ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?

TV9 Digital Desk

| Edited By: ಮದನ್​ ಕುಮಾರ್​

Updated on: Sep 07, 2021 | 4:15 PM

ಪ್ರಿಯಕರನ ಸಾವಿನಿಂದ ಎದುರಾದ ಆಘಾತದಿಂದ ಹೊರಬರಲು ತ್ರಿಶಾಲಾ ತುಂಬ ಕಷ್ಟಪಟ್ಟಿದ್ದರು. ಸೋಶಿಯಲ್​ ಮೀಡಿಯಾದಿಂದ ಸ್ವಲ್ಪ ಸಮಯ ದೂರ ಉಳಿದುಕೊಂಡಿದ್ದ ಅವರು ಈಗ ಮತ್ತೆ ಆ್ಯಕ್ಟೀವ್​ ಆಗಿದ್ದಾರೆ.

ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?
ಸಂಜಯ್​ ದತ್​, ತ್ರಿಶಾಲಾ

Follow us on

ನಟ ಸಂಜಯ್​ ದತ್​ ಅವರು ಹಲವು ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಸ್ಟಾರ್​ ಕಿಡ್​ಗಳು ಚಿತ್ರರಂಗಕ್ಕೆ ಎಂಟ್ರಿ ನೀಡುವುದು ಸಹಜ. ಆದರೆ ಸಂಜಯ್ ದತ್​ ಪುತ್ರಿ ತ್ರಿಶಾಲಾ ಅವರಿಗೆ ಈ ಮಾತು ಅನ್ವಯ ಆಗುವುದಿಲ್ಲ. ಅವರು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಣ್ಣದ ಲೋಕಕ್ಕೆ ಬಾರದಿದ್ದರೂ ಕೂಡ ಅವರ ಜನಪ್ರಿಯತೆಗೇನೂ ಕಮ್ಮಿ ಇಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್​ ಹೊಂದಿರುವ ತ್ರಿಶಾಲಾ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಪ್ರಪೋಸ್​ ವಿಚಾರದಿಂದ ಅವರು ಮತ್ತೆ ಸುದ್ದಿ ಆಗಿದ್ದಾರೆ.

ಸಂಜಯ್​ ದತ್​ ಮೊದಲ ಪತ್ನಿ ರಿಚಾ ಶರ್ಮಾ ಅವರ ಪುತ್ರಿಯೇ ತ್ರಿಶಾಲಾ. ಸೈಕೋಥೆರಪಿಸ್ಟ್​ ಆಗಿರುವ ಅವರು ಇನ್​ಸ್ಟಾಗ್ರಾಮ್​ ಮೂಲಕ ಇತ್ತೀಚೆಗೆ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. ಮಾನಸಿಕ ಆರೋಗ್ಯದ ಕುರಿತು ಪ್ರಶ್ನೆಗಳನ್ನು ಆಹ್ವಾನಿಸಿದರು. ಆ ವೇಳೆ ಅವರಿಗೆ ಅಭಿಮಾನಿಯೊಬ್ಬ ನೇರವಾಗಿ ಪ್ರಪೋಸ್​ ಮಾಡಿದ್ದಾನೆ. ‘ನೀವು ಯಾವಾಗಲೂ ನನ್ನ ಪ್ರಶ್ನೆಗೆ ಉತ್ತರ ನೀಡಿಲ್ಲ. ನನ್ನನ್ನು ಮದುವೆ ಆಗುತ್ತೀರಾ?’ ಎಂದು ಕೇಳಿದ ಆತನಿಗೆ ತ್ರಿಶಾಲಾ ಪ್ರತಿಕ್ರಿಯೆ ನೀಡಿದ್ದಾರೆ.

