ಆರಾಧ್ಯಾಳ ಆನ್​ಲೈನ್ ತರಗತಿಗಳಿಗೆ ಸಹಾಯ ಮಾಡುವವರು ಯಾರು?; ಅಮಿತಾಭ್ ಹಂಚಿಕೊಂಡರು ಅಚ್ಚರಿಯ ಮಾಹಿತಿ

Amitabh Bachchan: ಕೆಬಿಸಿ 13ರ ಇತ್ತೀಚಿನ ಸಂಚಿಕೆಯೊಂದರಲ್ಲಿ ಅಮಿತಾಭ್ ತಮ್ಮ ಮೊಮ್ಮಗಳಾದ ಆರಾಧ್ಯಾಳ ಆನ್​ಲೈನ್ ತರಗತಿಯ ಕುರಿತು ಮಾತನಾಡಿದ್ದಾರೆ. ಈ ಕುರಿತು ಅವರು ಹಂಚಿಕೊಂಡಿರುವ ಅಚ್ಚರಿಯ ಮಾಹಿತಿಗಳು ಇಲ್ಲಿವೆ.

ಆರಾಧ್ಯಾಳ ಆನ್​ಲೈನ್ ತರಗತಿಗಳಿಗೆ ಸಹಾಯ ಮಾಡುವವರು ಯಾರು?; ಅಮಿತಾಭ್ ಹಂಚಿಕೊಂಡರು ಅಚ್ಚರಿಯ ಮಾಹಿತಿ
ಐಶ್ವರ್ಯಾ, ಅಭಿಷೇಕ್, ಆರಾಧ್ಯಾ (ಎಡ ಚಿತ್ರ), ಅಮಿತಾಭ್, ಆರಾಧ್ಯಾ (ಬಲ ಚಿತ್ರ)
Follow us
TV9 Web
| Updated By: shivaprasad.hs

Updated on: Sep 07, 2021 | 10:25 AM

KBC 13: ಕೌನ್ ಬನೇಗಾ ಕರೋಡ್​ಪತಿಯ 13ನೇ ಸೀಸನ್​ ಭರ್ಜರಿಯಾಗಿ ಮೂಡಿಬರುತ್ತಿದ್ದು, ವೀಕ್ಷಕರಿಗೆ ಇಷ್ಟವಾಗುತ್ತಿದೆ. ಇದರಲ್ಲಿ ಭಾಗಿಯಾಗುವ ಸೆಲೆಬ್ರಿಟಿಗಳು, ಸಾಮಾನ್ಯರು ಹಲವು ಕುತೂಹಲಕರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಮಾತನಾಡುವಾಗ ನಿರೂಪಕ ಅಮಿತಾಭ್ ಬಚ್ಚನ್ ಕೂಡ ಹಲವು ಅಚ್ಚರಿಯ ಸಂಗತಿಗಳನ್ನು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಸಂಚಿಕೆಯಲ್ಲಿ ಅಮಿತಾಭ್, ಸ್ಪರ್ಧಿಯೊಂದಿಗೆ ಆನ್​ಲೈನ್ ತರಗತಿಗಳ ಕುರಿತಾಗಿ ಮಾತನಾಡುತ್ತಾ, ಅವರ ಮೊಮ್ಮಗಳು ಆರಾಧ್ಯ ಬಚ್ಚನ್​ಗೆ ಆನ್​ಲೈನ್ ಕ್ಲಾಸ್​ಗೆ ಯಾರು ಸಹಾಯ ಮಾಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ.

ಕೆಬಿಸಿ 13ರ ಇತ್ತೀಚಿನ ಸಂಚಿಕೆಯಲ್ಲಿ ಗ್ವಾಲಿಯರ್​ನ ಶಾಲೆಯೊಂದರ ಮುಖ್ಯೋಪಾಧ್ಯಾಯೆಯಾದ ಕಲ್ಪನಾ ಸಿಂಗ್ ಭಾಗವಹಿಸಿದ್ದರು. ಅವರೊಂದಿಗೆ ಮಾತನಾಡುವಾಗ ಅಮಿತಾಭ್, ಕೊರೊನಾ ಕಾಲಘಟ್ಟದ ನಂತರ ರೂಪುಗೊಂಡಿರುವ ಹೊಸ ಪದ್ಧತಿಯಾದ ಶಾಲಾ ಮಕ್ಕಳ ಆನ್​ಲೈನ್ ತರಗತಿಗಳ ಕುರಿತು ಚರ್ಚಿಸಿದ್ದಾರೆ. ಆ ಸಂದರ್ಭದಲ್ಲಿ ಅಮಿತಾಭ್ ತಮ್ಮ ಮನೆಯ ಅನುಭವವನ್ನು ಹೇಳಿಕೊಂಡಿದ್ದಾರೆ.

