ರದಲ್ಲಿ. ಆದರೆ ನಿರ್ಮಾಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಅವರು, ಕಳೆದ ವರ್ಷ ಅಗಲಿದ ನಟ ಇರ್ಫಾನ್ ಖಾನ್ರ ಪುತ್ರ ಬಬಿಲ್ ಕಾಣಿಸಿಕೊಳ್ಳುತ್ತಿರುವ ‘ಕಾಲ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ನಿರ್ಮಾಣದ ವೆಬ್ ಸಿರೀಸ್ ‘ಪಾತಾಳ್ ಲೋಕ್’ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿತ್ತು. ಹಾಗೆಯೇ ನೆಟ್ಫ್ಲಿಕ್ಸ್ನಲ್ಲಿ ತೆರೆಕಂಡ ‘ಬುಲ್ಬುಲ್’ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು.
ಇದನ್ನೂ ಓದಿ:
ಬಾಯ್ಫ್ರೆಂಡ್ ಕಳೆದುಕೊಂಡಿದ್ದ ಸಂಜಯ್ ದತ್ ಪುತ್ರಿಗೆ ಅಭಿಮಾನಿಯ ಪ್ರಪೋಸ್; ಒಪ್ಪಿಕೊಂಡ್ರಾ ತ್ರಿಶಾಲಾ?
(Anushka Sharma congrats team India with blue emoji with a small but special caption)