‘ಇದಕ್ಕೆ ನಾನು ಎಂದಿಗೂ ಉತ್ತರಿಸುವುದಿಲ್ಲ. ಯಾಕೆಂದರೆ ಅದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದಲ್ಲ. ಈಗಂತೂ ಹೇಳದೇ ಕೇಳದೇ ಬ್ರೇಕಪ್​ಗಳಾಗುತ್ತಿವೆ. ಮೊದಲ ಡೇಟಿಂಗ್ ಬಳಿಕ ಹುಡುಗರು ಮಾತುಕತೆಯನ್ನೇ ಕಡಿಮೆ ಮಾಡುತ್ತಾರೆ. ಆದ್ದರಿಂದ ನಿಮ್ಮನ್ನು ಯಾಕೆ ಮದುವೆ ಆಗಬಾರದು? ಈಗ ಖುಷಿ ಆಯಿತೇ?​’ ಎಂದು ತ್ರಿಶಾಲಾ ಉತ್ತರ ನೀಡಿದ್ದಾರೆ.

ಅಂದಹಾಗೆ, ತ್ರಿಶಾಲಾ ಈ ಹಿಂದೆ ಯುವಕನೊಬ್ಬನ ಜೊತೆ ಡೇಟಿಂಗ್​ ಮಾಡುತ್ತಿದ್ದರು. 2019ರ ಜುಲೈ ತಿಂಗಳಲ್ಲಿ ಆತ ನಿಧನ ಹೊಂದಿರುವ ಸುದ್ದಿ ಕೇಳಿಬಂತು. ಅದಕ್ಕೂ ಮೊದಲೇ ಅವರ ಬ್ರೇಕಪ್​ ಆಗಿತ್ತು ಎಂಬ ಮಾಹಿತಿ ಇದೆ. ಪ್ರಿಯಕರನ ಸಾವಿನಿಂದ ಎದುರಾದ ಆಘಾತದಿಂದ ಹೊರಬರಲು ತ್ರಿಶಾಲಾ ತುಂಬ ಕಷ್ಟಪಟ್ಟಿದ್ದರು. ಆ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ಆಗಾಗ ಹೇಳಿಕೊಂಡಿದ್ದಾರೆ. ಆ ಎಲ್ಲ ಅನುಭವಗಳ ಆಧಾರದ ಮೇಲೆ ಅವರು ಪ್ರೀತಿ, ಬ್ರೇಕಪ್​, ಪ್ರಪೋಸ್​ ಮುಂತಾದ ವಿಚಾರಗಳಿಗೆ ತಮ್ಮದೇ ರೀತಿಯಲ್ಲಿ ಅರ್ಥ ಕಂಡುಕೊಂಡಿದ್ದಾರೆ. ಬಾಯ್​ಫ್ರೆಂಡ್​ ನಿಧನದ ಬಳಿಕ ಸೋಶಿಯಲ್​ ಮೀಡಿಯಾದಿಂದ ಸ್ವಲ್ಪ ಸಮಯ ದೂರ ಉಳಿದುಕೊಂಡಿದ್ದ ಅವರು ಈಗ ಮತ್ತೆ ಆ್ಯಕ್ಟೀವ್​ ಆಗಿದ್ದಾರೆ.

ಇದನ್ನೂ ಓದಿ:

ಸಂಜಯ್​ ದತ್​ ಮಗಳು ತ್ರಿಶಲಾ ಬಾಯ್​ ಫ್ರೆಂಡ್​ ಸತ್ತಿದ್ದು ಹೇಗೆ? ಸ್ಟಾರ್ ಪುತ್ರಿಗೆ ಕಿರಿಕಿರಿ ತಂದ ಪ್ರಶ್ನೆ!

ಸಂಜಯ್​ ದತ್ ಬದುಕಿನ 308 ಪ್ರೇಯಸಿಯರು ಮತ್ತು ಮೂವರು ಪತ್ನಿಯರ ಬಗ್ಗೆ ಅಚ್ಚರಿಯ ಮಾಹಿತಿ

ತಾಜಾ ಸುದ್ದಿ

Most Read Stories

Click on your DTH Provider to Add TV9 Kannada