AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಪರವಾಗಿ ನಿಲ್ಲುವ ಸಂಗಾತಿ ಬೇಕು ಆದರೆ ರಾಕೇಶ್ ಅಂತಹ ವ್ಯಕ್ತಿ ಅಲ್ಲ ಎಂದು ಹೇಳಿ ಶಾಕ್ ಕೊಟ್ಟ ಶಮಿತಾ ಶೆಟ್ಟಿ

ಬಿಗ್​ಬಾಸ್ ಒಟಿಟಿಯಲ್ಲಿ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್ ಸ್ನೇಹ ಎಲ್ಲರ ಗಮನ ಸೆಳೆದಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ಶಮಿತಾ- ರಾಕೇಶ್ ನಡುವೆ ಅಸಮಾಧಾನ ಮೂಡಿಸಿವೆ.

ತನ್ನ ಪರವಾಗಿ ನಿಲ್ಲುವ ಸಂಗಾತಿ ಬೇಕು ಆದರೆ ರಾಕೇಶ್ ಅಂತಹ ವ್ಯಕ್ತಿ ಅಲ್ಲ ಎಂದು ಹೇಳಿ ಶಾಕ್ ಕೊಟ್ಟ ಶಮಿತಾ ಶೆಟ್ಟಿ
ಶಮಿತಾ ಶೆಟ್ಟಿ, ರಾಕೇಶ್ ಬಾಪಟ್
TV9 Web
| Updated By: shivaprasad.hs|

Updated on: Sep 07, 2021 | 3:30 PM

Share

ಬಿಗ್​ಬಾಸ್ ಒಟಿಟಿಯಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಕಾರ್ಯಕ್ರಮದಲ್ಲಿ ಬಾಲಿವುಡ್​ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ವೀಕ್ಷಕರ ಕೇಂದ್ರ ಬಿಂದುಗಳಲ್ಲೊಬ್ಬರಾಗಿದ್ದಾರೆ. ಇತ್ತೀಚೆಗೆ ಅವರು ನಟ ರಾಕೇಶ್ ಬಾಪಟ್ ಜೊತೆಗೆ ಆಪ್ತರಾಗಿ ಗುರುತಿಸಿಕೊಂಡಿದ್ದರು. ಇದು ಎಲ್ಲರ ಕುತೂಹಲವನ್ನು ಕೆರಳಿಸಿತ್ತು. ಆದರೆ, ಈಗ ಅವರು ರಾಕೇಶ್ ಬಾಪಟ್ ವಿರುದ್ಧ ಅಸಮಾಧಾನವನ್ನು ಹೊರಹಾಕಿ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲದೇ ಅದನ್ನು ರಾಕೇಶ್ ಎದುರು ನೇರವಾಗಿ ಹೇಳಿದ್ದಾರೆ ಕೂಡ.

ಶಮಿತಾ ಹಾಗೂ ರಾಕೇಶ್ ಆಪ್ತರಾಗಿದ್ದನ್ನು ನೋಡಿ ಬಿಗ್​ಬಾಸ್ ಮನೆಯೊಳಗೇ ಹಲವು ಮಾತುಗಳು ಹರಿದಾಡಿದ್ದವು. ನಿಶಾಂತ್ ಭಟ್ ಕೂಡ ಇದಕ್ಕೆ ದನಿ ಸೇರಿಸಿದ್ದರು. ಶಮಿತಾ ರಾಕೇಶ್​ರನ್ನು ಬಳಸಿಕೊಳ್ಳುತ್ತಿದ್ದಾಳೆ ಎಂದು ಅವರು ಕಿಡಿಕಾರಿದ್ದರು. ಈ ಕುರಿತು ರಾಕೇಶ್ ವಿರೋಧ ವ್ಯಕ್ತಪಡಿಸದೇ ಸುಮ್ಮನೆ ಉಳಿದಿದ್ದು ಶಮಿತಾರನ್ನು ಕೆರಳಿಸಿದೆ. ಆಗ ಶಮಿತಾ ಹಾಗೂ ನಿಶಾಂತ್ ನಡುವೆ ವಾಗ್ಯುದ್ಧ ನಡೆದಿದೆ. ಆದರೆ ಈ ಸಂದರ್ಭದಲ್ಲೂ ರಾಕೇಶ್ ಶಮಿತಾ ಪರವಾಗಿ ನಿಲ್ಲಲಿಲ್ಲ. ಇದು ಶಮಿತಾರ ಅಸಮಾಧಾನಕ್ಕೆ ಕಾರಣವಾಗಿದ್ದು, ನೇಹಾ ಭಾಸಿನ್ ಬಳಿ ಹೇಳಿಕೊಂಡಿದ್ದಾರೆ.

