AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಶೀರ್ ಅಮಾಯಕರ ಮೇಲೆ ಪಾಕಿಸ್ತಾನದ ವಾಯುದಳದಿಂದ ಬಾಂಬ್ ದಾಳಿ, ಹಲವರು ಸತ್ತಿರುವ ಶಂಕೆ

ಪಂಜಶೀರ್ ಅಮಾಯಕರ ಮೇಲೆ ಪಾಕಿಸ್ತಾನದ ವಾಯುದಳದಿಂದ ಬಾಂಬ್ ದಾಳಿ, ಹಲವರು ಸತ್ತಿರುವ ಶಂಕೆ

TV9 Web
| Edited By: |

Updated on: Sep 07, 2021 | 10:08 PM

Share

ಪಾಕಿಸ್ತಾನದ ವಾಯುಸೇನೆ ಡ್ರೋಣ್​ಗಳ ಮೂಲಕ ತಾಲಿಬಾನಿಗಳ ಜೊತೆ ಸೇರಿ ಪಂಜ್ಶೀರ್ ಪ್ರಾಂತ್ಯದ ಯೋಧರ ಮೇಲಲ್ಲ, ಅಮಾಯಕ ಜನರ ಮೇಲೆ ಬಾಂಬ್ ದಾಳಿ ನಡೆಸಿದೆ

ಪೆದ್ದು ಪಾಕಿಸ್ತಾನಿಗಳಿಗೆ ತಾಲಿಬಾನ್ ಒಂದಿಗೆ ಸಖ್ಯ ಮತ್ತು ಸ್ನೇಹ ಬೇಕಿದೆ. ಭಾರತದಲ್ಲಿ ಹೆಚ್ಚು ಕಡಿಮೆ ನಿಂತೇ ಹೋಗಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತೆ ಚಿಗಿತುಕೊಳ್ಳುವಂತೆ ಮಾಡಲು ಅದಕ್ಕೆ ತಾಲಿಬಾನಿಗಳ ಸಹಾಯ ಬೇಕು. ತನ್ನ ದೇಶದ ನಿರುದ್ಯೋಗಿ ಯುವಕರಿಗೆ ಅದು ತಾಲಿಬಾನಿ ಉಗ್ರರಿಂದ ತರಬೇತಿ ಪಡೆಯಲು ಕಳಿಸುತ್ತಿದೆ. ಪಾಕ್ನಿಂದ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಬಾಚಿಕೊಳ್ಳುವ ತಾಲಿಬಾನಿ ಉಗ್ರರು ಅದಕ್ಕೆ ಬದಲಾಗಿ ಯುವಕರನ್ನು ಟ್ರೇನ್ ಮಾಡುತ್ತಿದ್ದಾರೆ. ಅಮೇರಿಕದಿಂದ ಪದೇಪದೆ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನಕ್ಕೆ ಚೀನಾ ಯಾವತ್ತೂ ಸ್ನೇಹಿತನಲ್ಲ. ವೈರಿಯ ವೈರಿ ಸ್ನೇಹಿತ ಅಂತ ಹೇಳುತ್ತಾರಲ್ಲ, ಹಾಗೆ ಭಾರತದೊಂದಿಗೆ ನಿರಂತರ ತಗಾದೆ ಹೊಂದಿರುವ ಚೀನಾ ಮತ್ತು ಅಮೆರಿಕ ತಾವಿಬ್ಬರೂ ಭಾರಿ ದೋಸ್ತಿಗಳೆಂಬಂತೆ ಪೋಸ್ ನೀಡುತ್ತವೆ.

ಯಾವುದೋ ಒಂದು ಹಿಂದಿ ಸಿನಿಮಾದಲ್ಲಿ ನಾನಾ ಪಾಟೇಕರ್ ಹೇಳುತ್ತಾರಲ್ಲ-ಒಂದು ಸೂಜಿ ಉತ್ಪಾದಿಸುವ ಯೋಗ್ಯತೆ ಇಲ್ಲದ ಪಾಕಿಸ್ತಾನ ನ್ಯೂಕ್ಲಿಯರ್ ಬಾಂಬ್ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಪಾಕಿಸ್ತಾನದ ಈ ಅಯೋಗ್ಯತೆಯನ್ನೇ ಮೊದಲ ಅಮೇರಿಕ ಈಗ ಚೀನಾ ಬಂಡವಾಳವಾಗಿಸಿಕೊಂಡು ಶಸ್ತ್ರಾಸ್ತ್ರಗಳನ್ನು ಮಾರುತ್ತಿವೆ.

ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಪಾಕಿಸ್ತಾನದ ವಾಯುಸೇನೆ ಡ್ರೋಣ್​ಗಳ ಮೂಲಕ ತಾಲಿಬಾನಿಗಳ ಜೊತೆ ಸೇರಿ ಪಂಜ್ಶೀರ್ ಪ್ರಾಂತ್ಯದ ಯೋಧರ ಮೇಲಲ್ಲ, ಅಮಾಯಕ ಜನರ ಮೇಲೆ ಬಾಂಬ್ ದಾಳಿ ನಡೆಸಿದೆ. ಪಂಜಶೀರ್ ಜನ ಇದನ್ನು ನಿರೀಕ್ಷಿಸಿರಲಿಲ್ಲ. ಇದೇನಿದ್ದರೂ ಅವರ ಆಂತರಿಕ ವಿಷಯವಾಗಿದೆ. ಪಾಕಿಸ್ತಾನ ಹಸ್ತಕ್ಷೇಪ ನಡೆಸುತ್ತಿರುವುದು ಪ್ರಾಯಶ: ವಿಶ್ವಸಂಸ್ಥೆಗೆ ಕಾಣುತ್ತಿಲ್ಲ.

ಪಾಕಿಸ್ತಾನ ಬಾಂಬ್ ದಾಳಿ ಶುರುಮಾಡಿದ ನಂತರ ಅಫ್ಘಾನಿಸ್ತಾನದ ಸಂಪನ್ಗನ್ ಮಾಜಿ ಸಂಸದ ಜಿಯಾ ಅರಿಯಂಜಾದ್ ಅವರು ಪಾಕಿಸ್ತಾನದ ವಾಯುದಳ ಬಾಂಬ್ ದಾಳಿ ನಡೆಸಿರುವದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಸುಮಧುರವಾಗಿ ಹಾಡುವ ಮೂಲಕ ರಂಜಿಸಿದ ಸಂಸದ ಶಶಿ ತರೂರ್​; ವಿಡಿಯೋ ವೈರಲ್​