ಆರಾಧ್ಯಾಳ ಆನ್​ಲೈನ್ ತರಗತಿಗೆ ಪೋಷಕರಾದ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಸಹಾಯ ಮಾಡುತ್ತಾರಂತೆ. ‘‘ನಮ್ಮ ಮನೆಯಲ್ಲೂ ಆನ್​ಲೈನ್ ತರಗತಿಗೆ ಹಾಜರಾಗುವ ಪುಟಾಣಿಯೊಬ್ಬಳಿದ್ದಾಳೆ. ಇಡೀ ದಿನವೂ ಅವಳು ಕ್ಲಾಸ್​ಗಳಲ್ಲಿ ಬ್ಯುಸಿಯಾಗಿರುತ್ತಾಳೆ. ಪೋಷಕರು ಅವಳಿಗೆ ಕಂಪ್ಯೂಟರ್ ಬಳಸುವ ಕುರಿತು, ಪ್ರೆಸೆಂಟೇಶನ್​ಗಳನ್ನು ಮಾಡುವುದರ ಕುರಿತು ಹೇಳಿಕೊಡುತ್ತಾರೆ’’ ಎಂದಿದ್ದಾರೆ ಅಮಿತಾಭ್.

‘‘ಕೆಲವೊಮ್ಮೆ ಅವಳು ಕಂಪ್ಯೂಟರ್ ಮುಂದೆ ಕುಳಿತು ಯೋಗ ಕ್ಲಾಸ್​ನಲ್ಲಿ ಭಾಗಿಯಾಗಿರುವುದನ್ನೂ ನೋಡಿ ಅಚ್ಚರಿಗೊಂಡಿದ್ದೇನೆ. ನಾನು ಕೂಡ ಆರಾಧ್ಯಾಳ ಕೆಲವು ತರಗತಿಗಳನ್ನು ಕೇಳಿದ್ದು, ಅವುಗಳ ವಾತಾವರಣ ಉತ್ತಮವಾಗಿದೆ’‘ ಎಂದಿದ್ದಾರೆ ಬಾಲಿವುಡ್​ ಬಿಗ್​ಬಿ. 2019ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಆರಾಧ್ಯಾ ಕೆಬಿಸಿ ಶೋವನ್ನು ವೀಕ್ಷಿಸುವುದರ ಕುರಿತು ಅಮಿತಾಭ್ ಮಾತನಾಡಿದ್ದರು. ‘‘ಪತ್ನಿ ಜಯಾ ಬಚ್ಚನ್ ಒಂದು ದಿನವೂ ಶೋ ತಪ್ಪಿಸುವುದಿಲ್ಲ. ಐಶ್ವರ್ಯಾ ಹಾಗೂ ಶ್ವೇತಾ(ಅಮಿತಾಭ್ ಮಗಳು)- ಈರ್ವರೂ ಪೈಪೋಟಿಯಲ್ಲಿ ಉತ್ತರಗಳನ್ನು ಹೇಳುತ್ತಾ ಶೋವನ್ನು ಎಂಜಾಯ್ ಮಾಡುತ್ತಾರೆ. ಪುಟಾಣಿ ಆರಾಧ್ಯಾ ಕೂಡ ಕೆಬಿಸಿಯನ್ನು ಇಷ್ಟಪಟ್ಟು ನೋಡುತ್ತಾಳೆ’’ ಎಂದಿದ್ದರು ಅಮಿತಾಭ್.

ಕೌನ್ ಬನೇಗಾ ಕರೋಡ್​ಪತಿ ಚೆನ್ನಾಗಿ ಮೂಡಿಬರುತ್ತಿದ್ದು, ಕಳೆದ ವಾರದ ಸೆಲೆಬ್ರಿಟಿ ಶೋನಲ್ಲಿ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಪ್ರತೀ ಶುಕ್ರವಾರ ಮೂಡಿಬರುವ ಸೆಲೆಬ್ರಿಟಿ ಸಂಚಿಕೆಯ ಕಾರ್ಯಕ್ರಮದಲ್ಲಿ ಈ ವಾರ, ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ಫರ್ಹಾ ಖಾನ್ ಭಾಗವಹಿಸಿದ ಸಂಚಿಕೆ ಪ್ರಸಾರವಾಗಲಿದೆ. ಈಗಾಗಲೇ ಇದರ ಪ್ರೊಮೊಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿವೆ.

ಇದನ್ನೂ ಓದಿ:

ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ

‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​

(Amitabh Bachchan reveals who helps Aradhya with her online classes)