ಅವಮಾನ ಮಾಡಿದವರಿಗೆ ಕಿಚ್ಚ ಸುದೀಪ್​ ಎದುರೇ ಉತ್ತರಿಸಿದ ‘ಕನ್ನಡತಿ’ ಕಿರಣ್​ ರಾಜ್​

ಕಿರಣ್​ ರಾಜ್​ ಬಿಗ್​ ಬಾಸ್​ ಮಿನಿ ಸೀಸನ್​ಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಅವರಿಗೆ ಹೊಂದಿಕೊಳ್ಳೋದು ಕೊಂಚ ಕಷ್ಟವಾಯಿತಾದರೂ ನಂತರ ಎಲ್ಲರ ಜತೆ ಬೆರೆತರು.

ಅವಮಾನ ಮಾಡಿದವರಿಗೆ ಕಿಚ್ಚ ಸುದೀಪ್​ ಎದುರೇ ಉತ್ತರಿಸಿದ ‘ಕನ್ನಡತಿ’ ಕಿರಣ್​ ರಾಜ್​
ಅವಮಾನ ಮಾಡಿದವರಿಗೆ ಕಿಚ್ಚ ಸುದೀಪ್​ ಎದುರೇ ಉತ್ತರಿಸಿದ ‘ಕನ್ನಡತಿ’ ಕಿರಣ್​ ರಾಜ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 06, 2021 | 9:52 PM

ಕಿರಣ್​ ರಾಜ್ ಆ್ಯಟಿಟ್ಯೂಡ್​ ಸಾಕಷ್ಟು ಜನರಿಗೆ ಇಷ್ಟವಾಗುತ್ತದೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ನಟನೆ ಮಾತ್ರವಲ್ಲದೆ, ಸಾಮಾಜಿಕ ಕೆಲಸಗಳ ಮೂಲಕವೂ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಾಗಂತ ಅವರ ಜೀವನ ಸುಲಭವಾಗಿರಲಿಲ್ಲ. ಆರಂಭದಲ್ಲಿ ತುಂಬಾನೇ ಕಷ್ಟಪಟ್ಟು ನಟನೆ ಕ್ಷೇತ್ರಕ್ಕೆ ಬಂದ ಅವರು, ಈಗ ಕಿರುತೆರೆ ಹಾಗೂ ಹಿರಿತೆರೆ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಆರಂಭದ ದಿನಗಳಲ್ಲಿ ಕಿರಣ್​ ರಾಜ್​ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು. ಇದಕ್ಕೆ ಅವರು ಈಗ ಉತ್ತರಿಸಿದ್ದಾರೆ.

ಕಿರಣ್​ ರಾಜ್​ ಬಿಗ್​ ಬಾಸ್​ ಮಿನಿ ಸೀಸನ್​ಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಅವರಿಗೆ ಹೊಂದಿಕೊಳ್ಳೋದು ಕೊಂಚ ಕಷ್ಟವಾಯಿತಾದರೂ ನಂತರ ಎಲ್ಲರ ಜತೆ ಬೆರೆತರು. ಕೊನೆಯ ದಿನ ಅವರು ಕೆಲ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡರು. ಈ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಅಲ್ಲದೆ ಹಳೆಯ ಘಟನೆ ನೆನೆದು ಅವರು ಭಾವುಕರಾದರು.

ಬಿಗ್​ ಬಾಸ್​ ಮಿನಿ ಸೀಸನ್​ ಪೂರ್ಣಗೊಂಡಿದೆ. ಕೊನೆಯ ದಿನ ಸುದೀಪ್​ ಅವರು ಬಿಗ್​ ಬಾಸ್​ ನಿರೂಪಣೆ ಮಾಡಿದ್ದಾರೆ. ಈ ವೇಳೆ ವಿವಿಧ ಪ್ರಶಸ್ತಿಗಳನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ‘ಸ್ಟೈಲಿಶ್​ ಹುಡುಗ’ ಪ್ರಶಸ್ತಿಯನ್ನು ಸುದೀಪ್​ ಘೋಷಣೆ ಮಾಡಿದರು. ಈ ಪ್ರಶಸ್ತಿ ಕಿರಣ್ ರಾಜ್​ಗೆ ಒಲಿದಿದೆ. ಅವರು ವೇದಿಕೆ ಮೇಲೆ ಬಂದು ಈ ಪ್ರಶಸ್ತಿ ಸ್ವೀಕರಿಸಿದರು.

‘ಈ ಬಗ್ಗೆ ಏನಾದರೂ ಹೇಳೋದು ಇದೆಯೇ’ ಎಂದು ಸುದೀಪ್​ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಕಿರಣ್​ ರಾಜ್​, ‘ಕಾಲೇಜಿನಲ್ಲಿ ಒಂದು ಸಲ ಆದ ಘಟನೆ ನೆನಪಿಗೆ ಬರುತ್ತದೆ. ನನಗೆ ಡ್ರೆಸ್​ ಸರಿಯಾಗಿ ಹಾಕೋಕೆ ಬರಲ್ಲ ಎಂದು ನನ್ನ ಗೆಳೆಯರು ನನ್ನನ್ನು ಅವಾಯ್ಡ್​ ಮಾಡ್ತಾ ಇದ್ರು. ಡ್ರೆಸ್​ ಬಗ್ಗೆ ನಂಗೆ ಗೊತ್ತಿರಲಿಲ್ಲ. ಆಗ ತುಂಬಾ ಅವಮಾನಗಳನ್ನು ನೋಡಿದ್ದೇನೆ. ಪ್ರತಿಯೊಂದಕ್ಕೂ ಉತ್ತರ ಇರುತ್ತದೆ. ಬಹುಶಃ ಅಂದಿನ ಘಟನೆಗೆ ಇದು ಉತ್ತರ’ ಎಂದರು.

ಇದನ್ನೂ ಓದಿ: ‘ನಾನು ಎಷ್ಟು ಟೇಕ್​ ತೆಗೆದುಕೊಳ್ತೀನಿ ಅಂತ ಬೆಟ್​ ಕಟ್ಟುತ್ತಿದ್ದರು’; ಅವಮಾನದ ಹಾದಿ ನೆನೆದ ಕಿರಣ್​ ರಾಜ್

Kiran Raj: ಕೊರೊನಾ ಸಂಕಷ್ಟದಲ್ಲಿ ಪ್ರತಿದಿನ ಸಾವಿರ ಜನರಿಗೆ ಊಟ ಹಾಕುತ್ತಿರುವ ‘ಕನ್ನಡತಿ’ ಕಿರಣ್ ರಾಜ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