ಸೂರ್ಯಕಾಂತ್ ಅಂತಹ ಗಾಯಕರು ನಮ್ಮ ಕಾರ್ಯಕ್ರಮಕ್ಕೆ ಸ್ಫೂರ್ತಿ; ಮೆಚ್ಚುಗೆಯ ಮಾತುಗಳನ್ನಾಡಿದ ರಾಜೇಶ್ ಕೃಷ್ಣನ್
ಪ್ರಸ್ತುತ ಕನ್ನಡದ ರಿಯಾಲಿಟಿ ಶೋಗಳಲ್ಲಿ ಗಮನ ಸೆಳೆಯುತ್ತಿರುವ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ತೀರ್ಪುಗಾರರಾದ ರಾಜೇಶ್ ಕೃಷ್ಣನ್ ಟಿವಿ9ನೊಂದಿಗೆ ಮಾತನಾಡಿದ್ದಾರೆ. ಸ್ಪರ್ಧೆಯಲ್ಲಿ ಗಮನ ಸೆಳೆದಿರುವ ಸೂರ್ಯಕಾಂತ್ ತರಹದ ಪ್ರತಿಭೆ ಕಾರ್ಯಕ್ರಮಕ್ಕೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ.
‘ಎಎ ತುಂಬಿ ಹಾಡುವೆನು’ ಕಾರ್ಯಕ್ರಮ ಹಲವು ಸ್ಮರಣೀಯ ಅನುಭವಗಳನ್ನು ವೀಕ್ಷಕರಿಗೆ ನೀಡುತ್ತಿದೆ. ಈ ಕುರಿತು ಟಿವಿ9ನೊಂದಿಗೆ ಮಾತನಾಡುತ್ತಾ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನದ ಸಂದರ್ಭದಲ್ಲಿ ಹೇಳಿದ ಹಾಡುಗಳ ಘಟನೆಯ ಹಿನ್ನೆಲೆಯನ್ನೂ ರಾಜೇಶ್ ಮೆಲುಕು ಹಾಕಿಕೊಂಡಿದ್ದಾರೆ. ಪ್ರಸ್ತುತ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಗಮನ ಸೆಳೆದಿರುವ ಸ್ಪರ್ಧಿ ಸೂರ್ಯಕಾಂತ್ ಕುರಿತೂ ರಾಜೇಶ್ ಕೃಷ್ಣನ್ ಮಾತನಾಡಿದ್ದಾರೆ. ಜೊತೆಗೆ ಅವರನ್ನು ಉದಾಹರಿಸುತ್ತಾ, ರಿಯಾಲಿಟಿ ಶೋ ಕಾರ್ಯಕ್ರಮಗಳ ಉದ್ದೇಶಗಳನ್ನೂ ತೆರೆದಿಟ್ಟಿದ್ದಾರೆ. ವಿಡಿಯೊ ನೋಡಿ.
ಇದನ್ನೂ ಓದಿ:
‘ಕೂಲಿನಾಲಿ ಮಾಡಿ ತಾಯಿಯೇ ನನ್ನನ್ನು ಸಾಕಿದ್ದು’; ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಕಣ್ಣೀರಿಟ್ಟ ಸೂರ್ಯಕಾಂತ್
ಪತಿಯ ಅಗಲುವಿಕೆಯಿಂದ ಚೇತರಿಸಿಕೊಂಡು ಮತ್ತೆ ಜಿಮ್ ಕಡೆ ಮುಖಮಾಡಿದ ಖ್ಯಾತ ನಟಿ; ಸ್ವಾಗತಿಸಿದ ಅಭಿಮಾನಿಗಳು
(One of the Ede Tumbi Haduvenu judge Rajesh Krishnan praises Suryakanth)