‘ಕೆಬಿಸಿ 13’ ಶೂಟಿಂಗ್​ನಲ್ಲಿ ಭಾಗವಹಿಸಿದ್ದ ಫರ್ಹಾ ಖಾನ್​ಗೆ ಕೊರೊನಾ ಪಾಸಿಟಿವ್; ದೀಪಿಕಾ, ಅಮಿತಾಭ್​ ಟೆಸ್ಟ್ ರಿಸಲ್ಟ್ ಏನು?

Amitabh Bachchan: ಬಾಲಿವುಡ್​ನ ಹಿಟ್ ನಿರ್ದೇಶಕಿ, ನಿರ್ಮಾಪಕಿ ಫರ್ಹಾ ಖಾನ್ ಕೊರೊನಾ ಪಾಸಿಟಿವ್ ಆದ ಬೆನ್ನಲ್ಲೇ ಕೆಬಿಸಿ 13ರ ತಂಡಕ್ಕೆ ಆತಂಕ ಉಂಟಾಗಿತ್ತು. ಆದರೆ ಈಗ ಎಲ್ಲರಿಗೂ ಮತ್ತೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಫಲಿತಾಂಶ ಬಂದಿದೆ.

‘ಕೆಬಿಸಿ 13’ ಶೂಟಿಂಗ್​ನಲ್ಲಿ ಭಾಗವಹಿಸಿದ್ದ ಫರ್ಹಾ ಖಾನ್​ಗೆ ಕೊರೊನಾ ಪಾಸಿಟಿವ್; ದೀಪಿಕಾ, ಅಮಿತಾಭ್​ ಟೆಸ್ಟ್ ರಿಸಲ್ಟ್ ಏನು?
ಕೆಬಿಸಿ 13ರಲ್ಲಿ ಅಮಿತಾಭ್, ದೀಪಿಕಾ ಹಾಗೂ ಫರ್ಹಾ ಖಾನ್
TV9kannada Web Team

| Edited By: shivaprasad.hs

Sep 07, 2021 | 2:19 PM

ಕೌನ್ ಬನೇಗಾ ಕರೋಡ್​ಪತಿ 13ರ ಸೀಸನ್ ಭರ್ಜರಿಯಾಗಿ ಮೂಡಿಬರುತ್ತಿದೆ. ಕೊರೊನಾ ನಂತರ ರಿಯಾಲಿಟಿ ಶೋಗಳ ಚಿತ್ರೀಕರಣ ಆರಂಭವಾಗಿದ್ದು, ಹಲವು ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಲೇ ಚಿತ್ರೀಕರಣ ನಡೆಸಲಾಗುತ್ತಿದೆ. ಆದರೂ ಕೆಬಿಸಿಯಲ್ಲಿ ಭಾಗವಹಿಸಿದ್ದ ಖ್ಯಾತ ಸೆಲೆಬ್ರಿಟಿಯೊಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿಗೆ ಸೆಲೆಬ್ರಿಟಿ ಸಂಚಿಕೆಯಲ್ಲಿ ಭಾಗವಹಿಸಿದ್ದ ನಿರ್ದೇಶಕಿ ಫರ್ಹಾ ಖಾನ್ ಅವರಿಗೆ ಕೊರೊನಾ ಟೆಸ್ಟ್​ನಲ್ಲಿ ಪಾಸಿಟಿವ್ ವರದಿ ಬಂದಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈ ಕುರಿತು ಫರ್ಹಾನ್ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಸಮಾಧಾನದ ಸುದ್ದಿಯನ್ನು ನೀಡಿದ್ದಾರೆ.