‘‘ನನಗೆ ಸಾಕಾಗಿದೆ. ಪ್ರತೀ ಬಾರಿ ರಾಕೇಶ್ ಪರ ಮಾತನಾಡಲು ನನಗೆ ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಎಲ್ಲರೂ ನಾನು ಮತ್ತೊಬ್ಬರ ವಿರುದ್ಧ ಮಾತನಾಡುತ್ತೇನೆ ಎನ್ನುತ್ತಾರೆ. ಆದರೆ ನನಗೆ ನನ್ನನ್ನೇ ಸಮರ್ಥಿಸಿಕೊಂಡು ಸಾಕಾಗಿದೆ’’ ಎಂದಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಅವರು ತನಗೆ ಎಂತಹ ಸಾಂಗತ್ಯ ಬೇಕು ಎಂಬುದನ್ನೂ ಮಾತನಾಡಿದ್ದಾರೆ. ‘‘ರಾಕೇಶ್ ಸುಮ್ಮನುಳಿದಾಗ ಎಲ್ಲರೂ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ನನಗೆ ಸಹಕಾರ ನೀಡುವ, ನನ್ನ ಪರವಾಗಿ ನಿಲ್ಲುವ ವ್ಯಕ್ತಿಯೊಬ್ಬ ಬೇಕು. ಜೀವನದಲ್ಲಿ ಇದುವರೆಗೆ ನನ್ನ ಜೊತೆ ಇದ್ದವರಾರೂ ನನ್ನ ಪರವಾಗಿ ನಿಲ್ಲಲೇ ಇಲ್ಲ. ಇನ್ನು ನನಗೊಬ್ಬಳಿಗೇ ಕಾದಾಡಲು ಆಗುವುದಿಲ್ಲ.’’ ಎಂದಿದ್ದಾರೆ ಶಮಿತಾ ಶೆಟ್ಟಿ.

ನಂತರ ಈ ಕುರಿತು ರಾಕೇಶ್ ಬಳಿಯಲ್ಲೇ ನೇರವಾಗಿ ಶಮಿತಾ ಮಾತನಾಡಿದ್ದಾರೆ. ‘‘ರಾಕೇಶ್ ನನಗಿನ್ನು ಸಾಧ್ಯವಿಲ್ಲ. ನೀವು ಮಾತನಾಡದೇ ಸುಮ್ಮನುಳಿಯುವುದು ನನಗೆ ಹಿಂಸೆ ನೀಡುತ್ತಿದೆ. ನನ್ನನ್ನು ಅಷ್ಟೆಲ್ಲಾ ಆಡಿಕೊಂಡರೂ ನೀವು ಪರವಾಗಿ ಬರಲಿಲ್ಲ. ಮೊದಲಿಗೆ ನೀವು ಸ್ಲೋ ಲರ್ನರ್ ಎಂದು ಹೇಳಿಕೊಂಡಿದ್ದೀರಿ. ಆದರೆ ನೀವಿನ್ನೂ ಮಾತನಾಡಲು ಕಲಿತೇ ಇಲ್ಲ’’ ಎಂದು ಶಮಿತಾ ಅಸಮಾಧಾನ ತೋಡಿಕೊಂಡಿದ್ದಾರೆ. ಹಾಗೆಯೇ ರಾಕೇಶ್ ಜೊತೆ ಮಾತನಾಡುತ್ತಾ ಶಮಿತಾ ಇನ್ನು ಮುಂದೆ ವೈಯಕ್ತಿಕವಾಗಿ ಸಮಸ್ಯೆಗಳನ್ನು ನಿಭಾಯಿಸುವುದು ಒಳ್ಳೆಯದು ಎಂದಿದ್ದರು. ಆದ್ದರಿಂದ ಈರ್ವರ ಸ್ನೇಹ ಸಂಬಂಧ ಮುರಿಯಿತೇ ಎಂಬ ಅನುಮಾನ ಮೂಡಿತ್ತು.

ಆದರೆ, ನಂತರದ ಟಾಸ್ಕ್​ಗಳಲ್ಲಿ ಈರ್ವರು ಜೊತೆಯಾಗಿಯೇ ಆಡಿದ್ದು, ಸ್ನೇಹವನ್ನು ಮುಂದುವರೆಸಿ ಶೋನಲ್ಲಿ ಗಟ್ಟಿಯಾಗಿ ಉಳಿಯುವ ನಿರ್ಧಾರ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸಂತಸವಾಗಿದೆ. ಶೋನಲ್ಲಿ ಕೆಲ ದಿನಗಳ ಮೊದಲೊಮ್ಮೆ ರಾಕೇಶ್ ಕುರಿತು ಶಮಿತಾ ಮಾತನಾಡುತ್ತಾ, ‘‘ಅವನು ಒಳ್ಳೆಯವನು. ಆದರೆ, ಕನ್ಫ್ಯೂಸ್ ಆಗಿರುತ್ತಾನೆ. ನನಗೆ ಕ್ಲಾರಿಟಿ ಇರುವುದರಿಂದ ಅವನ ನಡವಳಿಕೆ ಒಮ್ಮೊಮ್ಮೆ ಬೇಸರ ತರಿಸುತ್ತದೆ. ನಾನು ನಿರ್ಧಾರವನ್ನು ಒಮ್ಮೆ ತೆಗೆದುಕೊಂಡರೆ ಏನೇ ಆದರೂ ಅದರ ಪರವಾಗಿರುತ್ತೇನೆ’’ ಎಂದಿದ್ದರು. ಈ ಮಾತುಗಳಿಂದಾಗಿ ರಾಕೇಶ್ ಹಾಗೂ ಶಮಿತಾ ಸ್ನೇಹದ ಕುರಿತು ವೀಕ್ಷಕರಿಗೆ ಆಸಕ್ತಿ ಮೂಡಿಸಿತ್ತು. ಅಲ್ಲದೇ ಈಗಾಗಲೇ ಹಲವು ಬಾರಿ ಶಮಿತಾ ರಾಕೇಶ್ ಕೈಯಿಂದ ಕಿಸ್ ಕೂಡ ಮಾಡಿಸಿಕೊಂಡಿದ್ದರು. ಇದೂ ಕೂಡ ಈರ್ವರ ಸಂಬಂಧದ ಗಾಸಿಪ್ ಮೂಡಲು ಕಾರಣವಾಗಿತ್ತು.

ಇದನ್ನೂ ಓದಿ:

‘ಕೆಬಿಸಿ 13’ ಶೂಟಿಂಗ್​ನಲ್ಲಿ ಭಾಗವಹಿಸಿದ್ದ ಫರ್ಹಾ ಖಾನ್​ಗೆ ಕೊರೊನಾ ಪಾಸಿಟಿವ್; ದೀಪಿಕಾ, ಅಮಿತಾಭ್​ ಟೆಸ್ಟ್ ರಿಸಲ್ಟ್ ಏನು?

Rajat Bedi: ಬಾಲಿವುಡ್​ ನಟ ರಜತ್​ ಬೇಡಿ ಕಾರು ಡಿಕ್ಕಿ; ಚಿಂತಾಜನಕ ಸ್ಥಿತಿಯಲ್ಲಿ ಪಾದಚಾರಿ: ಕೇಸ್​ ದಾಖಲು

(Shamitha Shetty wants a man who supports her and she says Rakesh does not support her and remain silent)