ಈ ಕುರಿತು ಫರ್ಹಾ ಖಾನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘ಲೆಜೆಂಡ್ (ಅಮಿತಾಭ್) ಕೈಯಿಂದ ಸೆಲ್ಫಿಯನ್ನು ತೆಗೆದುಕೊಳ್ಳುವ ಸೌಭಾಗ್ಯ ಈ ಅದ್ಭುತ ದಿನದಂದು ಸಿಕ್ಕಿದೆ. ಶಿಕ್ಷಕರ ದಿನಾಚರಣೆಯ ವಿಶೇಷದಂದು ನಡೆಸಿದ ಸಂಚಿಕೆಯಲ್ಲಿ ಜೊತೆಯಲ್ಲಿ ಭಾಗವಹಿಸಿದ ದೀಪಿಕಾಗೆ ಧನ್ಯವಾದಗಳು.’’ ಎಂದು ಬರೆದುಕೊಂಡಿರುವ ಅವರು ಅದಕ್ಕೆ ಅಡಿ ಟಿಪ್ಪಣಿಯನ್ನೂ ಸೇರಿಸಿದ್ದಾರೆ. ‘ಈ ಚಿತ್ರವನ್ನು ನನಗೆ ಕೊರೊನಾ ಪಾಸಿಟಿವ್ ಬರುವ ಬಹಳ ದಿನಗಳ ಮೊದಲು ತೆಗೆಯಲಾಗಿತ್ತು. ಸೆಟ್​ನಲ್ಲಿ ಭಾಗವಹಿಸಿದ್ದ ಎಲ್ಲರ ಪರೀಕ್ಷೆಯನ್ನೂ ಈಗ ನಡೆಸಲಾಗಿದ್ದು, ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್​ಬಿ, ದೀಪಿಕಾ ಸೇರಿದಂತೆ ಕೆಬಿಸಿಯ ಹಲವರು ಸೋಂಕಿನ ಅಪಾಯದಿಂದ ಪಾರಾಗಿದ್ದಾರೆ.

ಫರ್ಹಾನ್ ಹಂಚಿಕೊಂಡಿರುವ ಪೋಸ್ಟ್:

ಕೌನ್ ಬನೇಗಾ ಕರೋಡ್​ಪತಿಯಲ್ಲಿ ಪ್ರತಿ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ವಿಶೇಷ ಸಂಚಿಕೆ ಮೂಡಿಬರುತ್ತದೆ. ಅದರಲ್ಲಿ ಖ್ಯಾತ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ. ಅವರಿಗೆ ಸ್ಪರ್ಧೆಯ ನಿಯಮಗಳು ತುಸು ಭಿನ್ನವಾಗಿರುತ್ತವೆ. ಅಂದರೆ, ನಿರ್ದಿಷ್ಟ ಸಮಯಾವಕಾಶದಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರಿಸುತ್ತಾರೋ ಅಷ್ಟು ಮೊತ್ತವನ್ನು ಅವರು ಪಡೆಯುತ್ತಾರೆ. ಕೆಬಿಸಿಯ 13ನೇ ಸೀಸನ್​ನ ಪ್ರಥಮ ಸೆಲೆಬ್ರಿಟಿ ಸಂಚಿಕೆಯಲ್ಲಿ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಅವರು 25 ಲಕ್ಷ ರೂಗಳನ್ನು ಗಳಿಸಿದ್ದರು. ಅದನ್ನು ತಮ್ಮ ಚಾರಿಟಿಗೆ ದಾನ ಮಾಡುವುದಾಗಿ ಈರ್ವರೂ ತಿಳಿಸಿದ್ದರು. ದೀಪಿಕಾ ಹಾಗೂ ಫರ್ಹಾ ಭಾಗವಹಿಸಿದ ಈ ಸಂಚಿಕೆ ಶುಕ್ರವಾರ (ಸೆಪ್ಟೆಂಬರ್ 10) ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ:

KBC 13: ರಣವೀರ್ ನೀಡಿದ್ದ ಮಾತನ್ನು ನಡೆಸಿಕೊಟ್ಟಿಲ್ಲ ಎಂದು ಅಮಿತಾಭ್ ಬಳಿ ದೂರಿದ ದೀಪಿಕಾ; ಅಷ್ಟಕ್ಕೂ ಕಂಪ್ಲೇಂಟ್ ಏನು?

Rajat Bedi: ಬಾಲಿವುಡ್​ ನಟ ರಜತ್​ ಬೇಡಿ ಕಾರು ಡಿಕ್ಕಿ; ಚಿಂತಾಜನಕ ಸ್ಥಿತಿಯಲ್ಲಿ ಪಾದಚಾರಿ: ಕೇಸ್​ ದಾಖಲು

Mammootty Birthday: 70ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಾಲಿವುಡ್ ಸ್ಟಾರ್ ಮಮ್ಮುಟ್ಟಿ; ಕನ್ನಡದಲ್ಲೂ ಮಿಂಚಿದ್ದರು ಈ ನಟ!

(Farha Khan tests positive in Covid tests and she reveals no one tests positive from KBC sets)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada